ಶ್ರೀನಿವಾಸಪುರ ತಾಲ್ಲೂಕಿನ ಲಕ್ಷ್ಮೀಪುರ ಹಾಗೂ ಅಡ್ಡಗಲ್ ವ್ಯವಸಾಯ ಸೇವಾ ಸಹಕಾರ ಸಂಘದಿಂದ ಮಹಿಳಾ ಸ್ತ್ರೀ -ಶಕ್ತಿ ಸ್ವಸಹಾಯ ಸಂಘಗಳ ಗುಂಪುಗಳಿಗೆ ಲಕ್ಷ್ಮೀಪುರ ಕ್ರಾಸ್ ನಲ್ಲಿ ಸಾಲ ವಿತರಣೆ ಕಾರ್ಯಕ್ರಮವನ್ನು ಆಯೋಜನೆ ಮಾಡಿಲಾಗಿತ್ತು.
ಕಾರ್ಯಕ್ರಮವನ್ನು ಶಾಸಕ ಕೆ.ಆರ್.ರಮೇಶ್ ಕುಮಾರ್ ಉದ್ಘಾಟಿಸಿ ಮಾತನಾಡಿ ಇಂದು 151 ಮಹಿಳಾ ಸ್ವಸಹಾಯ ಸಂಘಗಳ ಗುಂಪುಗಳಿಗೆ 10 ಕೋಟಿ 4 ಲಕ್ಷ ಹಣದ ಎ ಟಿ ಎಂ ಕಾರ್ಡ್ ಗಳ ಮೂಲಕ ಸಾಲ ವಿತರಣೆ ಮಾಡಲಾಗಿದೆ.
ಮಹಿಳೆಯರ ಸ್ವಯಂ ಉದ್ಯೋಗ ಸೃಷ್ಟಿ ಮಾಡಿಕೊಳ್ಳಲು ಹಾಗೂ ಮಕ್ಕಳನ್ನು ಉನ್ನತ ಮಟ್ಟಕ್ಕೆ ವಿದ್ಯಾಭ್ಯಾಸ ಕೊಡಿಸಲು ಕುಟುಂಬಗಳ ನಿರ್ವಹಣೆ ಅನುಕೂಲಕ್ಕಾಗಿ ಮೊದಲಿಗೆ 50 ಸಾವಿರ ಬಡ್ಡಿ ರಹಿತ ನೀಡಲಾಗುತ್ತಿತ್ತು.
50 ಸಾವಿರ ಪಡೆದು ಮರುಪಾವತಿ ಮಾಡಿರುವ ಗುಂಪುಗಳಿಗೆ ಒಂದು ಲಕ್ಷ ರೂಪಾಯಿಗಳನ್ನು ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ 1 ಲಕ್ಷಕ್ಕೂ ಸಹ ಬಡ್ಡಿ ರಹಿತವಾಗಿ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಕೆ.ಕೆ.ಮಂಜುನಾಥ್ ,ದಿಂಬಾಲ್ ಅಶೋಕ್, ಡಿಸಿಸಿ ಬ್ಯಾಂಕ್ ನಿರ್ದೇಶಕರು ವೆಂಕಟರೆಡ್ಡಿ, ಕೊಂಡಸಂದ್ರ ಶಿವಾರೆಡ್ಡಿ, ಗೌತಮಿ ಮುನಿರಾಜು, ಬಾಬುರೆಡ್ಡಿ, ಮಮತಾ ಸೋಮಶೇಖರ್, ತೂಪಲ್ಲಿ ಕೃಷ್ಣಾರೆಡ್ಡಿ, ವಕೀಲ ಮುನಿರಾಜು, ಸುಧಾಕರ್ ಮತ್ತಿತರರು ಹಾಜರಿದ್ದರು.