• Tue. Apr 23rd, 2024

ಕೋಲಾರ I ಕ್ಯಾಲನೂರಿನಲ್ಲಿ ಎಸ್ಪಿ ನೇತೃತ್ವದಲ್ಲಿ ಪೊಲೀಸರ ಕಾರ್ಯಾಚರಣೆ

PLACE YOUR AD HERE AT LOWEST PRICE

ಕೋಲಾರ ತಾಲ್ಲೂಕಿನ ಕ್ಯಾಲನೂರು ಗ್ರಾಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಅವರ ನೇತೃತ್ವದಲ್ಲಿ ಸರ್ಕಾರದ ನಿಯಮಗಳ ಉಲ್ಲಂಘನೆ ಕುರಿತಂತೆ ಹಾಗೂ ಶಾಂತಿ ಸುವ್ಯವಸ್ಥೆಗಾಗಿ ಕಾರ್ಯಾಚರಣೆ ನಡೆಸಿ ಅಕ್ರಮ ತಂಬಾಕು ಮಾರಾಟ ಹಿನ್ನಲೆಯಲ್ಲಿ ೯೦ ಪ್ರಕರಣ ದಾಖಲಿಸಲಾಯಿತು.

ಎಸ್ಪಿ ಅವರೊಂದಿಗೆ ಅಪರ ಎಸ್ಪಿ ಭಾಸ್ಕರ್, ಕೋಲಾರ ಉಪವಿಭಾಗದ ಡಿವೈಎಸ್‌ಪಿ ಮುರಳೀಧರ್, ಸಶಸ್ತ್ರ ಮೀಸಲು ಪಡೆ ಡಿವೈಎಸ್‌ಪಿ ಮಹೇಶ್, ವೃತ್ತ ನಿರೀಕ್ಷಕ ವೆಂಕಟೇಶ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತು.

ಸದರಿ ಕಾರ್ಯಾಚರಣೆಯಲ್ಲಿ ಗ್ರಾಮದಲ್ಲಿನ ಮೆಡಿಕಲ್ ಶಾಪ್ ಹಾಗೂ ಚಿಲ್ಲರೆ ಅಂಗಡಿ ಹಾಗೂ ಅನುಮಾನಸ್ಪದ ಅಂಗಡಿಗಳನ್ನು ಪರಿಶೀಲನೆ ಮಾಡಲಾಯಿತು. ಹಾಗೂ ಸಂಚಾರಿ ನಿಯಮ ಉಲ್ಲಂಘನೆ ಮಾಡಿದವರ ವಿರುದ್ದ ೩೨ ಪ್ರಕರಣ ಹಾಗೂ ತಂಬಾಕು ಉಲ್ಲಂಘನೆ ಕಾಯ್ದೆಯಡಿಯಲ್ಲಿ ೯೦ ಪ್ರಕರಣ ದಾಖಲು ಮಾಡಲಾಯಿತು.

ಗ್ರಾಮದಲ್ಲಿನ ರೌಡಿ ಶೀಟರ್ ಆಸಾಮಿಗಳನ್ನು ಕರೆದು ಅವರ ಮನೆಗಳನ್ನು ಪರಿಶೀಲನೆ ಮಾಡಿದ್ದು, ಗ್ರಾಮದಲ್ಲಿನ ಅನುಮಾನಸ್ಪದ ವ್ಯಕ್ತಿಗಳನ್ನು ತಪಾಸಣೆ ಮಾಡಲಯಿತು.

ಸದರಿ ಕಾರ್ಯಚರಣೆಯಲ್ಲಿ ಕೃಷ್ಣಮೂರ್ತಿ ಆರ್‌ಪಿಐ ಮತ್ತು ಬೊಮ್ಮಣ್ಣ ನಿಂಗಪ್ಪನವರ್ ಹಾಗೂ ೩ ಡಿ.ಎ.ಆರ್ ತುಕಡಿ ಹಾಗೂ ಠಾಣೆಯ ೧೦ ಸಿಬ್ಬಂದಿಯನ್ನು ಒಳಗೊಂಡಂತೆ ಕಾರ್ಯಚರಣೆ ನಡೆಸಲಾಗಿದೆ.

 

Related Post

ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ರವರಿಗೆ ಜಿಲ್ಲಾ ದಲಿತ ಸಂಘಟನೆಗಳ ಸಂಯುಕ್ತ ರಂಗ ಬೆಂಬಲ : ಡಾ.ಎಂ. ಚಂದ್ರಶೇಖರ್
ಬಲಗೈ ಸಮುದಾಯದ ಬಹುಸಂಖ್ಯಾತ ಚಿಕ್ಕತಾಳಿ ಸಮಾಜವನ್ನು ಕಾಂಗ್ರೆಸ್ ಅಭ್ಯರ್ಥಿ ನಿರ್ಲಕ್ಷ್ಯ ಮಾಡಿದ್ದಾರೆ : ಸಮುದಾಯ ಮುಖಂಡರ ಆರೋಪ
ಕೆ.ಹೆಚ್.ಮುನಿಯಪ್ಪ ಬಲಗೈಭಂಟ ಜಿಪಂ ಮಾಜಿ ಸದಸ್ಯ ಎಂ.ರಾಮಚ0ದ್ರ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆ

Leave a Reply

Your email address will not be published. Required fields are marked *

You missed

error: Content is protected !!