• Fri. Apr 19th, 2024

PLACE YOUR AD HERE AT LOWEST PRICE

ಬಂಗಾರಪೇಟೆ:ಪಟ್ಟಣದ ಕುಂಬಾರಪಾಳ್ಯದ ಬಳಿ ಇರುವ ರೈಲ್ವೆ ಅಂಡರ್ ಪಾಸ್ ಸಮಸ್ಯೆ ಮತ್ತು ಇತರೆ ಸಮಸ್ಯೆಗಳ ಬಗ್ಗೆ ಸಂಸದ ಎಸ್.ಮುನಿಸ್ವಾಮಿರವರ ಗಮನಕ್ಕೆ ತಂದು ಆದಷ್ಟು ಬೇಗನೆ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಪುರಸಬೆ ಮಾಜಿ ಅದ್ಯಕ್ಷ ಹಾಲಿ ಸದಸ್ಯ ಕೆ.ಚಂದ್ರಾರೆಡ್ಡಿ ಭರವಸೆ ನೀಡಿದರು.

ಅವರು ತಾಲ್ಲೂಕು ಕಛೇರಿಯ ಭೀಮ ಸಂಭಾಂಗಣದಲ್ಲಿ ತಾಲ್ಲೂಕು ಆಡಳಿತದವತಿಯಿಂದ ನಡೆದ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಕುಂಬಾರಪಾಳ್ಯದ ಯುವಕರು ನನ್ನ ಬಳಿ ಸಮಸ್ಯೆ ಹೇಳಿಕೊಂಡಿದ್ದು ಆ ಬಗ್ಗೆ ಪರಿಶೀಲಿಸಿದ್ದೇನೆ.

ಆದಷ್ಟು ಬೇಗನೆ ಸಮಸ್ಯೆ ಬಗ್ಗೆ ಸಂಸದರ ಗಮನಕ್ಕೆ ತಂದು ಅವರನ್ನು ಸ್ಥಳಕ್ಕೆ ಕರೆಸಿ ಅಲ್ಲಿನ ವಾಸಿಗಳಿಗೆ ಮತ್ತು ಆ ರಸ್ತೆಯಲ್ಲಿ ಸಂಚರಿಸುವವರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಕುಂಬಾರ ಸಮುದಾಯದ ಎಲ್ಲರೂ ಒಗ್ಗಟ್ಟಿನಿಂದ ಇರಬೇಕು ಎಂದ ಅವರು ಸಮುದಾಯದ ಅಭಿವೃದ್ಧಗೆ ಸರ್ಕಾರದಿಂದ ಏನೆಲ್ಲಾ ಸೌಲತ್ತುಗಳು ಸಿಗುತ್ತದೋ ಅವುಗಳನ್ನು ಕೊಡಲಿಸಲು ನಾನು ಸದಾ ಸಿದ್ದನಿದ್ದೇನೆ ಎಂದರು.

ಕುಂಬಾರ ಸಮುದಾಯಕ್ಕೆ ಪುರಸಭೆಯಿಂದ ನಿವೇಷನ ನೀಡಲಾಗಿದ್ದು ಆ ನಿವೇಷನದಲ್ಲಿ ಉತ್ತಮವಾದ ಕಟ್ಟಡವನ್ನು ಕಟ್ಟಿಕೊಂಡಿರುವುದನ್ನು ಸ್ವಾಗತಿಸಿದ ಅವರು ಕುಂಬಾರ ಸಮುದಾಯದ ಅಭಿವೃದ್ಧಿಗೆ ತಮ್ಮ ಬೆಂಬಲ ಸದಾ ಇರುತ್ತದೆ ಎಂದು ಭರವಸೆ ನೀಡಿದರು.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅದ್ಯಕ್ಷರೂ ಆದ ತಹಶೀಲ್ದಾರ್ ದಯಾನಂದ ಮತ್ತು ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ತಾಲ್ಲೂಕು ಅದ್ಯಕ್ಷ ಎಲ್.ರಾಜಪ್ಪ ಕಾರ್ಯಕ್ರಮವನ್ನು ಕುರಿತು ಮಾತನಾಡಿ, ಸರ್ವಜ್ಞ ಕವಿಗಳ ಸಾಧನೆಗಳನ್ನು ಸಭೆಗೆ ವಿವರಿಸಿದರು.

