• Fri. Apr 19th, 2024

PLACE YOUR AD HERE AT LOWEST PRICE

ಕೆಜಿಎಫ್:ನಗರದ ಸಲ್ಡಾನಾ ವೃತ್ತದಿಂದ ಆಂಡರ್‍ಸನ್‍ಪೇಟೆವರೆಗೆ ಡಬಲ್ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಕೆಲವು ಖಾಸಗಿ ವ್ಯಕ್ತಿಗಳು ಸರ್ಕಾರಿ ರಸ್ತೆಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವುದನ್ನು ಸಂಸದ ಎಸ್.ಮುನಿಸ್ವಾಮಿ ತೆರವುಗೊಳಿಸಲು ಹೋದಾಗ ಶಾಸಕಿ ರೂಪಕಲಾ ನಡುವೆ ಮಾತಿನ ಚಕಮಕಿ ನಡೆಯಿತು.

ನಗರಸಭೆ, ಲೋಕೋಪಯೋಗಿ, ಬೆಸ್ಕಾಂ ಸೇರಿದಂತೆ ಎಲ್ಲ ಇಲಾಖೆಗಳ ಅಧಿಕಾರಿಗಳು ಅಕ್ರಮವಾಗಿ ಒತ್ತುವರಿ ಮಾಡಿರುವ ಅಂಗಡಿಗಳನ್ನು ತೆರವುಗೊಳಿಸುವಂತೆ ಹಲವಾರು ಬಾರಿ ಸೂಚಿಸಿದ್ದರೂ ದಾಸ್  ಚಿನ್ನಸವರಿ ಸಹೋದರನಾದ ಸ್ಟೀಫನ್ ಫುಟ್‍ಪಾತ್‍ನ್ನೂ ಸೇರಿಸಿಕೊಂಡು ಅಕ್ರಮವಾಗಿ ತಗಡು ಶೀಟುಗಳನ್ನು ಕಟ್ಟಡದ ಮುಂದೆ ಕಟ್ಟಿಕೊಂಡು ಡಬಲ್ ರಸ್ತೆ ನಿರ್ಮಾಣ ಕಾರ್ಯಕ್ಕೆ ತೊಂದರೆಯನ್ನುಂಟುಮಾಡಿದ್ದರು.

ಅಭಿವೃದ್ಧಿ ವಿಚಾರದಲ್ಲಿ ನಾನು ಬಿಜೆಪಿ, ನೀವು ಕಾಂಗ್ರೆಸ್ ಎಂದು ಹೇಳಿಕೊಂಡು ಯಾರಿಗೂ ತೊಂದರೆ ನೀಡುವುದು, ದ್ವೇಷದ ರಾಜಕಾರಣ ಮಾಡುವುದು ಬೇಡ. ಇಬ್ಬರೂ ಜೊತೆಯಲ್ಲಿದ್ದುಕೊಂಡು ಅಭಿವೃದ್ಧಿ ಕಾರ್ಯಗಳನ್ನು ಮಾಡಿಕೊಂಡು ಹೋಗೋಣ. ಅಭಿವೃದ್ಧಿ ವಿಚಾರದಲ್ಲಿ ಎಂದಿಗೂ ರಾಜಕಾರಣ ಮಾಡಬಾರದು ಎಂದು ಸಂಸದರು ಶಾಸಕರಿಗೆ ಹೇಳಿದರು.

ನಾನು ನೀವು ಇಬ್ಬರೂ ಸೇರಿಕೊಂಡು ಕೆಜಿಎಫ್‍ನ ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳೋಣ, ತಲೆ ಕೆಡಿಸಿಕೊಳ್ಳಬೇಡಿ. ರಸ್ತೆ ಕಾಮಗಾರಿಗೆ ಬಳಸುತ್ತಿರುವುದು ಸರ್ಕಾರದ ದುಡ್ಡು, ನಿಮ್ಮ ಉದ್ದೇಶ ಏನು, ಈಗ ಇರುವ ರಸ್ತೆಗಳನ್ನು ಹಾಗೆಯೇ ಬಿಟ್ಟುಬಿಡಬೇಕೇ? ಹಾಗೇನಾದರೂ ಇದ್ದರೆ ಓಪನ್ ಆಗಿ ಹೇಳಿಬಿಡಿ, ನೋ ಪ್ರಾಬ್ಲಮ್, ನಾವೂ ಸಹ ನಮ್ಮವರಿಗೆ ಹೇಳಿ ಒಂದಷ್ಟು ಚಿಕನ್ ಅಂಗಡಿಗಳನ್ನು, ಪಂಚರ್ ಅಂಗಡಿಗಳನ್ನು ರಸ್ತೆಯಲ್ಲಿಯೇ ಹಾಕಿಸಿಬಿಡುತ್ತೇವೆ. ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿರುವುದನ್ನು ಹಾಗೆಯೇ ಬಿಟ್ಟುಬಿಡಬೇಕೆ? ಎಂದು ಸಂಸದರು ಪ್ರಶ್ನಿಸಿದರು.

