• Thu. Apr 18th, 2024

PLACE YOUR AD HERE AT LOWEST PRICE

ತ್ರಿಪುರ ರಾಜ್ಯದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯನ್ನು ನಿಷ್ಪಕ್ಷಪಾತ ಚುನಾವಣೆ ನಡೆಸಲು ಹಾಗೂ ಎಡ ಮತ್ತು ಜಾತ್ಯಾತೀತ ಪ್ರಜಾಪ್ರಭುತ್ವ ಶಕ್ತಿಗಳ ಮೇಲಿನ ಅರೆ ಫ್ಯಾಸಿಸ್ಟ್ ದಬ್ಬಾಳಿಕೆ ನಡೆಸುವ ವಿಚ್ಛಿದ್ರಕಾರಿ ಶಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿ ಸಿಪಿಐ(ಎಂ) ಪಕ್ಷದ ವತಿಯಿಂದ ತಹಶೀಲ್ದಾರ್ ಕಛೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.

ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು ಎಡ ಪಕ್ಷಗಳು ಹಾಗೂ ಅದರ ಮೈತ್ರಿಕೂಟ, ಇತರೆ ವಿರೋಧ ಪಕ್ಷಗಳು ಚುನಾವಣೆ ಪ್ರಚಾರ ನಡೆಸಿದಂತೆ ಬಾರಿ ಪ್ರಮಾಣದ ಗುಂಡಾಗಿರಿ, ಹಿಂಸಾಚಾರ ನಡೆಸಲಾಗುತ್ತಿದೆ. ಚುನಾಯಿತ ಜನಪ್ರತಿನಿಧಿಗಳು, ರಾಜಕೀಯ ಮುಖಂಡರು ಮತದಾರರನ್ನು ಭೇಟಿಯಾಗದಂತೆ ತಡೆಯಲಾಗುತ್ತಿದೆ. ಬಿಜೆಪಿ ಬೆಂಬಲಿತ ಸಮಾಜಘಾತಕ ಶಕ್ತಿಗಳು ಮತ್ತು ಸರ್ಕಾರದ ಆಡಳಿತ ಯಂತ್ರದ ಬಲದಿಂದ ಯಾವುದೇ ಕ್ಷಣದಲ್ಲಿ ಹಿಂಸಾಚಾರ ಭುಗಿಲೇಲುವ ಸಾಧ್ಯತೆ ಇದೆ .

ಬಿಜೆಪಿ ಆಡಳಿತದಲ್ಲಿ ಎಲ್ಲಾ ರಂಗದಲ್ಲಿಯೂ ಕುಸಿತ ಮತ್ತು ಅರಾಜಕತೆ ತಾಂಡವ ಆಡುತ್ತಿದೆ. ಶಿಕ್ಷಣ, ಆರೋಗ್ಯ, ಗ್ರಾಮೀಣ ಅಭಿವೃದ್ಧಿ, ಮಹಿಳೆ, ಆದಿವಾಸಿಗಳ ಸಬಲೀಕರಣ, ಉದ್ಯೋಗದಲ್ಲಿ ಅತ್ಯಂತ ಮುಂದುವರೆದ ರಾಜ್ಯವು ಇಂದು ಎಲ್ಲ ಕ್ಷೇತ್ರಗಳಲ್ಲಿಯೂ ಕುಸಿತ ಕಾಣುತ್ತಿದೆ. ಐದು ವರ್ಷಗಳ ಹಿಂದೆ ಅಲ್ಲಿ ಎಡಪಕ್ಷಗಳ ನೇತೃತ್ವದ ಸರಕಾರವಿತ್ತು, ಜನಪರವಾದ ಆಡಳಿತಕ್ಕೆ ಹೆಸರುವಾಸಿಯಾಗಿತ್ತು. ಆದಿವಾಸಿ ಬುಡಕಟ್ಟು ಜನತೆಯ ಸಮಗ್ರ ಅಭಿವೃದ್ಧಿಗಾಗಿ ಶಾಸಕಾಂಗದಷ್ಟೇ ಹಕ್ಕು ಬಾದ್ಯತೆ ಕರ್ತವ್ಯಗಳು ಮತ್ತು ವಿಶೇಷ ಬಜೆಟ್ಟನ್ನು ಜನಾಭಿವೃದ್ಧಿಗೆ ಬಳಸುತ್ತಾ, ಬುಡಕಟ್ಟು ಸ್ವಾಯತ್ತ ಮಂಡಳಿ ರಚಿಸಿ ಪ್ರಜಾಸತ್ತಾತ್ಮಕ ವಿಕೇಂದ್ರೀಕರಣದ ಆಡಳಿತ ನಡೆಸಲಾಗುತ್ತಿತ್ತು. ಭ್ರಷ್ಟಾಚಾರವಿಲ್ಲದ ಜನಪರವಾದ ಸರಕಾರವೆಂದೇ ಅಂದಿನ ಮುಖ್ಯ ಮಂತ್ರಿಗಳಾಗಿದ್ದ ಕಾ.ಮಾಣಿಕ್ ಸರಕಾರ್‌ ಅವರು, ಅವರ ಸರಕಾರ ಹೆಸರುವಾಸಿಯಾಗಿತ್ತು.

