• Tue. Apr 23rd, 2024

ಕೋಲಾರ I ಮನೆಯಲ್ಲಿ ಸಿಗುವ ಆಹಾರ ಸೇವನೆಯಿಂದಲೇ ಮಕ್ಕಳ ವಿಕಾಸ ಸಾಧ್ಯ : ಗ್ರಾಮವಿಕಾಸ ಎಂ.ವಿ.ಎನ್.ರಾವ್

PLACE YOUR AD HERE AT LOWEST PRICE

ಮಕ್ಕಳ ಹಕ್ಕುಗಳನ್ನು ಅರ್ಥ ಮಾಡಿಕೊಂಡು ರಕ್ಷಣೆ, ವಿಕಾಸ, ಭಾಗವಹಿಸುವಿಕೆ ಮತ್ತು ಬದುಕು ಹಕ್ಕುಗಳನ್ನು ನಮ್ಮ ಜೀವನದಲ್ಲಿ ಆಳವಡಿಸಿಕೊಳ್ಳಬೇಕು. ಮನೆಯಲ್ಲಿ ಸೀಗುವ ಆಹಾರ ಸೇವನೆಯಿಂದಲೇ ಮಕ್ಕಳ ವಿಕಾಸ ಸಾಧ್ಯ ಎಂದು ಗ್ರಾಮವಿಕಾಸ ಸಂಸ್ಥೆಯ ಎಂ.ವಿ.ಎನ್.ರಾವ್ ತಿಳಿಸಿದರು.

ಯಂಗ್ ಇಂಡಿಯಾ ಡೆವಲಪ್ಮೆಂಟ್ ಸೊಸೈಟಿ, ಕ್ಯಾನ್ ನೆಟ್ವರ್ಕ್, ರೋಟರಿ ಲೇಕ್ ಸೈಡ್,ಕೋಲಾರ ಮತ್ತು ಗ್ರಾಮವಿಕಾಸ ಸಂಯುಕ್ತಾಶ್ರದಲ್ಲಿ ಮಕ್ಕಳ ಹಕ್ಕುಗಳು ಮತ್ತು ಪೌಷ್ಟಿಕಾಹಾರ ಅಳವಡಿಕೆ ಬಗ್ಗೆ ವಿಚಾರ ಸಂಕಿರಣ ಮತ್ತು ಹಾರ್ಲಿಕ್ಸಿ ಪ್ಯಾಕ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕೆಂಪು, ಬಿಳಿ ಕಡು ಹಸಿರು, ಕಿತ್ತಳೆ ಬಣ್ಣದ ತರಕಾರಿ ಮತ್ತು ನಿಮಗಿ?ವಾದ ಹಣ್ಣುಗಳನ್ನು ಸೇವಿಸಿ. ಬಣ್ಣದ ತರಕಾರಿಗಳು ಹೆಚ್ಚು ವಿಟಮಿನ್, ಖನಿಜಾಂಶ ಮತ್ತು ಫೈಬರ್ ಅಂಶ ಹೊಂದಿದ್ದು ಆರೋಗ್ಯಕ್ಕೆ ಅಗತ್ಯವಿರುವ? ಪೋಷಕಾಂಶಗಳನ್ನು ಒದಗಿಸುತ್ತವೆ. ವಿಟಮಿನ್ ಎ (ಕ್ಯಾರೆಟ್, ಕೋಸುಗೆಡ್ಡೆ, ಪಾಲಕ್, ನುಗ್ಗೆಕಾಯಿ ಸೊಪ್ಪು, ಕೆಂಪು ಬೆಲ್ ಪೆಪ್ಪರ್, ಕಲ್ಲಂಗಡಿ ಹಣ್ಣು, ಚೀಸ್ ಇತ್ಯಾದಿ), ವಿಟಮಿನ್ ಸಿ (ಸಿಟ್ರಸ್ ಅಂಶವಿರುವ ಕಿತ್ತಳೆ, ದ್ರಾಕ್ಷಿ, ಕಿವಿ, ಅನಾನಸ್, ಪೇರಲ, ನುಗ್ಗೆಕಾಯಿ, ಎಲೆಗಳು, ಟೊಮೆಟೊ ಇತ್ಯಾದಿ), ವಿಟಮಿನ್ ಡಿ (ಸ್ಯಾಮನ್ ಮೀನು, ಸಾರ್ಡೈನ್ಸ್, ಫ್ರೆಶ್ ಟ್ಯೂನಾ, ಫೋರ್ಟಿಫೈಡ್ ಮಿಲ್ಕ್), ವಿಟಮಿನ್ ಇ (ಬಸಳೆ, ಸೂರ್ಯಕಾಂತಿ ಬೀಜ, ಬಾದಾಮಿ, ಶೇಂಗಾ, ಅಡುಗೆ ಎಣ್ಣೆ) ಮತ್ತು ಬಿ ಗ್ರೂಪ್‌ನ ವಿಟಮಿನ್‌ಗಳು (ಹಾಲು, ಮೊಸರು, ಬೀನ್ಸ್, ಬೀಜ, ಅಕ್ರೂಟು, ಬಾಳೆಹಣ್ಣು).ನಮ್ಮ ಸ್ಥಳೀಯವಾಗಿ ಸಿಗುವುದನ್ನು ತಿನ್ನಬೇಕೆಂದು ಮಕ್ಕಳ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಕ್ಯಾನ್ ನೆಟ್ವರ್ಕ್ ಅಧ್ಯಕ್ಷರಾದ ಮಲ್ಲಮ್ಮ, ನಾಗವೇಣಿ ಶಾಲಾ ಮುಖ್ಯೋಪಾಧ್ಯಾಯರಾದ ಕಾಳಚಾರಿ,ಹೂಹಳ್ಳಿ ನಾಗರಾಜ್, ಕಿರಣ್ ಭಾಗವಹಿಸಿದರು.

ಸುದ್ದಿ ಓದಿ ಹಂಚಿ: 

Related Post

ಬಲಗೈ ಸಮುದಾಯದ ಬಹುಸಂಖ್ಯಾತ ಚಿಕ್ಕತಾಳಿ ಸಮಾಜವನ್ನು ಕಾಂಗ್ರೆಸ್ ಅಭ್ಯರ್ಥಿ ನಿರ್ಲಕ್ಷ್ಯ ಮಾಡಿದ್ದಾರೆ : ಸಮುದಾಯ ಮುಖಂಡರ ಆರೋಪ
ಕೆ.ಹೆಚ್.ಮುನಿಯಪ್ಪ ಬಲಗೈಭಂಟ ಜಿಪಂ ಮಾಜಿ ಸದಸ್ಯ ಎಂ.ರಾಮಚ0ದ್ರ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆ
ಕೋಲಾರ ಮೀಸಲು ಕ್ಷೇತ್ರವನ್ನು ಸಾಮಾನ್ಯ ಕ್ಷೇತ್ರ ಮಾಡುತ್ತೇನೆ ಎಂದ ವರ್ತೂರು ಪ್ರಕಾಶ್ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು – ದಲಿತ್ ನಾರಾಯಣಸ್ವಾಮಿ ಅಕ್ರೋಶ

Leave a Reply

Your email address will not be published. Required fields are marked *

You missed

error: Content is protected !!