• Fri. Oct 11th, 2024

ಕಾಂಗ್ರೆಸ್ ಕುಮ್ಮಕ್ಕಿನಿಂದ ನನಗೆ ಜೆಡಿಎಸ್ ಅನ್ಯಾಯ ಮಾಡಿದೆ ಮನನೊಂದು ಬಿಜೆಪಿ ಸೇರುತ್ತಿದ್ದೇನೆ-ನಗರಸಭೆ ಸದಸ್ಯ ಪ್ರವೀಣ್‌ಗೌಡ

PLACE YOUR AD HERE AT LOWEST PRICE

 

ಜೆಡಿಎಸ್ ಪಕ್ಷದಿಂದ ನಗರದ ೨ ನೇ ವಾರ್ಡ್ ಗಾಂಧಿನಗರದಲ್ಲಿ ಬಹು ಮತಗಳಿಂದ ನಗರಸಭೆ ಚುನಾವಣೆಯಲ್ಲಿ ಗೆದ್ದು ಸದಸ್ಯನಾಗಿ ನಂತರ ನಗರಸಭೆ ಉಪಾದ್ಯಕ್ಷನಾಗಿ ಆಯ್ಕೆಯಾಗಿ ಇಡಿ ನಗರದ ೩೫ ವಾರ್ಡ್ಗಳಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದ್ದ ನನ್ನನ್ನು ಕಾಂಗ್ರೆಸ್‌ನ ಸದಸ್ಯ ಮುಬಾರಕ್ ಮಾತು ಕೇಳಿಕೊಂಡು ಸ್ವ-ಪಕ್ಷದವರೇ ಉಪಾದ್ಯಕ್ಷ ಸ್ಥಾನದಿಂದ ಕೆಳಗಿಳಿಸಿದರು ಇದರಿಂದ ನೊಂದು ನಾನು ಬಿಜೆಪಿ ಪಕ್ಷದತ್ತ ಒಲವು ತೋರಿಸಲು ಮುಂದಾಗಿದ್ದೇನೆ ಎಂದು ನಗರಸಭಾ ಸದಸ್ಯ ಎನ್.ಎಸ್.ಪ್ರವೀಣ್‌ಗೌಡ ತಿಳಿಸಿದರು.

ಗಾಂಧಿನಗರದಲ್ಲಿ ಸಾರ್ವಜನಿಕರ ಕುಂದು ಕೊರತೆ ಹಾಗೂ ತನ್ನ ಮುಂದಿನ ರಾಜಕೀಯ ಭವಿಷ್ಯತ್ ಕುರಿತು ಅಭಿಪ್ರಾಯ ಸಂಗ್ರಹಿಸಲು ಕರೆದಿದ್ದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನಗರಸಭೆಯಲ್ಲಿ ೨೦೧೪ ರಿಂದ ನಡೆದಿದ್ದ ಕೋಟ್ಯಾಂತರ ರೂಪಾಯಿ ಭ್ರಷ್ಠಾಚಾರ ಮತ್ತು ದುರುಪಯೋಗದ ಬಗ್ಗೆ ದ್ವನಿ ಎತ್ತಿದ ಕಾರಣ ನನ್ನ ಮೇಲೆ ಸದಸ್ಯರು ಹಗೆ ಸಾಧಿಸಲು ಶುರುವಾಗಿ ನನ್ನನ್ನು ಕೆಳಗಿಳಿಸಿದರು. ಕೋಲಾರ ನಗರಸಭೆಯಲ್ಲಿ ಭ್ರಷ್ಠಾಚಾರ ತಾಂಡವಾಡುತ್ತಿದೆ, ಅಧಿಕಾರಿಗಳು ಶಾಮಿಲಾಗಿ ಕೆಲವು ಸದ್ಯಸರೊಡನೆ ಕೋಟ್ಯಾಂತರ ರೂಪಾಯಿ ಸರ್ಕಾರಕ್ಕೆ ನಷ್ಟ ಉಂಟು ಮಾಡಿದ್ದಾರೆ. ಇದಕ್ಕೆ ಉದಾಹರಣೆ ಮಹಿಳಾ ಸಮಾಜ ಶಾಲೆಯ ಮೇಲೆ ನಾನು ಮತ್ತು ಮುರಳಿಗೌಡ ನಡೆಸಿದ ಹೋರಾಟಗಳೇ ಸಾಕ್ಷಿ ಎಂದರು.