ಬಿಜೆಪಿ ಆಡಳಿತಾವಧಿಯಲ್ಲಿ ರಾಜ್ಯದ ಸಮಸ್ಯೆಗಳು ತೀವ್ರವಾಗಿ ಹೆಚ್ಚಳವಾಗಿದ್ದು, ಜನ ತತ್ತರಿಸಿ ಹೋಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿಯು ಸೋಲುವ ಭಯದಿಂದ ರಾಜ್ಯದಲ್ಲಿ ಭಯದ ವಾತಾವರಣ ನಿರ್ಮಿಸಲಾಗುತ್ತಿದೆ. ವಿರೋಧ ಪಕ್ಷಗಳು ಚುನಾವಣಾ ಪ್ರಕ್ರಿಯೆಯಲ್ಲಿ ಮುಕ್ತವಾಗಿ ಭಾಗವಹಿಸುವಂತಹ ವಾತಾವರಣ ನಿರ್ಮಿಸಬೇಕು. ದಾಳಿ ದಬ್ಬಾಳಿಕೆ ನಡೆಸುವ ವಿಚ್ಚಿದ್ರಕಾರಿ ಶಕ್ತಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ತಹಶೀಲ್ದಾರ್ ಮೂಲಕ ಸಲ್ಲಿಸಿರುವ ರಾಷ್ಟ್ರಪತಿಗಳಿಗೆ ಕಳುಹಿಸಲು ಮನವಿಯಲ್ಲಿ ಒತ್ತಾಯಿಸಲಾಗಿದೆ. ಪ್ರತಿಭಟನೆಯಲ್ಲಿ ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಗಾಂಧಿನಗರ ನಾರಾಯಣಸ್ವಾಮಿ, ಮುಖಂಡರಾದ ಪಿ.ಶ್ರೀನಿವಾಸ್, ಎ.ಆರ್.ಬಾಬು, ಟಿ.ಎಂ.ವೆಂಕಟೇಶ್, ಪಾತಕೋಟೆ ನವೀನ್ ಕುಮಾರ್, ತಂಗರಾಜ್, ವಿಜಯಕೃಷ್ಣ, ಹನುಮಂತರಾಯ, ಅಚ್ಚುತ, ಅಪ್ಪಯ್ಯಣ್ಣ, ಪಿಚ್ಚಕಣ್ಣು, ಮಂಜುಳ, ಕೆ.ವಿ.ಮಂಜುನಾಥ್, ವೆಂಕಟಚಲಪತಿ, ಹೆಚ್.ಬಿ.ಕೃಷ್ಣಪ್ಪ ಮತ್ತಿತರರು ಭಾಗವಹಿಸಿದ್ದರು.

 

ಸುದ್ದಿ ಓದಿ ಹಂಚಿ:

 

Related Post

ಶೇ.೯೦ ರಷ್ಟು ದೇಶದ ಸಮುದಾಯಗಳು ಮುಖ್ಯವಾಹಿನಿ ಮಾದ್ಯಮಗಳಲ್ಲಿ, ಕಾರ್ಪೋರೇಟ್ ವಿಭಾಗದಲ್ಲಿ ಮತ್ತು ಅತ್ಯುನ್ನತ ಸರ್ಕಾರಿ ಹುದ್ದೆಗಳಲ್ಲಿ ಭಾಗವಹಿಸುವಿಕೆ ಇಲ್ಲ! : ರಾಹುಲ್ ಗಾಂಧಿ
ರಾಜಕೀಯ ಪಕ್ಷಗಳು ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಅನ್ಯಾಯ ಮಾಡಿವೆ : ಸಮುದಾಯ ಮುಖಂಡರ ಆಕ್ರೋಶ,
ಸಂವಿಧಾನ ಉಳಿಸಲು ದೇಶದ ಸಮಗ್ರತೆ ಕಾಪಾಡಲು ಬಿಜೆಪಿಯನ್ನು ಸೋಲಿಸಿ: ಮಂಜುನಾಥ್ ಅಣ್ಣಯ್ಯ

Leave a Reply

Your email address will not be published. Required fields are marked *

You missed

error: Content is protected !!