ಈ ಸಂದರ್ಭದಲ್ಲಿ ಬಿಇಓ ಸುಖನ್ಯ, ಕುಂಬಾರ ಸಂಘದ ಗೌರವಾದ್ಯಕ್ಷ ಆದಿನಾರಾಯಣಪ್ಪ, ಅದ್ಯಕ್ಷ ಎಂ.ಮಂಜುನಾಥ್, ಕುಂಬಾರ ಯುವ ಸೇನೆಯ ತಾಲ್ಲೂಕು ಅದ್ಯಕ್ಷ ಅನಿಲ್ ಕುಮಾರ್, ಸರ್ಕಾರಿ ನೌಕರರ ಸಂಘದ ಅದ್ಯಕ್ಷ ಅಪ್ಪಯ್ಯಗೌಡ, ಡಿಸಿಸಿ ಬ್ಯಾಂಕ್ ನಿರ್ಧೇಶಕ ಪಿಚ್ಚಹಳ್ಳಿ ಗೋವಿಂದರಾಜು, ಗೊಲ್ಲ ಸಮುದಾಯದ ಮುಖಂಡ ಕಾರಹಳ್ಳಿ ಸೀನಪ್ಪ, ಬೋವಿ ಸಮುದಾಯದ ಮುಖಂಡ ಜೆಸಿಬಿ ನಾರಾಯಣಪ್ಪ, ಕುಂಬಾರ ಸಂಘದ ಜಿಲ್ಲಾ ನಿರ್ಧೇಶಕರಾದ ಶ್ರೀರಾಮಪ್ಪ, ಪುರಸಭೆ ಸದಸ್ಯ ಗೋವಿಂದ, ಮುಖಂಡರಾದ ಜಯರಾಮ್, ಸೋಮಪ್ಪ, ಪರಮೇಶ್, ಪ್ರಸನ್ನ, ದೋಣಿಮಡಗು ಸುಬ್ರಮಣಿ, ಗುಲ್ಲಹಳ್ಳಿ ವೆಂಕಟೇಶ್, ಮಾದಮುತ್ತನಹಳ್ಳಿ ಶ್ರೀನಿವಾಸ್, ಗೋಪೇನಹಳ್ಳಿ ಮುರಳಿ, ಬಿಳ್ಳೇರಹಳ್ಳಿ ವೆಂಕಟೇಶ್, ಶಿಕ್ಷಕರಾದ ಕೃಷ್ಣಪ್ಪ, ಶ್ರೀನಾಥ್, ಕೇಶವಮೂರ್ತಿ ಮೊದಲಾವರಿದ್ದರು.

Related Post

ಶೇ.೯೦ ರಷ್ಟು ದೇಶದ ಸಮುದಾಯಗಳು ಮುಖ್ಯವಾಹಿನಿ ಮಾದ್ಯಮಗಳಲ್ಲಿ, ಕಾರ್ಪೋರೇಟ್ ವಿಭಾಗದಲ್ಲಿ ಮತ್ತು ಅತ್ಯುನ್ನತ ಸರ್ಕಾರಿ ಹುದ್ದೆಗಳಲ್ಲಿ ಭಾಗವಹಿಸುವಿಕೆ ಇಲ್ಲ! : ರಾಹುಲ್ ಗಾಂಧಿ
ರಾಜಕೀಯ ಪಕ್ಷಗಳು ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಅನ್ಯಾಯ ಮಾಡಿವೆ : ಸಮುದಾಯ ಮುಖಂಡರ ಆಕ್ರೋಶ,
ಸಂವಿಧಾನ ಉಳಿಸಲು ದೇಶದ ಸಮಗ್ರತೆ ಕಾಪಾಡಲು ಬಿಜೆಪಿಯನ್ನು ಸೋಲಿಸಿ: ಮಂಜುನಾಥ್ ಅಣ್ಣಯ್ಯ

Leave a Reply

Your email address will not be published. Required fields are marked *

You missed

error: Content is protected !!