ಶಾಸಕಿ ಡಾ.ರೂಪಕಲಾ ಎಂ ಶಶಿಧರ್ ಮಾತನಾಡಿ, ಮುಖ್ಯಮಂತ್ರಿಯವರ ಬಳಿ 50 ಕೋಟಿ ರೂಗಳ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, 50 ಕೋಟಿ ನೀಡಲು ಸಾಧ್ಯವಿಲ್ಲ ಎಂದು 25 ಕೋಟಿ ರೂಗಳ ಅನುದಾನವನ್ನು ಬಿಡುಗಡೆ ಮಾಡಿದರು. ಬೆಮೆಲ್‍ನ ಆಲದಮರದ ಬಳಿಯಿಂದ ಕಾಮಗಾರಿ ನಡೆಯುತ್ತಿದ್ದು, ಸಲ್ಡಾನ ವೃತ್ತದಿಂದ ಆಂಡರ್‍ಸನ್‍ಪೇಟೆವರೆಗೆ, ಕೋರ್ಟ್ ಬಳಿ, ಎಲ್ಲೆಲ್ಲಿ ಅವಶ್ಯಕತೆ ಇದೆಯೋ ಅಲ್ಲಿ ಡಬಲ್ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ ಎಂದರು.

ಸರ್ಕಾರದಿಂದ ಒಂದು ರೂಪಾಯಿ ಅನುದಾನ ತರುವುದು ಎಷ್ಟು ಕಷ್ಟದ ಕೆಲಸ ಎನ್ನುವುದು ನಿಮಗೆ ಗೊತ್ತಿದೆ, ಅಲ್ಲದೇ ಕ್ಷೇತ್ರದ ಜನರಿಗೆ ಏನಾದರೂ ಮಾತು ಕೊಟ್ಟ ಮೇಲೆ ಆ ಕೆಲಸವನ್ನು ಮಾಡುವುದು ಎಷ್ಟು ಹಿಂಸೆ ಇರುತ್ತದೆ ಎನ್ನುವುದೆಲ್ಲವೂ ನಿಮಗೆ ಚೆನ್ನಾಗಿ ಗೊತ್ತಿದೆ. ಯಾರೋ ನಿಮಗೆ ಮಿಸ್‍ಗೈಡ್ ಮಾಡಿದ್ದಾರೆ. ಎಲ್ಲ ಕ್ಷೇತ್ರಗಳಿಗೆ ನೀಡಿದಂತೆ 25 ಕೋಟಿ ರೂಗಳ ಅನುದಾನವನ್ನು ಬಿಡುಗಡೆಗೊಳಿಸಿದ್ದು, ಅದರಲ್ಲಿ ಶೇ 90 ರಷ್ಟು ಅನುದಾನವನ್ನು ಆಲದಮರದಿಂದ ಆಂಡರ್‍ಸನ್‍ಪೇಟೆವರೆಗೆ ಎಲ್ಲೆಲ್ಲಿ ಡಬಲ್ ರಸ್ತೆ ಬರಬೇಕು ಎನ್ನುವುದೆಲ್ಲವನ್ನು ಮೊದಲೇ ನೀಲ ನಕಾಶೆ ಸಿದ್ದಪಡಿಸಿ  ಅದರಂತೆ ಕಾಮಗಾರಿಯನ್ನು ನಡೆಸಲಾಗುತ್ತಿದ್ದು, ಇದರ ಬಗ್ಗೆ ನಿಮಗೆ ಸಂಬಂಧಪಟ್ಟವರು ತಿಳಿಸಬೇಕಿತ್ತು ಎಂದರು.

