• Fri. Mar 1st, 2024

ಕರ್ನಾಟಕ ಸರ್ಕಾರ ಪಿಟಿಸಿಎಲ್ ಕಾಯ್ದೆ ಯತಾವತ್ ಜಾರಿಗೆ ಸುಗ್ರೀವಾಜ್ಞೆ ಹೊರಡಿಸಲಿ – ಹೂಹಳ್ಳಿ ಪ್ರಕಾಶ್ ಆಗ್ರಹ

PLACE YOUR AD HERE AT LOWEST PRICE

ಸರ್ಕಾರ ಪಿಟಿಸಿಎಲ್ ಕಾಯ್ದೆ ಯತಾವತ್ ಜಾರಿಗೆ ಸುಗ್ರೀವಾಜ್ಞೆ ಹೊರಡಿಸಲಿ:

ಶೋಷಿತ ಸಮುದಾಯಗಳಲ್ಲಿ ಆರ್ಥಿಕ ಚೈತನ್ಯ ತುಂಬುವ ನಿಟ್ಟಿನಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ್ ಅರಸ್ ತಂದ ಪಿಟಿಸಿಎಲ್ ಕಾಯ್ದೆಯನ್ನು ಕರ್ನಾಟಕದ ಬಿಜೆಪಿ ಸರ್ಕಾರ, ಸುಪ್ರೀಂ ಕೋರ್ಟ್ನ ಒಂದು ಪ್ರಕರಣದ ಆದೇಶವನ್ನು ಮುಂದಿಟ್ಟುಕೊಂಡು ದಲಿತರಿಗೆ ಅನ್ಯಾಯ ಮಾಡುತ್ತಿದೆ. ರಾಜ್ಯ ಸರ್ಕಾರ ಪಿಟಿಸಿಎಲ್ ಕಾಯ್ದೆ ಯತಾವತ್ ಜಾರಿಗೆ ಸುಗ್ರೀವಾಜ್ಞೆ ಹೊರಡಿಸಬೇಕೆಂದು ಕರ್ನಾಟಕ ದಲಿತ ಸಿಂಹ ಸೇನೆ ರಾಜ್ಯಾಧ್ಯಕ್ಷ ಹೂಹಳ್ಳಿ ಪ್ರಕಾಶ್ ಆಗ್ರಹಿಸಿದರು.

ಮಂಗಳವಾರ ಪತ್ರಕರ್ತರ ಭವನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು. ೨೦೧೭ರಲ್ಲಿ ನೆಕ್ಕಟ ರಾಮಲಕ್ಷ್ಮಿ ವರ್ಸಸ್ ಕರ್ನಾಟಕ ಸರ್ಕಾರ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಕಾಲಮಿತಿಗೊಳಿಸಿರುವುದು ಸಂವಿಧಾನಬದ್ದವಾಗಿದೆ ಎಂದು ಬಿಜೆಪಿ ಸರ್ಕಾರ ಹೇಳುತ್ತಿದೆ. ಇದು ಕಾಯ್ದೆಯ ಕಾಲಂ ೧೧ರಲ್ಲಿ ಹಾಗೂ ಕಾಲಂ ೫ಕ್ಕೆ ವಿರುದ್ಧವಾಗಿದ್ದು, ಈಗಿನ ಎಸಿ/ಡಿಸಿ ನ್ಯಾಯಾಲಯ ಮೂಲಕ ದಲಿತರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಇಲ್ಲಿಯವರೆಗಿನ ೩೦ ಸಾವಿರ ಪ್ರಕರಣಗಳಲ್ಲಿ ೧೫ ಸಾವಿರ ಪ್ರಕರಣಗಳು ಖುಲಾಸೆ ಮಾಡಿ ಸಾವಿರಾರು ಕುಟುಂಬಗಳನ್ನು ಬೀದಿಗೆ ತಳ್ಳಲಾಗಿದೆ ಎಂದು ಆರೋಪಿಸಿದರು.

ಪಿಟಿಸಿಎಲ್ ಕಾಯ್ದೆ ಅನ್ವಯ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಯಾವುದೇ ಜಮೀನು ಪರಭಾರೆ ಅಗಿದ್ದರೆ ಅದನ್ನು ಅದರ ಮೂಲ ವಾರಸುದಾರರಿಗೆ ಮರು ಮಂಜೂರು ಮಾಡಬೇಕೆಂದು ಹೇಳುತ್ತದೆ. ಆದರೆ, ಕಾಯ್ದೆಯನ್ನು ಉಲ್ಲಂಘಿಸಿ ಎಸಿ/ಡಿಸಿ ಕೋರ್ಟ್ಗಳಲ್ಲಿ ಸುಮಾರು ೧೫ ಸಾವಿರ ಪ್ರಕರಣಗಳನ್ನು ಇತ್ಯರ್ಥಗೊಳಿಸಿ ಸಾವಿರಾರು ಕುಟುಂಬಗಳನ್ನು ಬೀದಿಗೆ ತಂದಿರುವ ಹಿನ್ನಲೆಯಲ್ಲಿ ರಾಜ್ಯದ ವಿವಿಧ ದಲಿತ ಸಂಘಟನೆಗಳ ನೇತೃತ್ವದಲ್ಲಿ ಬೆಂಗಳೂರಿನ ಸ್ವಾತಂತ್ರö್ಯ ಉದ್ಯಾನವನದಲ್ಲಿ ಅನಿರ್ಧಿಷ್ಟ ಹೋರಾಟ ನಡೆಸಲಾಗುತ್ತಿದೆ. ಕೋಲಾರದಲ್ಲಿ ಬಿಜೆಪಿ ಸರ್ಕಾರ ಫೆ.೯ರಂದು ದಲಿತರ ಸಮಸ್ಯೆಗಳನ್ನು ಕೇಳಲು ಸಮಾವೇಶ ಸೇರಿಸುತ್ತಿದೆ, ಮೊದಲು ಪಿಟಿಸಿಎಲ್ ಕಾಯ್ದೆ ಯತಾವತ್ ಮರು ಜಾರಿಗೆ ಸುಗ್ರೀವಾಜ್ಞೆ ಹೊರಡಿಸಿ ಸಮಾವೇಶ ನಡೆಸಲಿ ಎಂದು ತಾಕೀತು ಮಾಡಿದರು.