ನಗರಸಭೆ ಉಪಾದ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ಹುನ್ನಾರವನ್ನು ಸ್ವತ: ಜೆಡಿಎಸ್ ಪಕ್ಷ ಅಧ್ಯಕ್ಷರೊಡನೆ ಕೊಡಿ ನನಗೆ ದ್ರೋಹ ಬಗೆದರು ನಾನು ಅಧ್ಯಕ್ಷರು, ಸ್ಥಾಯಿ ಸಮಿತಿ ಸ್ಥಾನಕ್ಕೆ ತನ್ನ ಶಕ್ತಿ ಮೀರಿ ಸಹಕರಿಸಿದ್ದು, ಈ ವಿಷಯವಾಗಿ ಕುಮಾರಸ್ವಾಮಿ ರವರು ೨ ಬಾರಿ ನನ್ನನ್ನು ಕರೆದು ಮಾತನಾಡಿ ಕೈ ಬಿಡುವಂತೆ ಹೇಳಿದರು. ನ್ಯಾಯದ ಪರವಾಗಿ ಹಾಗೂ ನಗರದ ಅಭಿವೃದ್ದಿಯ ಪರವಾಗಿ ಕೆಲಸ ಮಾಡುತ್ತಿದ್ದ ನನಗೆ ಉಪಾದ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಬೇಕಾಗಿದ್ದು ೨ ಮತಗಳು ಮಾತ್ರ ಆದರೆ ಸ್ಥಳೀಯ ಎಂಎಲ್‌ಸಿ ಗೋವಿಂದರಾಜು ಮತ್ತು ಶಾಸಕ ಶ್ರೀನಿವಾಸಗೌಡ ರವರು ನನನ್ನು ಬೆಂಬಲಿಸದೇ ಇದ್ದುದ್ದು ಜೆಡಿಎಸ್ ಪಕ್ಷದ ಮೇಲೆ ಬೇಸರ ತಂದಿದೆ ಎಂದರು.

ನಗರಸಭೆ ಸದಸ್ಯನಾಗಿ ಗಾಂಧಿನಗರದ ಅಭಿವೃದ್ದಿ ಕಳೆದ ಮೂರು ವರ್ಷದ ಅವಧಿಯಲ್ಲಿ ಸದಸ್ಯನಾಗಿ ೨ ನೇ ವಾರ್ಡ್ ಗಾಂದಿನಗರದಲ್ಲಿ ರಸ್ತೆಗಳ ಅಭಿವೃದ್ದಿ, ಚರಂಡಿಗಳ ಸ್ವಚ್ಚತೆ, ಬೀದಿ ದೀಪಗಳ ಅಳವಡಿಕೆ, ಸ್ಮಶಾನ ಅಭಿವೃದ್ದಿ ಮಾಡುವುದರ ಜೊತೆಗೆ ದೇವತಾ ಕಾರ್ಯಗಳಲ್ಲಿ ಸಹ ತೊಡಗಿಸಿಕೊಂಡಿದ್ದೇನೆ. ಮುಂದಿನ ಎರಡು ತಿಂಗಳಲ್ಲಿ ೨ ನೇ ಮತ್ತು ೪ ನೇ ಮುಖ್ಯ ರಸ್ತೆಗಳಿಗೆ ಡಾಂಬರು ಹಾಕಿಸಲಾಗುವುದು. ಸ್ಲಂ ಬೋರ್ಡ್ ವತಿಯಿಂದ ನಿರ್ಮಿಸಲಾಗಿರುವ ಮನೆಗಳಿಗೆ ಹಕ್ಕು ಪತ್ರಗಳ ವಿತರಣೆಗೆ ಸರ್ವೇ ಕಾರ್ಯ ನಡೆಯುತ್ತಿದೆ ಉಳಿದಂತೆ ಕೆಲವರು ಡಿಡಿ ಕಟ್ಟಿದ್ದು ಮನೆಗಳ ನಿರ್ಮಾಣದ ಕುರಿತು ಚರ್ಚಿಸಲಾಗಿದೆ ಎಂದರು. ವಸತಿ ರಹಿತರಿಗೆ ನಗರಸಭೆ ವತಿಯಿಂದ ಕೋಲಾರ ನಗರದ ಎಲ್ಲಾ ವಾರ್ಡ್ಗಳೆಗೆ ಸೇರಿ ಒಂದೆಡೆ ಜಮೀನು ಖರೀದಿಸಿ ಮುಂದಿನ ದಿನಗಳಲ್ಲಿ ಮನೆಗಳನ್ನು ನಿರ್ಮಿಸುವ ಬಗ್ಗೆ ನಗರಸಭೆ ತೀರ್ಮಾನಿಸುತ್ತಿದೆ ಎಂದು ಹೇಳಿದರು.

