• Fri. Mar 29th, 2024

PLACE YOUR AD HERE AT LOWEST PRICE

ಬಂಗಾರಪೇಟೆ:ಸರ್ವಜ್ಞ ಜಯಂತಿಯನ್ನು ಹಲವು ಕಾರಣಗಳಿಂದ ಈ ಬಾರಿ ಸರಳವಾಗಿ  ಆಚರಿಸುತ್ತಿದ್ದು, ಮುಂದಿನ ವರ್ಷದಿಂದ ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಶಾಸಕ ಎಸ್.ಎನ್.ನಾರಾಯಣಸ್ವವಾಮಿ ಭರವಸೆ ನೀಡಿದರು.

ತಾಲ್ಲೂಕು ಕಛೇರಿಯ ಭೀಮ ಸಂಭಾಂಗಣದಲ್ಲಿ ತಾಲ್ಲೂಕು ಆಡಳಿತದವತಿಯಿಂದ ನಡೆದ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ, ಮುಂದಿನ ವರ್ಷದಿಂದ ಅದ್ದೂರಿಯಾಗಿ ಸರ್ವಜ್ಞ ಜಯಂತಿ ಆಚರಿಸಲಾಗುವುದು ಎಂದರು.

ಪೂರ್ವಬಾವಿ ಸಭೆಯನ್ನು ಸರಿಯಾದ ಸಮಯಕ್ಕೆ ಮಾಡಲು ಆಗಿಲ್ಲ. ಆದ್ದರಿಂದ ಜಯಂತಿಯನ್ನು ಸರಳವಾಗಿ ಆಚರಿಸಲಾಗುತ್ತಿದೆ. ಜಯಂತಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿರುವ ಸಮುದಾಯಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.

ಸರ್ವಜ್ಞರವರ ಹುಟ್ಟು ಮತ್ತು ಅವರ ಜೀವನದ ಬಗ್ಗೆ ಎಲ್ಲರೂ ತಿಳಿದುಕೊಳ್ಳುವ ಅವಶ್ಯಕತೆ ಇದೆ ಎಂದ ಅವರು ಜನಸಾಮಾನ್ಯರ ಬದುಕಿಗೆ ಹೊಂದಿಕೊಳ್ಳು ರೀತಿಯಲ್ಲಿ ತ್ರಿಪದಿಗಳ ಮೂಲಕ ಸಮಾಜ ಬದಲಾವಣೆ ಶ್ರಮಿಸಿದ್ದಾರೆ ಎಂದು ಸರ್ವಜ್ಞರ ಗುಣಗಾನ ಮಾಡಿದರು.

ಹಿಂದುಳಿದ ಸಮುದಾಯಯಗಳು ಒಂದಾಗಿ ಒಗ್ಗಟ್ಟಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಸರ್ವಜ್ಞ ಜಯಂತಿಯನ್ನು ಜಾರಿಗೆ ತಂದರು. ಜಯಂತಿ ಮೂಲಕವಾಗಿ ಕುಂಬಾರ ಸಮಾಜ ಒಂದಾಗಲು ಅವಕಾಶವಾಗಿದೆ ಎಂದರು.

ಕುಂಬಾರ ಸಮುದಾಯ ಹಿಂದಿನ ಕಾಲದಲ್ಲಿ ಮಡಿಕೆ ಮಾಡಿ ಸಮಾಜಕ್ಕೆ ನೀಡದೆ ಇದ್ದಿದ್ದರೆ ನಾವೆಲ್ಲಾ ಊಟ ಮಾಡಲು ಪರದಾಡಬೇಕಿತ್ತು. ಸಮಾಜದ ಉನ್ನತಿಗೆ ಕುಂಬಾರ ಸಮುದಾಯದ ಕೊಡುಗೆ ಬಹುದೊಡ್ಡದಾಗಿದೆ ಎಂದರು.

ಕುಂಬಾರ ಸಮುದಾಯಕ್ಕೆ ಒಂದು ಜಾಗವನ್ನು ನೀಡಲಾಗಿದೆ. ಅದು ಒತ್ತುವರಿಯಾಗಿರುವ ಕಾರಣ ಸಮಸ್ಯೆ ಏರ್ಪಟ್ಟಿದ್ದು ಮುಂದಿನ ದಿನಗಳಲ್ಲಿ ಸರ್ವೆ ನಡೆಸಿ ಆ ಜಾಗವನ್ನು ಗುರುತಿಸಿ ಅಲ್ಲಿ ಸಮುದಾಯ ಭವನ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.

