• Fri. Mar 29th, 2024

PLACE YOUR AD HERE AT LOWEST PRICE

ಮಾಲೂರು:ಕೆ.ಜಿ.ಹಳ್ಳಿ ಗ್ರಾಪಂ ವ್ಯಾಪ್ತಿಯ ಊರುಗುರ್ಕಿ ಗ್ರಾಮದಲ್ಲಿ ಜಿಲ್ಲೆಯಲ್ಲೇ ಮೊದಲು ಘನ ತ್ಯಾಜ್ಯ ಸಂಗ್ರಹಣಾ ಅಭಿಯಾನವನ್ನು ಊರುಗುರ್ಕಿ ಗ್ರಾಮದಲ್ಲಿ ಹಮ್ಮಿಕೋಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಕೆ.ಜಿ.ಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅಧಿಕಾರಿ ಮಂಜುಳ ರವರು ಗ್ರಾಮದ ಎಲ್ಲಾ ಮನೆಗಳವರು ತ್ಯಾಜ್ಯ ನೀಡಿ ಸಹಕರಿಸಿ ವಾರದಲ್ಲಿ ಎರಡು ದಿನ ನಿಮ್ಮಊರಿಗೆ ಸ್ವಚ್ಚತಾ ವಾಹಿನಿ ವಾಹನ ಕಳುಹಿಸಿ ಕೋಡಲಾಗುವುದು.

 

ಪ್ರತಿ ಗ್ರಾಮ ತ್ಯಾಜ್ಯ ಮುಕ್ತ ಮಾಡಲು ಸರ್ಕಾರಗಳು ಪಣತೊಟ್ಟಿದ್ದು ಅದರಂತೆ ಗ್ರಾಮ ಪಂಚಾಯಿತಿ ಹಗಲಿರುಳು ಶ್ರಮಿಸುತ್ತಿದೆ. ಇದರಲ್ಲಿ ಎಲ್ಲರ ಪಾತ್ರ ಮುಖ್ಯ  ಎಲ್ಲರೂ ತ್ಯಾಜ್ಯ ನೀಡಿ ಒಳ್ಳೇ ಪರಿಸರ ಕಾಪಾಡಲು ಪ್ರತಿಯೂಬ್ಬರಿಗೆ  ಮನವಿ ಮಾಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅಧಿಕಾರಿ ಮಂಜುಳ  ಎನ್.ಆರ್, ಗ್ರಾಮ ಪಂಚಾಯ್ತಿ ಅದ್ಯಕ್ಷರಾದ ಅರುಣಮ್ಮ  ಶೀನಿವಾಸ್ ,ಸ್ವಚ್ಚತಾ ವಾಹಿನಿ ವಾಹನದ ಪವಿತ್ರ ,ಕೃಪಾ, ನೀಲಮ್ಮ ಸಾಹಸ್ ಸಂಸ್ಥೆಯ ಮಂಜುನಾಥ್ ,ಒಕ್ಕೂಟದ ಅದ್ಯಕ್ಷರಾದ ರಾಜೇಶ್ವರಿ ಮಂಜುನಾಥ್ , ಎಂ.ಬಿ.ಕೆ. ಶಕುಂತಲ.ವಿ ಜಲಗಾರ ಮುನಿಶಾಮಿಗೌಡ, ಸದಸ್ಯರಾದ ವಿಜಯ್ಕುಮಾರ್, ಸರಸ್ವತಮ್ಮ, ಅನಿತಾ ಮತ್ತು ಊರುಗುರ್ಕಿ ಗ್ರಾಮದ ನಿವಾಸಿಗಳು ಹಾಜರಿದ್ದರು.

 

Leave a Reply

Your email address will not be published. Required fields are marked *

You missed

error: Content is protected !!