ಗಾಂಧಿನಗರದ ಸಾರ್ವಜನಿಕರಿಗೆ ಮತ್ತು ಮಕ್ಕಳಿಗೆ ಉದ್ಯಾನವನ್ನು ತನ್ನ ಅವಧಿಯಲ್ಲೇ ನಿರ್ಮಿಸಿಕೊಡುವುದಾಗಿ ಮತ್ತು ಸರ್ಕಾರಿ ಶಾಲೆ ಕಟ್ಟಡ ದುಸ್ಥಿತಿಯಲ್ಲಿದ್ದು, ಸರ್ಕಾರ ಹೊಸ ಶಾಲಾ ಕಟ್ಟಡ ನಿರ್ಮಿಸಿಕೊಟ್ಟಲ್ಲಿ ನನ್ನ ಕಡೆಯಿಂದ ಒಂದು ಕೊಠಡಿಯನ್ನು ತನ್ನ ಸ್ವಂತ ಖರ್ಚಿನಿಂದ ಕಟ್ಟಿಸಿಕೊಡುವುದಾಗಿ ಭರವಸೆ ನೀಡಿದರು.

ಸಭೆಯಲ್ಲಿ ಗಾಂಧಿನಗರದ ಮುಖಂಡರು ಹಾಗೂ ನೂರಾರು ಸಾರ್ವಜನಿಕರು ಭಾಗವಹಿಸಿದ್ದರು.

Related Post

ಗಾಂಧೀವನದಲ್ಲೇ ಕನ್ನಡ ರಾಜ್ಯೋತ್ಸವ ಅದ್ದೂರಿ ಆಚರಣೆಗೆ ಕನ್ನಡ ಪರ ಸಂಘನೆಗಳ ಒಕ್ಕೂರಲಿನ ತೀರ್ಮಾನ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ಹತ್ತು ಲಕ್ಷ ಸಸಿ ನೆಡುವ ಯೋಜನೆ : ಸಿದ್ದಗಂಗಯ್ಯ
ಗ್ರಾಮ ಪಂಚಾಯಿತಿ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ವಿವಿಧ  ನ್ಯಾಯಯುತ ಬೇಡಿಕೆಗಳನ್ನು  ಈಡೇರಿಸುವಂತೆ  ಒತ್ತಾಯಿಸಿ, ನಗರದ ಜಿಲ್ಲಾ ಪಂಚಾಯತಿ ಕಚೇರಿ ಮುಂದೆ ಜಿಲ್ಲಾ ಪಿಡಿಒ ಹಾಗೂ ಸಿಬ್ಬಂದಿಗಳ  ವೃಂದ ಸಂಘಟನೆಗಳ ವತಿಯಿಂದ ಅನಿರ್ದಿಷ್ಟವಾಧಿ ಪ್ರತಿಭಟನೆ

Leave a Reply

Your email address will not be published. Required fields are marked *

You missed

error: Content is protected !!