• Fri. Mar 29th, 2024

ಕುರುಬ ಸಮಾಜದೊಂದಿಗೆ ಎಲ್ಲಾ ಸಮುದಾಯ ಹಾಗೂ ಮುಸ್ಲಿಂ ಜನತೆ ನನ್ನ ಪರ ಕೆಲಸ ಮಾಡಲಿದ್ದಾರೆ : ಮಾಜಿ ಸಚಿವ ಆರ್ ವರ್ತೂರ್ ಪ್ರಕಾಶ್ 

PLACE YOUR AD HERE AT LOWEST PRICE

ಕೋಲಾರ ಕ್ಷೇತ್ರದಲ್ಲಿ ಯಾವುದೇ ಕಾರಣಕ್ಕೂ ಸಿದ್ದರಾಮಯ್ಯನವರಿಗೆ ಕುರುಬ ಸಮಾಜ ಮತ ನೀಡುವುದಿಲ್ಲ, ಕುರುಬ ಸಮಾಜ ನನ್ನ ಪರವಾಗಿ ಕೆಲಸ ಮಾಡಲಿದ್ದು, ಹೆಚ್ಚಿನ ಮತ ಕೊಡುತ್ತಾರೆ, ಕ್ಷೇತ್ರದಲ್ಲಿ ಎಲ್ಲಾ ಜನಾಂಗದವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು,ಈ ಬಾರಿ ಮುಸ್ಲಿಂ ಮತಗಳು ಸಹ ಬಿ.ಜೆ.ಪಿ. ಪಕ್ಷಕ್ಕೆ ಹಾಕಿ ನನ್ನ ಗೆಲುವಿಗೆ ಸಹಕಾರ ನೀಡಲಿದ್ದಾರೆಂದು ಮಾಜಿ ಸಚಿವ ಆರ್ ವರ್ತೂರ್ ಪ್ರಕಾಶ್ ವಿಶ್ವಾಸ ವ್ಯಕ್ತಪಡಿಸಿದರು.
 ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಸಿ.ಎಸ್. ವೆಂಕಟೇಶ್ ರವರ ಗೆಸ್ಟ್ ಹೌಸ್ ನಲ್ಲಿ ವೇಮಗಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಿ.ಜೆ.ಪಿ. ಮುಖಂಡರ ಸಭೆಯಲ್ಲಿ ಅವರು ಮಾತನಾಡುತ್ತಾ,ಚುನಾವಣಾ ಹತ್ತಿರ ಬಂದಾಗ ನಿಮ್ಮ ಗ್ರಾಮಗಳಲ್ಲಿರುವ ಬೇರೆ ಪಕ್ಷದ ಮುಖಂಡರು ನಿಮ್ಮನ್ನ ಹಾಗೂ ಕಾರ್ಯಕರ್ತರನ್ನು ಸಂಪರ್ಕಿಸಿ ಇಲ್ಲ ಸಲ್ಲದ ವಿಷಯಗಳನ್ನು ಹೇಳಿ ತಲೆ ಕೆಡಿಸುವ ಪ್ರಯತ್ನ ಮಾಡುತ್ತಾರೆ ಎಚ್ಚರಿಕೆಯಿಂದ ಇರಿ. ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರುಗಳು ನಿಮ್ಮಗಳ ಬಳಿ ಬಂದಾಗ  ನಿಮ್ಮ ಪಕ್ಷಗಳಿಂದ ದೇಶಕ್ಕೆ ಮತ್ತು ರಾಜ್ಯಕ್ಕೆ ಏನು ಉಪಯೋಗ ಆಗಿದೆಯೆಂದು ಪ್ರಶ್ನೆ ಮಾಡಿ ಎಂದು ಸೂಚಿಸಿದರು.
ಮಾಜಿ ಸಭಾಪತಿಗಳಾದ ವಿ. ಆರ್. ಸುದರ್ಶನ್ ಸ್ಥಳೀಯರಾಗಿದ್ದು ಅವರು ಗ್ರಾಮದ ವಿಷಯದ ಬಗ್ಗೆ    ಎಲ್ಲರೂ ಒಗ್ಗಟ್ಟಾಗಿ ಇರಬೇಕು ಎಂದು ನಿಮ್ಮನ್ನು ಕರೆಯುತ್ತಾರೆ.ಅವರ ನಯವಾದ ಮಾತುಗಳನ್ನು ನಂಬದೆ, ಗ್ರಾಮದಲ್ಲಿ ಜಾತಿವಾರು ಮುಖಂಡರು ಸಭೆಗಳನ್ನು ಮಾಡಿ ಭಾರತೀಯ ಜನತಾ ಪಕ್ಷಕ್ಕೆ ಮತ ನೀಡಬೇಕು ಎಂದು ಕಾರ್ಯಕರ್ತರಿಗೆ ತಿಳಿಸುವುದಲ್ಲದಡ ಹೇಳುವುದಲ್ಲದೆ ಪಕ್ಷದಿಂದ ಗ್ರಾಮಗಳ ಅಭಿವೃದ್ಧಿಗೆ ಆಗಿರುವ ಅಭಿವೃದ್ಧಿಗಳ ಬಗ್ಗೆ ಹಾಗೂ ಆಗಿರುವ ಪ್ರಯೋಜನಗಳ ಬಗ್ಗೆ ಮತ್ತು ಸರ್ಕಾರದ ಯೋಜನೆಗಳ ಬಗ್ಗೆ ತಿಳಿಸಿ ಬಿ.ಜೆ.ಪಿ.ಪರ ಮತ ಚಲಾಯಿಸುವಂತೆ ವಿನಂತಿ ಮಾಡಬೇಕೆಂದು ತಿಳಿಸಿದರು. 
ಇದೇ ಸಂದರ್ಭದಲ್ಲಿ ಬಿ.ಜೆ.ಪಿ .ಹಿರಿಯ ಮುಖಂಡ ಪೊಲೀಸ್ ಚಲಪತಿ ಮಾತನಾಡಿ ಹತ್ತು ವರ್ಷಗಳ ಕಾಲ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿರುವ ವರ್ತೂರ್ ಪ್ರಕಾಶ್ ರವರನ್ನು ನಾವು ನೀವೆಲ್ಲರೂ ಸೇರಿ ಉಳಿಸಿಕೊಳ್ಳಬೇಕು. ಅಭಿವೃದ್ಧಿಪರ ಬಡವರ ಪರ ದೀನ ದಲಿತರ ಪರವಾಗಿ ಸದಾ ಆಲೋಚಿಸುವ ಒಬ್ಬ ನಾಯಕ ಇಂತಹ ನಾಯಕನನ್ನ ಈ ಬಾರಿ ಗೆಲ್ಲಿಸಲೇಬೇಕೆಂದರು.ಅವರು ಗೆಲ್ಲಬೇಕೆಂದರೆ ನಾವು ಗ್ರಾಮಗಳಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಸಕೊಳ್ಳಬೇಕು ಎಂದು ತಿಳಿಸಿದರು 
ಈ ಸಂದರ್ಭದಲ್ಲಿ ಮುಖಂಡ ಬಿಗ್ಲಿ ಸೂರ್ಯ ಪ್ರಕಾಶ್, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಸಿ.ಎಸ್. ವೆಂಕಟೇಶ್, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ತಂಬಳ್ಳಿ ಮುನಿಯಪ್ಪ ,ನಾರಾಯಣ ಮೂರ್ತಿ, ಬಂಗ್ಯಪ್ಪ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್, ಮುಖೇಶ್ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You missed

error: Content is protected !!