• Fri. Mar 29th, 2024

PLACE YOUR AD HERE AT LOWEST PRICE

ಶ್ರೀನಿವಾಸಪುರ:ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ ಕೋಲಾರ ರವರಿಂದ ರಾಯಲ್ಪಾಡು ಮತ್ತು ನೆಲವಂಕಿ ಹೋಬಳಿಗಳ ಕುರಿ ಮತ್ತು ಮೇಕೆ ಸಾಕಾಣಿಕ ರೈತರಿಗೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ನಂಬಿವಾರಪಲ್ಲಿ ಸಮುದಾಯ ಭವನದಲ್ಲಿ ತರಬೇತಿ ನೀಡಲಾಯಿತು.

ನಿಗಮದ ಅಭಿಯಂತರರಾದ ಸುದರ್ಶನ್ ಮಾತನಾಡಿ ಕುರಿ ನಿಗಮದಿಂದ ರೈತರಿಗೆ ಪ್ರತಿ ವರ್ಷ ಬಡ ರೈತರಿಗೆ ಕುರಿ ಮೇಕೆಗಳನ್ನು ಸಾಕಲು ಹೊಸ ಸಾಲ, ಆಕಸ್ಮಿಕವಾಗಿ ಹಾಗೂ ರೋಗಗಳಿಂದ ಸಾವನ್ನಪ್ಪಿದಾಗ ನಷ್ಟ ಪರಿಹಾರ ಕೊಡುವುದು ಮತ್ತು ಹೊಸ ತಂತ್ರಜ್ಞಾನಗಳನ್ನು ಬಳಸಲು ಉತ್ತೇಜನ ನೀಡಲಾಗುವುದನ್ನು ರೈತರು ಸದುಪಯೋಗ ಮಾಡಿಕೊಳ್ಳಲು ಮನವಿ ಮಾಡಿದರು.

ಸಿ ಓ ಸಿದ್ದರಾಜು ಮಾತನಾಡಿ ಕೋಲಾರ ಜಿಲ್ಲೆಗೆ ಬೆಂಗಳೂರು ನಗರ ತುಂಬಾ ಹತ್ತಿರವಾಗಿದ್ದು ನಮ್ಮ ರೈತರು ಕುರಿ ಮೇಕೆ ಮಾಂಸ ಮಾರಾಟ ಮಾಡಲು ಮಾರ್ಕೆಟಿಂಗ್ ವ್ಯವಸ್ಥೆಗೆ ಈ ಸಂಸ್ಥೆಯಿಂದ ತಾವೆಲ್ಲರೂ ಮುಂದಾಗಬೇಕು ಮತ್ತು ಉತ್ತಮ ಗುಣಮಟ್ಟದಲ್ಲಿ ಸರಬರಾಜು ಮಾಡಲು ರೈತರಿಗೆ ಉತ್ತೇಜನವನ್ನು ನೀಡಲಾಗುವುದೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಅಮೃತ ಯೋಜನೆ ಅಡಿಯಲ್ಲಿ ಕುರಿ ಮತ್ತು ಉಣ್ಣೆ ಉತ್ಪಾದಕ ಸಂಸ್ಥೆಯ ನಿರ್ದೇಶಕರನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಪಾತಕೋಟೆ ನವೀನ್ ಕುಮಾರ್, ಉಪಾಧ್ಯಕ್ಷರಾಗಿ ಪಾತಗೌನಪಲ್ಲಿ ಶ್ರೀನಿವಾಸ್, ನಿರ್ದೇಶಕರಾಗಿ ಕೊತ್ತಪೇಟೆ ಕೆವಿ ಬಂಗಾರಪ್ಪ,ಮಂಡ್ಯಾಲ ರಾಜಾರೆಡ್ಡಿ, ಜೋಡಿ ಕೊತ್ತಪಲ್ಲಿ ರಘುನಾಥ ರೆಡ್ಡಿ, ಯರಂವಾರಪಲ್ಲಿ ಸುಶೀಲ, ಎ.ಕೊತ್ತೂರು ಭಾಸ್ಕರ್ ರೆಡ್ಡಿ, ಯಗವಚಿಂತಪಲ್ಲಿ ಮುನಿ ರೆಡ್ಡಿ, ಗೊರಿವಿಮಾಕನಪಲ್ಲಿ ಮುನಿಶಾಮಿ, ಗಂಡ್ರಾಜಪಲ್ಲಿ ಶಿವಾರೆಡ್ಡಿ ಆಯ್ಕೆಯಾದರು.

Leave a Reply

Your email address will not be published. Required fields are marked *

You missed

error: Content is protected !!