ಶ್ರೀನಿವಾಸಪುರ:ವಿಧಾನ ಸಭೆ ಚುನಾವಣೆಯ ದಿನಗಳು ಹತ್ತಿರವಾಗುತ್ತಿದಂತೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷಾಂತರ ಪರ್ವ ಬಹಳ ಜೋರಾಗಿಯೇ ನಡೆಯುತ್ತಿದ್ದು ಶ್ರೀನಿವಾಸಪುರ ವಿಧಾನ ಸಭಾ ಕ್ಷೇತ್ರದ ಗೌನಿಪಲ್ಲಿ ಗ್ರಾಮ ಪಂಚಾಯತಿ ಜೆಡಿಎಸ್ ಬೆಂಬಲಿತ ಇಬ್ಬರು ಸದಸ್ಯರು ಸೇರಿ, ಹಲವು ಜೆಡಿಎಸ್ ನಿಂದ ಸುಮಾರು ಕಾರ್ಯಕರ್ತರು 300ಕ್ಕೂ ಹೆಚ್ಚು ಕಾರ್ಯಕರ್ತರು ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಯಾದರು.
ರಾಹುಲ್ ಗಾಂಧಿಯವರು ಭಾರತ್ ಜೋಡೋ ಕಾರ್ಯಕ್ರಮ ಮುಕ್ತಾಯ ಗೊಳಿಸಿದ ನಂತರ ಇಂದು ಭಾರತ್ ಜೋಡೋ ಗೌನಿಪಲ್ಲಿ ಎಂಬ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು, ಚಾಮರಾಜಪೇಟೆಯ ಶಾಸಕರಾದ ಜಮೀರ್ ಅಹ್ಮದ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಗೌನಿಪಲ್ಲಿ ಗ್ರಾಮ ಪಂಚಾಯತಿ ಜೆಡಿಎಸ್ ಬೆಂಬಲಿತ ಸದಸ್ಯರಾದ ಬಕ್ಷುಸಾಬ್ ಹಾಗೂ ಖಾದರ್ ಪಾಷ ತಮ್ಮ ಬೆಂಬಲಿಗರ ಜೊತೆ ಹಾಗೂ ಇನ್ನು ಹಲವು ಗ್ರಾಮಗಳ ಜೆಡಿಎಸ್ ಪಕ್ಷದ ಕಾರ್ಯಕರ್ತರು ಸೇರು 300ಕ್ಕೂ ಅಧಿಕ ಕಾರ್ಯಕರ್ತರು ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಯಾದರು.

ಈ ವೇಳೆ ಮಾತನಾಡಿದ ಜಮೀರ್ ಅಹ್ಮದ್ ರಮೇಶ್ ಕುಮಾರ್ ಅವರನ್ನ 3 ನೇ ಬಾರಿಗೆ ಗೆಲ್ಲಿಸುವ ಮೂಲಕ ಇತಿಹಾಸ ಸೃಷ್ಟಿ ಮಾಡಬೇಕು. ರಮೇಶ್ ಕುಮಾರ್ ಹ್ಯಾಟ್ರಿಕ್ ಗೆಲುವು ಸಾಧಿಸುವ ಮೂಲಕ ಧಾಖಲೆ ಮಾಡಬೇಕೆಂದರು. ಶ್ರೀನಿವಾಸಪುರದಲ್ಲಿ ಬಿಜೆಪಿ ಇಲ್ಲ ಇಲ್ಲಿ ಏನಿದ್ರು ಜೆಡಿಎಸ್ ವಸಸ್ ಕಾಂಗ್ರೇಸ್ ಅಷ್ಟೆ. ಜೆಡಿಎಸ್ ಬಿಜೆಪಿ ಬಿ ಟೀಂ ಎಂದರು.
2008 ರಲ್ಲಿ ಜೆಡಿಎಸ್ ನಾಯಕರು ಮಾಡಿದ ತಪ್ಪಿನಿಂದ ರಾಜ್ಯದಲ್ಲಿ ಬಿಜೆಪಿ ಬರಲು ಕಾರಣವಾಯ್ತು. ಜನತಾ ದಳಕ್ಕೆ ಮತ ಕೊಟ್ರೆ ಅದು ಬಿಜೆಪಿಗೆ ಮತ ಕೊಟ್ಟಂತೆ. ಕುಮಾರಸ್ವಾಮಿ ಹೋಟೆಲ್ ನಲ್ಲಿ ಕುಳಿತು ಸರ್ಕಾರ ಬೀಳೋದಕ್ಕೆ ಕಾರಣವಾಯಿತು ಎಂದರು.
ಕಾರ್ಯಕ್ರಮದಲ್ಲಿ ಎಂ ಎಲ್ ಸಿ ಅನಿಲ್ ಕುಮಾರ್, ಕೃಷ್ಣಮೂರ್ತಿ,ನಜೀರ್ ಅಹಮದ್,ಮೇಕಲ ನಾರಾಯಣಸ್ವಾಮಿ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರು ಶ್ರೀನಿವಾಸನ್, ಕೆ ಕೆ ಮಂಜುನಾಥ್, ದಿಂಬಾಲ್ ಅಶೋಕ್, ಸಂಜಯ್ ರೆಡ್ಡಿ,ಬೇಟಪ್ಪ, ಅಕ್ಬರ್ ಷರೀಫ್, ಖಾದರ್, ಶಶಿಕುಮಾರ್, ಅಂಬರೀಷ್,ವಿ ಮುನಿಯಪ್ಪ, ಎನ್ ಮುನಿಸ್ವಾಮಿ,ಶಿವಾರೆಡ್ಡಿ, ಮುನಿರಾಜು ಇನ್ನೂ ಹಲವಾರು ಮುಖಂಡರು ಕಾರ್ಯಕ್ರಮದಲ್ಲಿ ಹಾಜರಿದ್ದರು.