• Thu. Apr 25th, 2024

PLACE YOUR AD HERE AT LOWEST PRICE

ಮುಳಬಾಗಿಲು:ಚೆನ್ನೈ ಕಾರಿಡಾರ್ ರಸ್ತೆ ಅಭಿವೃದ್ಧಿಗೆ ಭೂಮಿ ಕಳೆದುಕೊಂಡಿರುವ ರೈತರ ಪಿ ನಂಬರ್  ಜಮೀನಿನ ಮರಗಳಿಗೆ ಪರಿಹಾರ ನೀಡುವಂತೆ ಫೆ.8ರಂದು ಸಂಸದರ ಕಚೇರಿ ಮುಂದೆ ಹೋರಾಟ ಮಾಡಲು ನೊಂದ ರೈತರ ಸಭೆಯಲ್ಲಿ ತೀರ್ಮಾನಿಸಲಾಯಿತು.

ಗಡಿ ಭಾಗದ ಚುಕ್ಕನಹಳ್ಳಿ, ಏತರನಹಳ್ಳಿ ಗಡಿಭಾಗದಲ್ಲಿ ಹಾದು ಹೋಗುವ ಚೆನ್ನೈ ಕಾರಿಡಾರ್  ರಸ್ತೆ ಕಾಮಗಾರಿಯ ಸ್ಥಳದಲ್ಲಿ ಮಾತನಾಡಿದ ನೊಂದ ರೈತರಾದ ಚೆಂಗೇಗೌಡ ಮತ್ತು ಜನಾರ್ಧನ್, 4 ವರ್ಷಗಳ ಹಿಂದೆ ವಿಶೇಷ ಭೂಸ್ವಾಧೀನಾಧಿಕಾರಿಗಳು ನಿಮ್ಮ ಕೃಷಿ ಜಮೀನನ್ನು ರಸ್ತೆ ಅಭಿವೃದ್ಧಿಗೆ ವಶಪಡಿಸಿಕೊಂಡರು.

ನಿಮಗೆ ಸರ್ಕಾರದಿಂದ ಊಹೆ ಮಾಡಲೂ ಸಾಧ್ಯವಿಲ್ಲದಷ್ಟು ಪರಿಹಾರ ಕೊಡುತ್ತೇವೆಂದು ನಂಬಿಸಿ ಮೋಸ ಮಾಡಿರುವ ವಿಶೇಷ ಭೂಸ್ವಾಧೀನಾಧಿಕಾರಿಗಳು ಕಡೆಯದಾಗಿ ಪ್ರತಿ ಎಕರೆಗೆ 3.80 ಲಕ್ಷ ಪರಿಹಾರ ನೀಡುವ ಮುಖಾಂತರ ಅತಿ ಕಡಿಮೆ ಪರಿಹಾರ ನೀಡಿ ಗಡಿಭಾಗದ ರೈತರನ್ನು ವಂಚನೆ ಮಾಡಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು.

ಭೂಮಿ ಕಳೆದುಕೊಂಡ ರೈತರು ರಸ್ತೆ ಅಭಿವೃದ್ಧಿಗೆ ಯಾವುದೇ ತರಕಾರು ಮಾಡಲಿಲ್ಲ. ಆದರೆ, ನೂರಾರು ವರ್ಷಗಳಿಂದ ಅದೇ ಜಮೀನಿನಲ್ಲಿ ಮನೆ ಮಕ್ಕಳಂತೆ ಸಾಕಿ ಸಲುಹಿದ್ದ ಮಾವು, ತೆಂಗು, ಹುಣಸೆ, ಸೇಬು ಮತ್ತಿತರರ ಮರಗಿಡಗಳನ್ನು ಕಡಿಯುವ ಮುಂಚೆ ತೋಟಗಾರಿಕಾ  ಅಧಿಕಾರಿಗಳಿಂದ ವರದಿಯನ್ನು ತರಿಸಿಕೊಂಡಿದ್ದೇವೆ.

