• Thu. Mar 28th, 2024

PLACE YOUR AD HERE AT LOWEST PRICE

ಕೋಲಾರ ಜಿಲ್ಲೆಯ ಸಮಸ್ತ ಟೊಮೇಟೋ ಮಾರಾಟಗಾರರ ಪ್ರತಿನಿಧಿಯಾಗಿರುವ ಸಿಎಂಆರ್ ಶ್ರೀನಾಥ್‌ರನ್ನು ಕೋಲಾರ ಕ್ಷೇತ್ರದಿಂದ ಆಯ್ಕೆಯಾಗಲು ಬೆಂಬಲಿಸುವುದಾಗಿ ಜಿಲ್ಲೆಯ ಟೊಮೇಟೋ ಮಾರಾಟಗಾರರು ಘೋಷಿಸಿದರು.

ವಡ್ಡಹಳ್ಳಿ ಟೊಮೇಟೋ ಮಂಡಿ ಮಾಲೀಕ ಎನ್.ಆರ್ ಸತ್ಯಣ್ಣ ವಡ್ಡಹಳ್ಳಿ ಎಪಿಎಂಸಿ ಮಾರುಕಟ್ಟೆಯ ಮಂಡಿ ಮಾಲೀಕರು, ರೈತರು ಹಾಗೂ ವ್ಯಾಪಾರಸ್ಥರು ಸಭೆಯಲ್ಲಿ ಮಾತನಾಡಿ, ಟೊಮೇಟೋ ಸೇರಿದಂತೆ ತರಕಾರಿಗಳಿಗೆ ಸರಿಯಾದ ಬೆಂಬಲ ಬೆಲೆ ಸಿಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ನಾವು ಎಲ್ಲರೂ ಸೇರಿ ನಮ್ಮ ಸಮಸ್ಯೆಗಳಿಗೆ ಪರಿಹಾರ ಕೋಲಾರ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿರುವ ಸಿಎಂಆರ್ ಶ್ರೀನಾಥ್ ಅವರನ್ನು ಬೆಂಬಲಿಸಬೇಕು ಅವರು ರೈತರ ಸಮಸ್ಯೆಗಳ ಅರಿತವರು ಶಾಸಕರಾಗಿ ಆಯ್ಕೆಯಾಗಬೇಕು ಹಾಗಾಗಿ ಅವರಿಗೆ ನಮ್ಮ ಸಂಪೂರ್ಣ ಬೆಂಬಲವನ್ನು ನೀಡುತ್ತೇವೆ ಎಂದರು.

ಸುಮಾರು ಹತ್ತು ವರ್ಷಗಳಿಂದ ರಾಜಕೀಯ ಹಾಗೂ ಸಮಾಜಸೇವೆಯ ಮೂಲಕ ಜಿಲ್ಲೆಯ ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಸಕ್ರಿಯವಾಗಿದ್ದಾರೆ ಕೋವಿಡ್ ಸಂದರ್ಭದಲ್ಲಿ ಔಷಧ ಕಿಟ್, ಆಹಾರ ಕಿಟ್ ಸೇರಿದಂತೆ ಅನೇಕ ಸೇವೆಗಳನ್ನು ನೀಡಿದ್ದಾರೆ ಜೊತೆಗೆ ರೈತರ, ಮಂಡಿ ಮಾಲೀಕರ ಹಾಗೂ ಮಾರುಕಟ್ಟೆಯಲ್ಲಿನ ಮೂಲಭೂತ ಸಮಸ್ಯೆಗಳ ಬಗ್ಗೆ ಎಷ್ಟೇ ಹೋರಾಟಗಳನ್ನು ಮಾಡಿದರು ವಿಧಾನಸಭೆಯಲ್ಲಿ ಧ್ವನಿ ಎತ್ತುವವರು ಇಲ್ಲದೆ ಸಮಸ್ಯೆಗಳು ಹಾಗೇ ಉಳಿದಿವೆ ಎಂದರು.

ಕೋಲಾರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಮಾತನಾಡಿ, ನಾನು ಒಬ್ಬ ರಾಜಕಾರಣಿ ಅಷ್ಟೇ ಅಲ್ಲ ನಾನು ಕೂಡ ರೈತ ವ್ಯಾಪಾರಸ್ಥ ಜೊತೆಗೆ ಮಂಡಿ ಮಾಲೀಕನು ಕೂಡ ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುವ ವ್ಯಕ್ತಿಯಾಗುತ್ತೇನೆ, ಮಾರುಕಟ್ಟೆಗಳಲ್ಲಿನ ಮೂಲಭೂತ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಲು ಬೆಂಬಲಿಸಿದ್ದೇನೆ, ಹೋರಾಟ ಮಾಡಿದರೂ ಸಹ ಮಾರುಕಟ್ಟೆಯಲ್ಲಿ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ, ಮಂಡಿ ಮಾಲೀಕರು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ, ನಮ್ಮ ಅಸ್ಥಿತ್ವವನ್ನ ಉಳಿಸಿಕೊಳ್ಳಲು ನಾವೆಲ್ಲಾ ಒಗ್ಗಟ್ಟಾಗಿ ಚುನಾವಣೆ ಎದುರಿಸಿದಾಗ ಯಶಸ್ಸು ಖಂಡಿತವಾಗಿ ಸಿಗುತ್ತದೆ ಎಂದರು.
ರೈತರ ಸಮಸ್ಯೆಗಳ ಬಗ್ಗೆ ಶಾಸಕನಾದ ಮೇಲೆ ನೀವು ಇಟ್ಟಿರುವ ನಂಬಿಕೆ ವಿಶ್ವಾಸವನ್ನು ಉಳಿಸಿಕೊಳ್ಳುವ ಮೂಲಕ ರೈತನ ಮಗನಿಂದ ನವ ಕೋಲಾರ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದರು ಈ ಬಾರಿ ಒಂದು ಅವಕಾಶ ನೀಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ವಡ್ಡಹಳ್ಳಿ ಟಿವಿಎಸ್ ಮಂಡಿ ವೆಂಕಟರಮಣಪ್ಪ, ಎಸ್.ವಿ.ಟಿ ಮಂಡಿ ರಾಮಚಂದ್ರ, ವೇಣು, ಚಂದ್ರಶೇಖರ್, ಪ್ರಭಾಕರ್, ಸೇರಿದಂತೆ ಜಿಪಂ ಮಾಜಿ ಸದಸ್ಯ ಬಾಲಾಜಿ ಚೆನ್ನಯ್ಯ, ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ, ರಾಜ್ಯ ಕುರುಬರ ಸಂಘದ ಮಾಜಿ ನಿರ್ದೇಶಕ ಅಶೋಕ್, ಹಾರೋಹಳ್ಳಿ ತೋಟದಮನೆಗಳ ಅಶೋಕ್ ಸೇರಿದಂತೆ ವಡ್ಡಹಳ್ಳಿ ಮಾರುಕಟ್ಟೆಯ ರೈತರು ಮಂಡಿ ಮಾಲೀಕರು, ವ್ಯಾಪಾರಸ್ಥರು ಇದ್ದರು.

ಸುದ್ದಿ ಓದಿ ಹಂಚಿ:

Leave a Reply

Your email address will not be published. Required fields are marked *

You missed

error: Content is protected !!