ಪ್ರತಿಸ್ಪರ್ಧಿ ಯಾರೇ ಇರಲಿ ಕೋಲಾರ ಜಿಲ್ಲೆ ಜೆಡಿಎಸ್‌ನ ಭದ್ರಕೋಟೆಯಾಗಿದ್ದು, ಸಿದ್ದರಾಮಯ್ಯ ಮಾತ್ರವಲ್ಲ ಯಾರೇ ಎದುರಾಳಿಯಾದರೂ ಸಿಎಂಆರ್.ಶ್ರೀನಾಥ್ ಗೆಲುವು ಖಚಿತ ಎಂದು ಜೆಡಿಎಸ್ ರಾಜ್ಯ ಯುವ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ಕೋಲಾರ ತಾಲ್ಲೂಕಿನ ತಿಪ್ಪೇನಹಳ್ಳಿಯಲ್ಲಿ ಭಾನುವಾರ ಜೆಡಿಎಸ್ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಅವರು, ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.
೨೦೧೮ ರಲ್ಲಿ ಕೋಲಾರದಲ್ಲಿ ಜೆಡಿಎಸ್ ಗೆದ್ದಿದೆ, ೨೦೨೩ ರಲ್ಲೂ ನಾವೇ ಗೆಲ್ಲುತ್ತೇವೆ, ಶ್ರೀನಾಥ್ ಅವರು, ಇಲ್ಲಿ ಸಕ್ರಿಯರಾಗಿದ್ದಾರೆ, ಬೇರೆ ರಾಜಕಾರಣಿಗಳಂತೆ ಚುನಾವಣೆ ಸಮಯದಲ್ಲಿ ಇಲ್ಲಿಗೆ ಬಂದಿಲ್ಲ, ಕಳೆದ ೧೦ ವರ್ಷಗಳಿಂದ ಗುರುತಿಸಿಕೊಂಡು ಸಾಮಾಜಿಕ ಕಾರ್ಯಗಳನ್ನು ನಡೆಸುತ್ತಿದ್ದಾರೆ ಎಂದರು.
ಪಂಚರತ್ನ ಯಾತ್ರೆ ಯಶಸ್ವಿಯಾಗಿದೆ, ರಾಜ್ಯದ ಜನತೆ ಕುಮಾರಸ್ವಾಮಿಯವರನ್ನು ಅಧಿಕಾರಕ್ಕೆ ತರಲು ಸಿದ್ದರಾಗಿದ್ದಾರೆ, ಸಾಲ ಮನ್ನಾ ಮಾಡಿದ ಕುಮಾರಸ್ವಾಮಿ ಅವರ ಸರ್ಕಾರವನ್ನು ಬೀಳಿಸಿದರು ಎಂದ ಅವರು, ಈಗಿನ ಸರ್ಕಾರ ಶೇ.೪೦ ಸರ್ಕಾರ, ಪಿಎಸ್‌ಐ ಹಗರಣ ಸೇರಿದಂತೆ ಅನೇಕ ಭ್ರಷ್ಟಾಚಾರ ಪ್ರಕರಣಗಳನ್ನು ಎದಿರುಸುತ್ತಿದೆ ಎಂದರು.
ಸುದ್ದಿ ಓದಿ ಹಂಚಿ: