• Sat. Apr 20th, 2024

ಕೋಲಾರ I ಸರ್ಕಾರ ಮತ್ತು ಮಾಧ್ಯಮಗಳ ನಡುವೆ ಸೇತುವೆಯಾಗಿ ವಾರ್ತಾ ಇಲಾಖೆ ಕೆಲಸ-ಸಹಾಯಕ ನಿರ್ದೇಶಕಿ ಸೌಮ್ಯ

PLACE YOUR AD HERE AT LOWEST PRICE

ಸರ್ಕಾರ ಮತ್ತು ಮಾಧ್ಯಮಗಳ ನಡುವೆ ವಾರ್ತಾ ಮತ್ತು ಸಾರ್ವಜನಿಕ ಸಂರ್ಪಕ ಇಲಾಖೆ ಸೇತುವೆ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಸೌಮ್ಯ ತಿಳಿಸಿದರು.

ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ವಾರ್ತಾ ಇಲಾಖೆ ಮತ್ತು ಮಾಧ್ಯಮಗಳ ನಡುವೆ ಸಮನ್ವಯತೆ ಮೂಡಿಸಲು ಮತ್ತು ಇಲಾಖೆಯಿಂದ ಪತ್ರಕರ್ತರಿಗೆ ಮತ್ತು ಸಣ್ಣ ಪತ್ರಿಕೆಗಳಿಗೆ ಆಗಬೇಕಾದ ಸೌಲಭ್ಯಗಳ ಕುರಿತು ಇಲಾಖೆ ಸಹಾಯಕ ನಿದೇಶಕರೊಂದಿಗೆ ಆಯೋಜಿಸಿದ್ದ ಸಂವಾದದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಾರ್ವಜನಿಕರಿಗೆ ಮಾಹಿತಿಗಳನ್ನು ತಲುಪಿಸುವ ಜವಾಬ್ದಾರಿಯನ್ನು ಹೊತ್ತಿರುವ ಮಾಧ್ಯಮಗಳಿಗೆ ಇರುವ ಸಮಸ್ಯೆಗಳನ್ನು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಲು ಪ್ರಯತ್ನಿಸುವುದಾಗಿ ಅವರು ತಿಳಿಸಿದರು.

ಜಿಲ್ಲಾಡಳಿತ ಕಚೇರಿಯು ನಗರದಿಂದ ಸುಮಾರು ೮-೧೦ ಕಿ.ಮಿ. ದೂರ ಇರುವುದರಿಂದ ಯಾವೂದೇ ಕಾರ್ಯಕ್ರಮಗಳ ಕುರಿತು ಮಾಧ್ಯಮಗಳಿಗೆ ಒಂದು ದಿನದ ಮುಂಚೆ ಮಾಹಿತಿ ನೀಡಬೇಕು, ಪತ್ರಕರ್ತರಿಗೆ ಜಿಲ್ಲಾಡಳಿತ ಕಚೇರಿಯಲ್ಲಿ ವಿಶ್ರಾಂತಿ ಕೊಠಡಿ ಸೌಲಭ್ಯ ಅಗತ್ಯತೆ ಇದೆ. ಸಾಧ್ಯವಾದಷ್ಟು ಸಭೆಗಳನ್ನು ಪತ್ರಿಕಾ ಗೋಷ್ಠಿಗಳನ್ನು ಮಧ್ಯಾಹ್ನದ ಒಳಗೆ ಆಯೋಜಿಸಿದರೆ ಅನುವುಂಟಾಗುವುದು, ಸಂಜೆ ವೇಳೆ ಮಾಧ್ಯಮದವರಿಗೆ ಕೆಲಸದ ಹೆಚ್ಚಿನ ಒತ್ತಡ ಇರುವುದನ್ನು ಜಿಲ್ಲಾ ಆಡಳಿತದ ಗಮನಕ್ಕೆ ತರಲಾಗುವುದು, ಚುನಾವಣೆ ಹಾಗೂ ತುರ್ತು ಸಂದರ್ಭಗಳಲ್ಲಿ ಮಾತ್ರ ಹೊಂದಿಕೊಂಡು ಹೋಗಬೇಕಾಗಿರುವುದು ಅನಿವಾರ್ಯವಾಗುವುದು ಎಂದು ತಿಳಿಸಿದರು.

