ಶ್ರೀನಿವಾಸಪುರ:ಹಾಲು ಒಕ್ಕೂಟದ ಮಾಜಿ ನಿರ್ದೇಶಕ ಬೈರೆಡ್ಡಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದಲ್ಲಿ ಕೋಲಾರ – ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಕ್ಯಾಂಪ್ ಆಫೀಸ್ ಸ್ಥಳೀಯ ಕಚೇರಿ ನಿರ್ಮಾಣ ಮಾಡಲು ನಿವೇಶನ ಖರೀದಿಯಲ್ಲಿ ಅವ್ಯವಹಾರ ನಡೆದಿದೆಯೆಂದು ಆರೋಪಿಸಿದರು.
ಹಾಲಿ ನಿರ್ದೇಶಕ ಹನುಮೇಶ್ ರವರ ವಿರುದ್ಧ ಮಾಜಿ ನಿರ್ದೇಶಕ ಪಾಳ್ಯ ಬೈರೆಡ್ಡಿ ಆರೋಪಿಸಿ, ಪಟ್ಟಣದ ಹೊರವಲಯದ ಪನಸಮಾಕನಹಳ್ಳಿ ಗ್ರಾಮದ ಬಳಿ ಒಕ್ಕೂಟದ ಹೆಸರಿನಲ್ಲಿ 10 ಎಕರೆ ಜಮೀನು ಇದ್ದು ಪಟ್ಟಣದಿಂದ ಕೇವಲ 2 ರಿಂದ 2.5 ಕಿ.ಮೀ ಅಂತರದಲ್ಲಿರುವ ಜಾಗದಲ್ಲಿ ನಿರ್ಮಾಣ ಮಾಡಬಹುದಿತ್ತು.
ಆದರೆ ಹಾಲಿ ನಿರ್ದೇಶರ ಸಂಬಂದಿಗಳು ನಿವೇಶನವನ್ನು 3040 ಅಡಿ ಖರೀದಿಸಿದ್ದು ಒಂದು ಸ್ಕೊಯರ್ ಫೀಟ್ 2200 ರೂಪಾಯಿಗೆ ನಿಗದಿ ಮಾಡಿ ಬೋರ್ಡ್ ಮೀಟಿಂಗ್ ನಲ್ಲಿ ಅನುಮೋದನೆ ಮಾಡಿಸಿದ್ದಾರೆ ಆದರೆ ಕ್ಯಾಂಪ್ ಆಫೀಸ್ ಗೆ ಖರೀದಿ ಮಾಡಿರುವ ನಿವೇಶನದ ಒಂದು ಸ್ಕೊಯರ್ ಫೀಟ್ 600ರಿಂದ 800 ರೂಪಾಯಿಗಳ ಬೆಲೆಯಿದೆ.
ನಿವೇಶನ ಖರೀದಿಯಲ್ಲಿ 30 ರಿಂದ 35 ಲಕ್ಷ ಅವ್ಯವಹಾರವಾಗಿದೆಯೆಂದು ಮಾಜಿ ಹಾಲು ಒಕ್ಕೂಟದ ನಿರ್ದೇಶಕ ಬೈರೆಡ್ಡಿ ಆರೋಪಿಸಿ ಕೂಡಲೇ ಒಕ್ಕೂಟದವರು ಹಾಗೂ ಆರ್ ಸಿ ಎಸ್ ನವರು ಕೂಡಲೇ ಪ್ರಕ್ರಿಯೆ ರದ್ದು ಮಾಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತಿ ಮಾಜಿ ಅಧ್ಯಕ್ಷರು ಬಂಡಪಲ್ಲಿ ಕೃಷ್ಣಾರೆಡ್ಡಿ, ಪುರಸಭೆ ಮಾಜಿ ಅಧ್ಯಕ್ಷರು ಎಸ್ ಶ್ರೀನಿವಾಸಪ್ಪ, ತಾಲ್ಲೂಕು ಪಂಚಾಯತಿ ಸದಸ್ಯರು ಗೊಟ್ಟಿಕುಂಟೆ ಕೃಷ್ಣಾರೆಡ್ಡಿ, ಮಂಜುನಾಥ್ ರೆಡ್ಡಿ,ಗ್ರಾಮ ಪಂಚಾಯತಿ ಸದಸ್ಯರು ನಾಗದೇನಹಲ್ಲಿ ಚೌಡರೆಡ್ಡಿ, ಮಾಜಿ ಗ್ರಾಮ ಪಂಚಾಯತಿ ಸದಸ್ಯರು ಒಬೇನಪಲ್ಲಿ ನಾರಾಯಣಸ್ವಾಮಿ ಹಾಜರಿದ್ದರು.