ವಿದಾರ್ಥಿ ವೇತನ ಖಡಿತಕ್ಕೆ ಖಂಡನೆ:
ಕೇಂದ್ರ ಸರ್ಕಾರ ಪರಿಶಿಷ್ಟಜಾತಿ,ಪರಿಶಿಷ್ಟಪಂಗಡಗಳ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನವನ್ನು ನಿಲ್ಲಿಸಿದೆ, ಇದೇ ವೇಳೆ ಹೋರಾಟವನ್ನೇ ಮಾಡದಿದ್ದರೂ ಬ್ರಾಹ್ಮಣ ಮಕ್ಕಳ ವಿದ್ಯಾರ್ಥಿ ವೇತನಕ್ಕೆ ಚಾಲನೆ ನೀಡಿದೆ. ಈ ಅನ್ಯಾಯವನ್ನು ಮೀಸಲು ಕ್ಷೇತ್ರದಿಂದ ಆಯ್ಕೆಯಾಗಿರುವ ಸಂಸದ ಮುನಿಸ್ವಾಮಿ ಸಂಸತ್‌ನಲ್ಲಿ ಯಾಕೆ ಪ್ರಶ್ನೆ ಮಾಡಿಲ್ಲ. ಒಂದು ತುಳಿತಕ್ಕೆ ಒಳಗಾದ ಸಮುದಾಯದಲ್ಲಿ ಹುಟ್ಟಿದ ಅವರಿಗೆ ಇದೆಲ್ಲಾ ಕಾಣುತ್ತಿಲ್ಲವೆ? ಎಂದು ಪ್ರಶ್ನಿಸಿದರು.

ಪೆ.೯ರಂದು ಕೋಲಾರದಲ್ಲಿ ಸಮಸ್ಯೆಗಳನ್ನು ಆಲಿಸಲಿಕ್ಕೆ ಅಂತ ದಲಿತರ ಸಮಾವೇಶ ಯಾವ ಪುರಷಾರ್ಥಕ್ಕಾಗಿ ಎಂದು ಹೇಳಬೇಕು, ಹೋರಾಟವನ್ನು ಮಾಡದೆ, ಮನವಿಯನ್ನೂ ನೀಡದ ಶೇ.೩ ರಷ್ಟಿರುವ ಬ್ರಾಹ್ಮಣ ಸಮುದಾಯಕ್ಕೆ ಶೇ.೧೦ರಷ್ಟು ಮೀಸಲಾತಿ ನೀಡಲಾಗಿದೆ, ಶೇ.೪೦ ಜನಸಂಖ್ಯೆ ಇರುವ ಶೋಷಿತ ಸಮುದಾಯಗಳು ಉರುಳುಸೇವೆ ಮಾಡಿದರೂ ಅವರ ಧ್ವನಿಗೆ ಸ್ಪಂಧಿಸುವುದಿಲ್ಲವೇಕೆ ಎಂದು ಕಿಡಿಕಾರಿದರು.

ಮೀಸಲಾತಿ ಕೋಟಾದಲ್ಲಿ ಅಯ್ಕೆಯಾಗಿರುವ ಮುನಿಸ್ವಾಮಿಯವರಿಗೆ ದಲಿತರ ಸಮಸ್ಯೆಗಳ ಬಗ್ಗೆ ಅರಿವಿಲ್ಲವಾದರೆ, ಇನ್ನೂ ಪ್ರಧಾನಿ ಮೋದಿಗೆ ಹೇಗೆ ಅರಿವಾಗಲು ಸಾಧ್ಯ ಎಂದರು. ಸಂಸದರಿಗೆ ಸ್ವಲ್ಪವಾದರೂ ಸ್ವಾಭಿಮಾನ ಇದ್ದರೆ ಫೆ.೯ರ ಸಮಾವೇಶಕ್ಕೆ ಮುಂಚಿತವಾಗಿ ಮುಖ್ಯಮಂತ್ರಿಗಳ ಜೊತೆ ಮಾತನಾಡಿ, ಪಿಟಿಸಿಎಲ್ ಕಾಯ್ದೆ ಯತಾವತ್ ಜಾರಿಗೆ ಸುಗ್ರೀವಾಜ್ಞೆ ಹೊರಡಿಸಲು ಶ್ರಮಿಸಲಿ ಎಂದರು.

ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಿಂಹ ಸೇನೆ ಜಿಲ್ಲಾಧ್ಯಕ್ಷ ಎಂ.ಹನುಮಾನ್, ಶ್ರೀನಾಥ್, ಮಂಜುನಾಥ್, ಮುನಿರಾಜು, ನಾಗಭೂಷಣ್, ರವಿಕುಮಾರ್, ಸಂಜೀವಯ್ಯ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You missed

error: Content is protected !!