ಸಂಘದ ಅದ್ಯಕ್ಷರಾದ ಮಂಜುನಾಥರವರಿಗೆ ಅನ್ಯಾಯವಾಗಿದೆ. ಮುಂದಿನ ದಿನಗಳಲ್ಲಿ ಅವರಿಗೆ ಪುರಸಭೆ ಅದ್ಯಕ್ಷರಾಗುವ ಅವಕಾಶಗಳನ್ನು ಕಲ್ಪಸಲಾಗುವುದು. ಕುಂಬಾರ ಸಮುದಾಯದಕ್ಕೆ ನಾನು ಸದಾ ಬೆಂಬಲವಾಗಿರುತ್ತೇನೆ ಎಂದು ಭರವಸೆ ನೀಡಿದರು.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅದ್ಯಕ್ಷರೂ ಆದ ತಹಶೀಲ್ದಾರ್ ದಯಾನಂದ ಮತ್ತು ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ತಾಲ್ಲೂಕು ಅದ್ಯಕ್ಷ ಎಲ್.ರಾಜಪ್ಪ ಕಾರ್ಯಕ್ರಮವನ್ನು ಕುರಿತು ಮಾತನಾಡಿ, ಸರ್ವಜ್ಞ ಕವಿಗಳ ಸಾಧನೆಗಳನ್ನು ಸಭೆಗೆ ವಿವರಿಸಿದರು.

ಈ ಸಂದರ್ಭದಲ್ಲಿ ಬಿಇಓ ಸುಖನ್ಯ, ಕುಂಬಾರ ಸಂಘದ ಗೌರವಾದ್ಯಕ್ಷ ಆದಿನಾರಾಯಣಪ್ಪ, ಅದ್ಯಕ್ಷ ಎಂ.ಮಂಜುನಾಥ್, ಕುಂಬಾರ ಯುವ ಸೇನೆಯ ತಾಲ್ಲೂಕು ಅದ್ಯಕ್ಷ ಅನಿಲ್ ಕುಮಾರ್, ಸರ್ಕಾರಿ ನೌಕರರ ಸಂಘದ ಅದ್ಯಕ್ಷ ಅಪ್ಪಯ್ಯಗೌಡ, ಡಿಸಿಸಿ ಬ್ಯಾಂಕ್ ನಿರ್ಧೇಶಕ ಪಿಚ್ಚಹಳ್ಳಿ ಗೋವಿಂದರಾಜು, ಗೊಲ್ಲ ಸಮುದಾಯದ ಮುಖಂಡ ಕಾರಹಳ್ಳಿ ಸೀನಪ್ಪ,ಕುಂಬಾರ ಸಂಘದ ಜಿಲ್ಲಾ ನಿರ್ಧೇಶಕರಾದ ಶ್ರೀರಾಮಪ್ಪ, ಪುರಸಭೆ ಸದಸ್ಯ ಗೋವಿಂದ, ಮುಖಂಡರಾದ ಜಯರಾಮ್, ಸೋಮಪ್ಪ, ಪರಮೇಶ್, ಪ್ರಸನ್ನ, ದೋಣಿಮಡಗು ಸುಬ್ರಮಣಿ, ಗುಲ್ಲಹಳ್ಳಿ ವೆಂಕಟೇಶ್, ಮಾದಮುತ್ತನಹಳ್ಳಿ ಶ್ರೀನಿವಾಸ್, ಗೋಪೇನಹಳ್ಳಿ ಮುರಳಿ, ಬಿಳ್ಳೇರಹಳ್ಳಿ ವೆಂಕಟೇಶ್, ಶಿಕ್ಷಕರಾದ ಕೃಷ್ಣಪ್ಪ, ಶ್ರೀನಾಥ್, ಕೇಶವಮೂರ್ತಿ ಮೊದಲಾವರಿದ್ದರು,

Leave a Reply

Your email address will not be published. Required fields are marked *

You missed

error: Content is protected !!