• Thu. Sep 28th, 2023

PLACE YOUR AD HERE AT LOWEST PRICE

ಕೆಜಿಎಫ್:ವಿಶ್ ಪ್ರಖ್ಯಾತಿ ಪಡೆದಿರುವ ಕಮ್ಮಸಂದ್ರ ಗ್ರಾಮದ ಕೋಟಿಲಿಂಗೇಶ್ವರ ದೇಗುಲಕ್ಕೆ ಮಹಾ ಶಿವ ರಾತ್ರಿ ಪ್ರಯುಕ್ತ ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ ಕೇರಳ ಸೇರಿದಂತೆ ಹಲವಾರು ಕಡೆಗಳಿಂದ 1 ಲಕ್ಷ ಮಂದಿಗೂ ಅಧಿಕ ಭಕ್ತರ ಸಮೂಹ ಹರಿದು ಬಂದು ಪೂಜೆ ಸಲ್ಲಿಸಿರುವುದು ವಿಶೇಷವಾಗಿದೆ.

ಕೆಜಿಎಫ್ ತಾಲ್ಲೂಕಿನ ಕಮ್ಮಸಂದ್ರ ಎಂಬ ಪುಟ್ಟ ಗ್ರಾಮದಲ್ಲಿ ಲಿಂಗೈಕ್ಯ ಶ್ರೀ ಸಾಂಭ ಶಿವಮೂರ್ತಿ ಸ್ವಾಮೀಜಿಗಳು 48 ವರ್ಷಗಳ ಹಿಂದೆ ಕೋಟಿಲಿಂಗ ದೇವಾಲಯವನ್ನು ಸ್ಥಾಪನೆ ಮಾಡಿದ್ದು, ಕೋಟಿ ಲಿಂಗಗಳ ಪ್ರತಿಷ್ಠಾಪನೆ ಗುರಿ ಹೊಂದಿದ್ದು, 90 ಲಕ್ಷಕ್ಕೂ ಅಧಿಕ ಲಿಂಗಗಳ ಪ್ರತಿಷ್ಠಾಪನೆಯಾಗಿದ್ದು, ಕೇವಲ ಹಬ್ಬದ ದಿನಗಳು ಮಾತ್ರವಲ್ಲದೆ ಪ್ರತಿದಿನ ಪ್ರವಾಸಿಗಳ ದಂಡು ಹರಿದು ಬರುತ್ತದೆ.

ಮಹಾಶಿವ ರಾತ್ರಿ ಹಬ್ಬವು 50 ವರ್ಷಗಳ ನಂತರ ಶನಿವಾರ ಬಂದಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು, ದೇಗುಲದಲ್ಲಿ ನಿರ್ಮಾಣವಾಗಿರುವ 18ಕ್ಕೂ ಅಧಿಕ ದೇಗುಲಗಳಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

ತಾವೇ ಪ್ರತಿಷ್ಠಾಪಿಸಿದ ಲಿಂಗಗಳಿಗೆ ಮಹಾಶಿವರಾತ್ರಿ ದಿನ ಭಕ್ತರು ಉಪವಾಸವಿದ್ದು, ರಾತ್ರಿ ವೇಳೆಯೂ ಸಹ ಅಭಿಷೇಕ ಮಾಡಿ, ಪೂಜೆ ಸಲ್ಲಿಸಿ ರಾತ್ರಿ ಜಾಗರಣೆ ಸಹ ಇದ್ದು ಹರಕೆ ತೀರಿಸುವುದು ಇಲ್ಲಿ ವಾಡಿಕೆಯಾಗಿದೆ. ಭಾನುವಾರ ಸಹ ಭಕ್ತರ ದಂಡು ಹೆಚ್ಚಿಆಗಿ ಹರಿದು ಬಂದಿದೆ.

ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇಗುಲಕ್ಕೆ ಆಗಮಿಸುತ್ತಿದ್ದು, ಸೋಮವಾರ ಅಮಾವಾಸ್ಯೆಯಂದು ಮುಳಬಾಗಿಲು ತಾಲೂಕಿನ ಆವಣಿ ಬೆಟ್ಟದಲ್ಲಿ ವಿಜೃಂಭನೆಯ ಬ್ರಹ್ಮರಥೋತ್ಸವ ನಡೆಯಲಿದ್ದು, ಕೋಟಿಲಿಂಗ ದೇಗುಲಕ್ಕೆ ಭಾನುವಾರ ಮತ್ತು ಸೋಮವಾರವೂ ಲಕ್ಷಾಂತರ ಮಂದಿ ಆಗಮಿಸುವ ನೀರಿಕ್ಷೆ ಇದ್ದು, ಸೂಕ್ತ ಬಂದೋ ಬಸ್ತ್ ಸಹ ಏರ್ಪಡಿಸಲಾಗಿದೆ.

ಹಬ್ಬದ ಪ್ರಯುಕ್ತ ಕೋಟಿಲಿಂಗೇಶ್ವರ ದೇವಾಲಯದ ರಥೋತ್ಸವಕ್ಕೆ ಆಡಳಿತಾಧಿಕಾರಿ ಕೆ.ವಿ ಕುಮಾರಿ, ಶಾಸಕಿ ಡಾ.ರೂಪಕಲಾ ಎಂ. ಶಶಿಧರ್, ಮಾಜಿ ಕೇಂದ್ರ ಸಚಿವ ಕೆ.ಎಚ್ ಮುನಿಯಪ್ಪ, ಮಾಜಿ ಶಾಸಕ ವೈ.ಸಂಪಂಗಿ, ಎಸ್.ರಾಜೇಂದ್ರನ್, ಬಿಜೆಪಿ ಟಿಕೇಟ್ ಆಕಾಂಕ್ಷಿಗಳಾದ  ವಿ.ಮೋಹನ್ ಕೃಷ್ಣ, ಸುರೇಶ್, ಜೆಡಿಎಸ್ ಅಭ್ಯರ್ಥಿ ಡಾ.ರಮೇಶ್ ಬಾಬು, ಬಿಜೆಪಿ ರಾಜ್ಯ ಮಹಿಳಾ ಮೋರ್ಚಾಧ್ಯಕ್ಷೆ ಗೀತಾರೆಡ್ಡಿ, ಜಿಪಂ ಮಾಜಿ ಸದಸ್ಯರಾದ ಜಯಪ್ರಕಾಶ್ ನಾಯ್ಡು, ಅ.ಮು ಲಕ್ಷ್ಮೀನಾರಾಯಣ್, ಮುಖಂಡ ನಾರಾಯಣಮೂರ್ತಿ, ಕೋಟಿಲಿಂಗೇಶ್ವರ ದೇಗುಲ ಆಡಳಿತಾಧಿಕಾರಿ ಕೆ.ವಿ ಕುಮಾರಿ ಸೇರಿದಂತೆ ಅನೇಕ ಜನಪ್ರತಿನಿಧಿಗಳು, ಅಧಿಕಾರಿಗಳು, ದೇಗುಲದ ಪೂಜಾ ಕೈಂ ಕಾರ್ಯಗಳಲ್ಲಿ ಪಾಲ್ಘೋಂಡಿದ್ದರು.

Leave a Reply

Your email address will not be published. Required fields are marked *

error: Content is protected !!