• Thu. Mar 28th, 2024

PLACE YOUR AD HERE AT LOWEST PRICE

ಕೆಜಿಎಫ್:ಘಟ್ಟಮಾದಮಂಗಲ ಗ್ರಾಮ ಪಂಚಾಯ್ತಿ ಅಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಜಯರಾಮರೆಡ್ಡಿ 11 ಮತಗಳನ್ನು ಪಡೆಯುವ ಮೂಲಕ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಘಟ್ಟಮಾದಮಂಗಲ ಗ್ರಾಮ ಪಂಚಾಯ್ತಿಯಲ್ಲಿ ಅವಿಶ್ವಾಸ ನಿರ್ಣಯದಿಂದಾಗಿ ಅಧ್ಯಕ್ಷ ಸ್ಥಾನವು ತೆರವುಗೊಂಡಿದ್ದರಿಂದ ಇಂದು ತೆರವುಗೊಂಡಿದ್ದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಯನ್ನು  ನಿಗದಿಪಡಿಸಲಾಗಿತ್ತು.

ಘಟ್ಟಮಾದಮಂಗಲ ಗ್ರಾಮ ಪಂಚಾಯ್ತಿಯಲ್ಲಿ ಒಟ್ಟು 17 ಸದಸ್ಯರು ಇದ್ದು ಎಲ್ಲಾ 17 ಗ್ರಾಮ  ಪಂಚಾಯ್ತಿ ಸದಸ್ಯರು ಚುನಾವಣೆ  ಪ್ರಕ್ರಿಯೆಯಲ್ಲಿ ಪಾಲ್ಗೋಂಡಿದ್ದರು. ಬೆಳಗ್ಗೆ 10 ಗಂಟೆಗೆ ನಾಮಪತ್ರ ಪ್ರಕ್ರಿಯೆ ಪ್ರಾರಂಭವಾಗುತ್ತಿದ್ದಂತೆ ಸದಸ್ಯ ಜಯರಾಮರೆಡ್ಡಿ,ಹರಿಕೃಷ್ಣ,ಮುರಳಿ 3 ಸದಸ್ಯರು ಚುನಾವಣಾಧಿಗಳಿಗೆ ನಾಮಪತ್ರಗಳನ್ನು ಸಲ್ಲಿಸಿದರು.

3 ಅಭ್ಯರ್ಥಿಗಳ ನಾಮಪತ್ರಗಳನ್ನು ಪರಿಶೀಲಿಸಿದ ಚುನಾವಣಾಧಿಕಾರಿಗಳು 3 ನಾಮಪತ್ರಗಳು  ಕ್ರಮಬದ್ದವಾಗಿದೆ ಎಂದು ನಾಮಪತ್ರಗಳನ್ನು ಸ್ವೀಕರಿಸಿದರು. 11.30 ರಿಂದ 12 ಗಂಟೆಯವರೆಗೆ  ನಾಮಪತ್ರಗಳನ್ನು ಹಿಂಪಡೆಯಲು ಅವಕಾಶವನ್ನು ನೀಡಲಾಗಿತ್ತು ಈ ವೇಳೆ  ಮುರಳಿ  ತಮ್ಮ ನಾಮಪತ್ರವನ್ನು ಹಿಂಪಡೆದ ಹಿನ್ನಲೆಯಲ್ಲಿ ಚುನಾವಣಾ ಕಣದಲ್ಲಿ ಜಯರಾಮರೆಡ್ಡಿ ಹಾಗೂ ಹರಿಕೃಷ್ಣ ಉಳಿದರು.

17 ಸದಸ್ಯರು ಮತ  ಚಾಲಾಯಿಸಿದರು. ಮತ ಏಣಿಕೆಯಲ್ಲಿ ಜಯರಾಮರೆಡ್ಡಿ ಪರವಾಗಿ 11 ಮತಗಳು ಚಾಲವಣೆಗೊಂಡರೆ, ಹರಿಕೃಷ್ಣ ಪರವಾಗಿ 5 ಮತಗಳು ಚಲಾವಣೆಗೊಂಡು 1 ಮತ ಅಸಿಂದುಗೊಂಡಿದೆ ಎಂದುಚುನಾವಣಾಧಿಕಾರಿ ರಮೇಶ್ ಪ್ರಕಟಿಸಿದರು.

ಚುನಾವಣೆಯಲ್ಲಿ ಜಯರಾಮರೆಡ್ಡಿ ಜಯಗಳಿಸಿದ್ದಾರೆ ಎಂದು ಚುನಾವಣಾಧಿಕಾರಿಗಳು ಘೋಷಿಸುತ್ತಿದ್ದಂತೆ ಘಟ್ಟಮಾದಂಗಲ ಗ್ರಾಮ ಪಂಚಾಯ್ತಿ ಕಚೇರಿ ಹೊರ ಭಾಗದಲ್ಲಿ ನೆರೆದಿದ್ದ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ನೂತನ ಅಧ್ಯಕ್ಷ ಜಯರಾಮರೆಡ್ಡಿ ಮಾತನಾಡಿ, ಕಳೆದ 2 ವರ್ಷಗಳಿಂದ ಸತತವಾಗಿ ಹರಿಕೃಷ್ಣ ವಿರುದ್ಧ ಅವಿಶ್ವಾಸ ಮಂಡನೆಗೆ ಪ್ರಯತ್ನ ಜಾರಿಯಲ್ಲಿ ಇತ್ತು ಆದರೆ ಇದೀಗ ದೈವ ಇಚ್ಚೆಯಂತೆ ಅವಿಶ್ವಾಸ ಮಂಡಿಸಿ ಹರಿಕೃಷ್ಣರನ್ನು ಪದಚ್ಯುತಿಗೊಳಿಸಿದ ಹಿನ್ನಲೆಯಲ್ಲಿ ಚುನಾವಣೆ ನಡೆಯಿತು.

ನನ್ನ ಆಯ್ಕೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಹಾಗೂ ಉಳಿಕೆ ಅವಧಿಯನ್ನು ಶಾಸಕಿ ಡಾ.ರೂಪಕಲಾ ಎಂ ಶಶಿಧರ್ ರ ಮಾರ್ಗದರ್ಶನದಲ್ಲಿ ಉತ್ತಮವಾದ ಆಡಳಿತವನ್ನು ನೀಡುತ್ತೇನೆ ಮತ್ತು ಪ್ರತಿ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವತ್ತ ಗಮನಹರಿಸುತ್ತೇನೆ ಎಂದು ಹೇಳಿದರು.

ಈ ವೇಳೆ ಹಿರಿಯ ಕಾಂಗ್ರೆಸ್ ಮುಖಂಡರಾದ ಪದ್ಮನಾಭರೆಡ್ಡಿ,ಮಾಜಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ರಾಮಕೃಷ್ಣರೆಡ್ಡಿ, ಪುರುಷೋತ್ತಮರೆಡ್ಡಿ,ಏಕಾಂತ,ಮಾರಿಕುಪ್ಪ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಜಲಜಲಾಕ್ಷಿಶಿವ ಅಮರೇಶ್‍ಬಾಬು ,ದಶರಥ್‍ರೆಡ್ಡಿ ಹಾಗೂ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಸತ್ಯವತಿ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *

You missed

error: Content is protected !!