ನಿಮಗೆ ಪರಿಹಾರ ನೀಡುತ್ತೇವೆಂದು ರೈತರನ್ನು ಮತ್ತೆ ನಂಬಿಸಿ ಮರಗಿಡಗಳನ್ನು ಮಾರಾಟ ಮಾಡಲು ಬಿಡದೆ ಜೆಸಿಬಿಗಳ ಮುಖಾಂತರ ಹಾಳು ಮಾಡಿ ಪರಿಹಾರ ಕೇಳಿದರೆ ಪಿ ನಂಬರ್ ದುರಸ್ಥಿಯಾಗದೆ ಯಾವುದೇ ಪರಿಹಾರ ಮರಗಿಡಗಳಿಗೆ ಸಿಗುವುದಿಲ್ಲ ಎಂದು ಅಧಿಕಾರಿಗಳು ರೈತರ ಹೆಸರಿನಲ್ಲಿ ಪರಿಹಾರವನ್ನು ಲೂಟಿ ಮಾಡುತ್ತಿದ್ದಾರೆ ಎಂದು ಆರೋಪ  ಮಾಡಿದರು.

ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಜಿಲ್ಲೆಯ ಸಂಸದರಾದಂತಹ ಎಸ್.ಮುನಿಸ್ವಾಮಿ ಅವರ ಗಮನಕ್ಕೆ ನೊಂದ ರೈತರ ಸಮಸ್ಯೆ ತರಲು ಫೆ.8ರ ಬುಧವಾರ ನಷ್ಟ  ಬೆಳೆ ಸಮೇತ ಕಚೇರಿ ಮುತ್ತಿಗೆ ಹಾಕುವ ಮೂಲಕ ಕೊನೆಯ ಹಂತದ ಪರಿಹಾರಕ್ಕಾಗಿ ಹೋರಾಟ ಮಾಡುವ ನಿರ್ಧಾರ ಕೈಗೊಳ್ಳಲಾಯಿತು ಎಂದರು.

ನಮ್ಮ ಪರಿಹಾರ ಕೊಡಿ ಇಲ್ಲವೇ ನಮ್ಮ ಭೂಮಿ ವಾಪಸ್ ಕೊಡಿ ಅಲ್ಲಿಯವರೆಗೂ ಯಾವುದೇ ಕಾರಣಕ್ಕೂ ಕಾಮಗಾರಿ ಮುಂದುವರೆಸಲು ಬಿಡುವುದಿಲ್ಲ. ಒಂದು ವೇಳೆ ಬಲವಂತವಾಗಿ ಕಾಮಗಾರಿ ಮುಂದುವರೆಸಲು ಪ್ರಯತ್ನ ಪಟ್ಟರೆ ಆಗ ಆಗುವ ಅನಾಹುತಗಳಿಗೆ ವಿಶೇಷ ಭೂಸ್ವಾಧೀನಾಧಿಕಾರಿಗಳೇ ನೇರ ಕಾರಣರಾಗುತ್ತಾರೆ ಎಂದು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ರಾಮೇಗೌಡ, ರಾಜಣ್ಣ, ವಿಶ್ವನಾಥ್, ಕುಮಾರ್, ಜಗದೀಶ್, ವೆಂಕಟರವಣಪ್ಪ, ವೆಂಕಟೇಶ್, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ತಾಲೂಕು ಪ್ರಧಾನ ಕಾರ್ಯದರ್ಶಿ ಬಾಬು, ಜಿಲ್ಲಾ ಪ್ರ.ಕಾ. ವಿಜಯ್‍ಪಾಲ್, ಸುನೀಲ್‍ಕುಮಾರ್, ಭಾಸ್ಕರ್, ಜುಬೇರ್‍ಪಾಷ, ಆದಿಲ್‍ಪಾಷ, ವಿಶ್ವ, ಗುರುಮೂರ್ತಿ, ಪದ್ಮಘಟ್ಟ ಧರ್ಮ, ನಂಗಲಿ ನಾಗೇಶ್, ಹೆಬ್ಬಣಿ ಆನಂದರೆಡ್ಡಿ, ಯಾರಂಘಟ್ಟ ಗಿರೀಶ್, ಸಂದೀಪ್‍ರೆಡ್ಡಿ, ಸಂದೀಪ್‍ಗೌಡ, ವೇಣು, ಕಿರಣ್, ಸುರೇಶ್‍ಬಾಬು ಮುಂತಾದವರಿದ್ದರು.

 

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!