ಬದುಕುವುದಕ್ಕೆ ಚಿಕನ್ ಅಂಗಡಿಗಳನ್ನಿಟ್ಟುಕೊಂಡಿದ್ದಾರೋ, ಮಟನ್  ಅಂಗಡಿಗಳನ್ನಿಟ್ಟುಕೊಂಡಿದ್ದಾರೋ, ಸೈಕಲ್ ಪಂಚರ್  ಅಂಗಡಿಗಳನ್ನಿಟ್ಟುಕೊಂಡಿದ್ದಾರೋ ಅವರ ಹೊಟ್ಟೆಪಾಡಿಗೆ ಹಾಕಿಕೊಂಡಿದ್ದು,  ಅವರ ಅಂಗಡಿಗಳನ್ನು ನೋಟೀಸ್‍ ನೀಡದೇ ಏಕಾಏಕಿ ತೆರವುಗೊಳಿಸುವುದು ಎಷ್ಟು ಸರಿ? ಕೆಲವೊಂದು ಮೈನಿಂಗ್ ಏರಿಯಾಗಳಲ್ಲಿ ರಸ್ತೆ ಮತ್ತು ಚರಂಡಿಗಳನ್ನು ಅಭಿವೃದ್ಧಿ ಮಾಡುವುದಕ್ಕೆ ಅಗತ್ಯವಾದಷ್ಟು ಅನುದಾನವನ್ನು ಬಿಡುಗಡೆ ಮಾಡಿಲ್ಲ, ನೀವು ಅನುದಾನವನ್ನು ತಂದು ಅಭಿವೃದ್ಧಿ ಮಾಡುತ್ತೇನೆ ಎಂದರೆ ತುಂಬು ಹೃದಯದಿಂದ ಸ್ವಾಗತಿಸುತ್ತೇನೆ ಎಂದರು.

ಕಾಂಗ್ರೆಸ್ ಯುವ ಘಟಕದ ಜಿಲ್ಲಾಧ್ಯಕ್ಷ ಫ್ರಾನ್ಸಿಸ್ ಗೆ ಸೇರಿದ ಸಮುದಾಯ ಭವನದ ಮುಂಬಾಗ ಜೆಸಿಬಿ ಮುಖಾಂತರ ಒತ್ತುವರಿ ತೆರವುಗೊಳಿಸುತ್ತಿದ್ದಾಗ ಆಕ್ರೋಶದಿಂದ ಬಂದ ಫ್ರಾನ್ಸಿಸ್  ಸಂಸದ ಎಸ್.ಮುನಿಸ್ವಾಮಿಗೆ ನೀವು ಏನು ದಬ್ಬಾಳಿಕೆ ಮಾಡುತ್ತಿದ್ದೀರಾ? ಎಂದು ಪ್ರಶ್ನಿಸಿದಾಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋದಾಗ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಈ ವೇಳೆ ನಗರಸಭೆ ಅದ್ಯಕ್ಷ ವಳ್ಳಲ್ ಮುನಿಸ್ವಾಮಿ, ಮಾಜಿ ಅದ್ಯಕ್ಷ ರಮೇಶ್ ಜೈನ್, ಬಿಜೆಪಿ ನಗರ ಘಟತಕದ ಅದ್ಯಕ್ಷ ಕಮಲನಾಥನ್, ಲೊಕೋಪಯೋಗಿ ಇಲಾಖೆ ಅಧಿಕಾರಿ ರಾಜಶೇಖರ್ ಮೊದಲಾದವರಿದ್ದರು.

Related Post

ಶೇ.೯೦ ರಷ್ಟು ದೇಶದ ಸಮುದಾಯಗಳು ಮುಖ್ಯವಾಹಿನಿ ಮಾದ್ಯಮಗಳಲ್ಲಿ, ಕಾರ್ಪೋರೇಟ್ ವಿಭಾಗದಲ್ಲಿ ಮತ್ತು ಅತ್ಯುನ್ನತ ಸರ್ಕಾರಿ ಹುದ್ದೆಗಳಲ್ಲಿ ಭಾಗವಹಿಸುವಿಕೆ ಇಲ್ಲ! : ರಾಹುಲ್ ಗಾಂಧಿ
ರಾಜಕೀಯ ಪಕ್ಷಗಳು ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಅನ್ಯಾಯ ಮಾಡಿವೆ : ಸಮುದಾಯ ಮುಖಂಡರ ಆಕ್ರೋಶ,
ಸಂವಿಧಾನ ಉಳಿಸಲು ದೇಶದ ಸಮಗ್ರತೆ ಕಾಪಾಡಲು ಬಿಜೆಪಿಯನ್ನು ಸೋಲಿಸಿ: ಮಂಜುನಾಥ್ ಅಣ್ಣಯ್ಯ

Leave a Reply

Your email address will not be published. Required fields are marked *

You missed

error: Content is protected !!