• Fri. Mar 29th, 2024

ಕೋಲಾರ I ಸಿದ್ದರಾಮುಯ್ಯ ಬಲಿಷ್ಟ ಜೆಡಿಎಸ್‌ ಮತ್ತು ಲೋಕಲ್‌ ಕುರುಬ ವರ್ತೂರು ಪ್ರಕಾಶ್‌ ನಡುವೆ ಸಿಕ್ಕಿಕೊಂಡಿದ್ದಾರೆ-ಸಿ.ಎಂ.ಇಬ್ರಾಹಿಂ

PLACE YOUR AD HERE AT LOWEST PRICE

  • ಬಲಿಷ್ಟ ಜೆಡಿಎಸ್ ಹಾಗೂ ಲೋಕಲ್ ಕುರುಬ ವರ್ತೂರು ಪ್ರಕಾಶ್ ನಡುವೆ
    ಸಿಕ್ಕಿಹಾಕಿಕೊಂಡು ಸೋಲಿನ ಭಯದಲ್ಲಿ ಒದ್ದಾಡುತ್ತಿರುವ ಸಿದ್ದರಾಮಯ್ಯ-ಇಬ್ರಾಹಿಂ ವ್ಯಂಗ್ಯ

ಕೋಲಾರ ಲೋಕಲ್ ಕುರುಬ ವರ್ತೂರು ಪ್ರಕಾಶ್, ಬಲಿಷ್ಟ ಜೆಡಿಎಸ್ ನಡುವೆ ಯಾರ‍್ಯಾರೋ ಮಾತು ಕೇಳಿ ಸಿದ್ದರಾಮಯ್ಯ ಕೋಲಾರದಲ್ಲಿ ಸಿಕ್ಕಿ ಹಾಕಿಕೊಂಡಿದ್ದು, ಒಳಗೂ ಬರಲಾಗದೇ, ಹೊರಗೂ ಹೋಗಲಾಗದ ಸೋಲಿನ ಭಯದಲ್ಲಿ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಲೇವಡಿ ಮಾಡಿದರು.

ಕೋಲಾರ ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ನನಗೆ ಒಳ್ಳೆ ಸ್ನೇಹಿತರು, ಎಲ್ಲಾದ್ರೂ ಒಳ್ಳೆಯ ಕಡೆ ನಿಂತ್ಕೊಳ್ಳಲಿ ಎಂದ ಅವರು ಎಲ್ಲಿ ನಿಲ್ಲಲಿ ಎಂದು ಕೇಳಿದರೆ ಬಹಿರಂಗವಾಗಿ ನಾನು ಹೇಳಲ್ಲ ಪೋನಿನಲ್ಲಿ ಕೇಳಿದರೆ ಹೇಳುತ್ತೇನೆ ಎಂದರು.

ಜೆಡಿಎಸ್‌ಗೆ ಬಹುಮತ ಬರಲ್ಲ ಎಂಬ ಸಿದ್ದರಾಮಯ್ಯ ಮಾತಿಗೆ ತಿರುಗೇಟು ನೀಡಿದ ಅವರು, ಸೋಲುವ ಆತಂಕದಲ್ಲಿ ಸಾಯುತ್ತಿರುವ ವ್ಯಕ್ತಿಗೆ ನಿನ್ನಕೊನೆ ಆಸೆ ಏನು ಎಂದು ಡಾಕ್ಟರ್ ಪ್ರಶ್ನಿಸಿದಾಗ ನೀಡುವ ಉತ್ತರದಂತಿದೆ ಎಂದು ಲೇವಡಿ ಮಾಡಿದರು.

ಜಿಲ್ಲೆಯ ಕೆಲವು ಸ್ವಾರ್ಥ ಮುಖಂಡರ ಮಾತು ಕೇಳಿ ಕೋಲಾರದಲ್ಲಿ ಸಿಕ್ಕಿಹಾಕಿಕೊಂಡಿರುವ ಸಿದ್ದರಾಮಯ್ಯ ಸ್ಥಿತಿ ಕುರಿತು ವ್ಯಂಗ್ಯವಾಡಿದ ಅವರು, ಸಿದ್ದರಾಮಯ್ಯ ಕೋಲಾರದಲ್ಲಿ ತಪ್ಪಿ ಸಿಕ್ಕಿಕೊಂಡಿದ್ದಾರೆ. ಇವರು ಮುಖ್ಯಮಂತ್ರಿ ಆಗಿದ್ದಾಗ ೧೩೦ ಸೀಟು ಬರುತ್ತೆ ಅಂತ ಹೇಳಿದ್ದರು.

ಅಧಿಕಾರ, ಎಲ್ಲಾ ಇಟ್ಟುಕೊಂಡೆ ಕಳೆದ ಬಾರಿ ೭೮ ಬರಲಿಲ್ಲ ಈಗ ಏನು ಇಲ್ಲದೇ ಏನು ಬರುತ್ತೆ ಎಂದು ವ್ಯಂಗ್ಯವಾಡಿದರು.
ನಾವು ರಾಜ್ಯದಲ್ಲಿ ೨೨೪ ಕ್ಷೇತ್ರದಲ್ಲೂ ಗೆಲ್ಲಬೇಕು ಅಂತ ಓಡಾಡುತ್ತಿದ್ದೇವೆ. ನಮಗೆ ಬೇಕಿರೋದು ೧೨೩ ಸೀಟು ಮಾತ್ರ, ಬಾಕಿ ೧೦೦ ಸೀಟುಗಳನ್ನು ನೀವು ಹಂಚಿಕೊಳ್ಳಿ ಎಂದು ಟಾಂಗ್ ನೀಡಿದರು.

ರಾಜ್ಯದಲ್ಲಿ ಜೆಡಿಎಸ್ ಪಕ್ಷಕ್ಕೆ ಒಳ್ಳೆಯ ವಾತಾವರಣ ಇದೆ. ರಾಜ್ಯದಲ್ಲಿ ಜೆಡಿಎಸ್ ಸರಕಾರ ಅಽಕಾರ ಮಾಡುತ್ತದೆ ಅದರಲ್ಲಿ ಯಾವುದೇ ಸಂಶಯವಿಲ್ಲ. ಪೂರ್ವದಿಂದ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ, ಜೂನ್ ತಿಂಗಳಲ್ಲಿ ಕುಮಾರಸ್ವಾಮಿ ಅಧಿಕಾರ ವಹಿಸಿಕೊಳ್ಳೋದು ಸತ್ಯ ಎಂದು ಭವಿಷ್ಯ ನುಡಿದರು.

ಕೋಲಾರ ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್, ಜೆಡಿಎಸ್ ಜಿಲ್ಲಾಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ, ಮುಖಂಡರಾದ ಬಣಕನಹಳ್ಳಿ ನಟರಾಜ್, ಪಕ್ಷದ ಅಲ್ಪಸಂಖ್ಯಾತ ವಿಭಾಗದ ಖಲೀಲ್ ಮತ್ತಿತರ ಮುಖಂಡರು ಹಾಜರಿದ್ದರು.

ಸುದ್ದಿ ಓದಿ ಹಂಚಿ:

 

Leave a Reply

Your email address will not be published. Required fields are marked *

You missed

error: Content is protected !!