PLACE YOUR AD HERE AT LOWEST PRICE
ಕೆಜಿಎಫ್:ಗ್ರಾಪಂಯ 15ನೇ ಹಣಕಾಸುಯೋಜನೆಯ ಅಡಿಯಲ್ಲಿ ಶೇ.75% ಅಂಗವಿಕಲತೆ ಇರುವ ಅಂಗವಿಕಲರನ್ನು ಗುರುತಿಸಿ ಸುಮಾರು 50 ಮಂದಿಗೆ ತಲಾ 2 ಸಾವಿರ ರೂ., ಗಳನ್ನು ಚೆಕ್ ಮೂಲಕ ವಿತರಿಸಲಾಗುತ್ತದೆ ಎಂದು ಗ್ರಾಪಂ ಅಧ್ಯಕ್ಷೆ ಮಂಜುಳ ಸೋಮನಾಥ್ ಹೇಳಿದರು.
ಕೆಜಿಎಫ್ ತಾಲ್ಲೂಕು ಕಂಗಾಡ್ಲಹಳ್ಳಿ ಗ್ರಾಪಂಯ ತಿಮ್ಮಾಪುರ ಗ್ರಾಮದಲ್ಲಿ 5 ಮಂದಿ ಅಂಗವಿಕಲರ ಮನೆಗಳಿಗೆ ಬೇಟಿ ನೀಡಿ ಚೆಕ್ ವಿತರಿಸಿ ಅವರು ಮಾತನಾಡಿ, ಅಂಗವಿಕಲರಿಗೆ 15ನೇ ಹಣಕಾಸಿನ ಅಡಿಯಲ್ಲಿ ವಿತರಿಸಲು ಸರ್ವ ಸದಸ್ಯರ, ಅಧಿಕಾರಿಗಳ ಅನುಮತಿ ಪಡೆದುಕೊಂಡು ಶೇ.3% ಅನುದಾನವನ್ನು 1 ಲಕ್ಷ ರೂ., ಮೀಸಲಿಟ್ಟಿದ್ದೇವೆ.
18 ಗ್ರಾಮಗಳ 50 ಫಲಾನುಭವಿಗಳ ಮನೆ ಬಾಗಿಲಿಗೆ ಬೇಟಿ ನೀಡಿ ವಿತರಿಸಲಾಗುತ್ತದೆ ಎಂದರು. ಸುಮಾರು 10 ವರ್ಷಗಳಿಂದ ಅಂಗವಿಕಲರನ್ನು ಗುರುತಿಸಿ ಪ್ರೋತ್ಸಾಹಿಸಿರಲಿಲ್ಲ.
ಆದರೆ ತಾವು ಅಧಿಕಾರ ವಹಿಸಿಕೊಂಡ ನಂತರ ಎಲ್ಲಾ ಕ್ಷೇತ್ರಗಳ ಅಭಿವೃಧ್ಧಿಗಾಗಿ, ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕಾಗಿಯೂ ಆರ್ಥಿಕ ನೆರವು ನೀಡಿ ಪ್ರೋತ್ಸಾಹಿಸಲಾಗುತ್ತದೆ ಎಂದರು.
ಪಿಡಿಒ ವೆಂಕಟಸ್ವಾಮಿ ಮಾತನಾಡಿ, ಮೊಟ್ಟ ಮೊದಲ ಬಾರಿಗೆ ತಿಮ್ಮಾಪುರ ಗ್ರಾಮದಲ್ಲಿ ಶೇ.75% ಅಂಗವಿಕಲತೆ ಇರುವ ಅಂಗವಿಕಲರಿಗೆ 2 ಸಾವಿರ ರೂ., ಚೆಕ್ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇವೆ. ಗ್ರಾಪಂಯ 18
ಗ್ರಾಮಗಳಿಗೂ ಬೇಟಿ ನೀಡಿ ಆರ್ಥಿಕ ನೆರವು ನೀಡುತ್ತೇವೆ ಎಂದರು.
ಇದಕ್ಕಾಗಿ 15 ಹಣಕಾಸು ಯೋಜನೆಯಲ್ಲಿ ಶೇ.3% ಅನುದಾನವನ್ನು ಪ್ರತ್ಯೇಖವಾಗಿ ಅಂಗವಿಲಕಲರ ಖಾತೆಗೆ 1 ಲಕ್ಷ ರೂ., ಮೀಸಲಿಟ್ಟು ನೀಡಲಾಗುತ್ತದೆ ಎಂದರು ಈ ಸಂದರ್ಭದಲ್ಲಿ ತಿಮ್ಮಾಪುರ ಗ್ರಾಪಂ ಸದಸ್ಯ ಟಿ.ವಿ ನಾರಾಯಣಸ್ವಾಮಿ, ಕಣ್ಣೂರು ಚಲಪತಿ, ಗೊಲ್ಲಗುರುವೇನಹಳ್ಳಿ ಸುಬ್ಬು, ಎನ್‍ಜಿಒ ಸಂಸ್ಥೆಯ ನಲಿನಿ, ಗಿರಿಜಮ್ಮ, ರೋಜಿ, ರಾಣಿ, ಗೋಪಿ, ಸ್ಥಳೀಯ ಮುಖಂಡರಾದ ಲೋಕೇಶ್, ಚಿನ್ನನಾರಾಯಣ, ಸಂತೋಶ್, ಶಂಕರಪ್ಪ,
ಸುಭ್ರಮಣಿ ಹಾಗೂ ಗ್ರಾಮಸ್ಥರು, ಅಂಗವಿಕಲರು ಉಪಸ್ಥಿತರಿದ್ದರು.