ಇದಕ್ಕೂ ಮುನ್ನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ಥಳೀಯ ಪತ್ರಿಕೆಗಳ ಉಳಿವಿಗೆ ವಾರ್ತಾ ಇಲಾಖೆಯು ಕೈಗೊಳ್ಳಬೇಕಾದ ಕ್ರಮಗಳು, ಪತ್ರಕರ್ತರ ಜೊತೆ ವಾರ್ತಾ ಇಲಾಖೆ ಕೊಂಡಿಯಂತೆ ಕಾರ್ಯನಿರ್ವಹಿಸುವ ಬಗ್ಗೆ, ಪತ್ರಕರ್ತರನ್ನು ಕಾರ್ಯಕ್ರಮಕ್ಕೆ ಕರೆದುಕೊಂಡು ಹೋದ ಸಂದರ್ಭದಲ್ಲಿ ಅವರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುವ ಬಗ್ಗೆ ಮಾತನಾಡಿದರು.
ಸಮರ್ಪಕವಾಗಿ ಜಾಹಿರಾತುಗಳನ್ನು ಕೊಡಿಸುವ ನಿಟ್ಟಿನಲ್ಲಿ ಇಲಾಖೆ ವತಿಯಿಂದ ಕ್ರಮ ವಹಿಸುವುದು,ಕೆಲವು ಕಾರ್ಯಕ್ರಮಗಳಿಗೆ

ಸಂವಾದದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಖಜಾಂಚಿ ಎ.ಜಿ.ಸುರೇಶ್‌ಕುಮಾರ್, ಹಿರಿಯ ಪತ್ರಕರ್ತರಾದ ಅಬ್ಬಣಿಶಂಕರ್, ಹೆಚ್.ಎನ್.ಮುರಳೀಧರ್, ಕೋ.ನಾ.ಮಂಜುನಾಥ್, ಎನ್.ಮುನಿವೆಂಕಟೇಗೌಡ, ಎಸ್.ರವಿಕುಮಾರ್, ಎಸ್.ಚಂದ್ರಶೇಖರ್, ಸಮೀರ್‌ಅಹಮದ್, ರಾಜೇಂದ್ರ ಸಿಂಹ, ಎಸ್.ರವಿಕುಮಾರ್, ರಮೇಶ್, ನಾಗರಾಜ್ ಮಾತನಾಡಿದರು.
ವೇದಿಕೆಯಲ್ಲಿ ಹಿರಿಯ ಪತ್ರಕರ್ತರಾದ ಕೆ.ಬಿ.ಜಗದೀಶ್, ಸ್ಕಂದಕುಮಾರ್, ಎಸ್.ಸಚ್ಚಿದಾನಂದ, ಬೆಟ್ಟಣ್ಣ, ಆಸೀಫ್‌ಪಾಷ, ಸಿ.ಕೆ.ಲಕ್ಷ್ಮಣ್, ಶಮ್ಗರ್, ಎನ್.ಸತೀಶ್, ಕೆ.ಜಿ.ಮಂಜುನಾಥ್, ಎಂ.ಲಕ್ಷ್ಮಣ, ಮದನ್, ಎನ್.ಶಿವಕುಮಾರ್, ಎನ್.ಗಂಗಾಧರ್, ಗೋಪಿ, ಸುಹಾಸ್, ಚಂದ್ರು, ಜೆ.ಎಂಬರೀಶ್, ನವೀನ್ ವಾರ್ತಾಇಲಾಖೆಯ ಅಧಿಕಾರಿಗಳಾದ ಮಂಜೇಶ್, ಸುಧಾ ಮುಂತಾದವರಿದ್ದರು.

ಸುದ್ದಿ ಓದಿ ಹಂಚಿ:

Related Post

2024ರ ಲೋಕಸಭಾ ಚುನಾವಣೆ ಸಂವಿಧಾನ ಪರ ಮತ್ತು ಸಂವಿಧಾನ ವಿರೋಧಿ ಧೋರಣೆ ಹಾಗೂ ಮನಸ್ಥಿತಿಗಳ ನಡುವಿನ ಯುದ್ಧವಾಗಿದೆ – ಎಂ.ಎಲ್.ಸಿ. ಸುಧಾಮದಾಸ್
ಶೇ.೯೦ ರಷ್ಟು ದೇಶದ ಸಮುದಾಯಗಳು ಮುಖ್ಯವಾಹಿನಿ ಮಾದ್ಯಮಗಳಲ್ಲಿ, ಕಾರ್ಪೋರೇಟ್ ವಿಭಾಗದಲ್ಲಿ ಮತ್ತು ಅತ್ಯುನ್ನತ ಸರ್ಕಾರಿ ಹುದ್ದೆಗಳಲ್ಲಿ ಭಾಗವಹಿಸುವಿಕೆ ಇಲ್ಲ! : ರಾಹುಲ್ ಗಾಂಧಿ
ರಾಜಕೀಯ ಪಕ್ಷಗಳು ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಅನ್ಯಾಯ ಮಾಡಿವೆ : ಸಮುದಾಯ ಮುಖಂಡರ ಆಕ್ರೋಶ,

Leave a Reply

Your email address will not be published. Required fields are marked *

You missed

error: Content is protected !!