• Thu. Apr 25th, 2024

ಅರಾಭಿಕೊತ್ತನೂರಿನಲ್ಲಿ ಜೆಡಿಎಸ್ ಸಂಘಟನಾ ಸಮಾವೇಶ – ಜನರ ಸಮಸ್ಯೆಗಳೇ ನನ್ನ ಪ್ರಣಾಳಿಕೆ -ಸಿಎಂಆರ್ ಶ್ರೀನಾಥ್

PLACE YOUR AD HERE AT LOWEST PRICE

ಕ್ಷೇತ್ರದ ಜನರ ಸಮಸ್ಯೆಗಳೇ ನನ್ನ ಪ್ರಣಾಳಿಕೆಯಾಗಿದ್ದು, ಅವುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಜನರ ಸ್ವಾಭಿಮಾನ, ಪ್ರಾಮಾಣಿಕತೆ ಬಳಸಿಕೊಂಡು ಗೆದ್ದು ವಂಚಿಸಿದ ಮುಖಂಡರಿಗೆ ಬುದ್ದಿ ಕಲಿಸಿ ಎಂದು ಕೋಲಾರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಕರೆ ನೀಡಿದರು.

ಕೋಲಾರ ತಾಲೂಕಿನ ಅರಾಭಿಕೊತ್ತನೂರು ಬಳಿ ಭಾನುವಾರ ಗ್ರಾಪಂ ವ್ಯಾಪ್ತಿಯ ಜೆಡಿಎಸ್ ಸಂಘಟನಾ
ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

೧೫ ವರ್ಷಗಳ ಹಿಂದೆ ಕ್ಷೇತ್ರದ ಜನರ ಸ್ವಾಭಿಮಾನವನ್ನು, ಪ್ರಾಮಾಣಿಕತೆಯನ್ನು ಬಳಸಿಕೊಂಡವರು ಇಂದು ಅಭಿವೃದ್ಧಿ ಮಾಡದೆ ಕ್ಷೇತ್ರವನ್ನುನಿರ್ಲಕ್ಷಿಸಿದ್ದಾರೆ. ಜನರು ಪ್ರಬುದ್ಧರಿದ್ದು, ಮುಂದಿನ ಚುನಾವಣೆಯಲ್ಲಿ ಕ್ಷೇತ್ರದ ಸ್ವಾಭಿಮಾನವನ್ನು ಉಳಿಸುವ ನಿಟ್ಟಿನಲ್ಲಿ ಮತ ಹಾಕುವಾಗ ಎಚ್ಚರವಹಿಸಿ ಎಂದು ಕಿವಿಮಾತು ಹೇಳಿದರು.

ವಿಧಾನಪರಿಷತ್ ಸದಸ್ಯ ಇಂಚರ ಗೋವಿಂದರಾಜು ಮಾತನಾಡಿ, ಕ್ಷೇತ್ರದ ರಾಜಕಾರಣಕ್ಕೆ ಹಿಡಿದಿರುವ ದರಿದ್ರ ಪೀಡೆಯನ್ನು ತೊಲಗಿಸಿ ನಮ್ಮದೇ ಶಾಸಕರನ್ನು ಗೆಲ್ಲಿಸಿಕೊಳ್ಳೋಣ ಎಂದು ಜೆಡಿಎಸ್‌ನಿಂದ ಗೆದ್ದು ಕಾಂಗ್ರೆಸ್‌ಗೆ ಹೋಗಿರುವ ಶಾಸಕ ಶ್ರೀನಿವಾಸಗೌಡ ಹಾಗೂ ವರ್ತೂರು ಪ್ರಕಾಶ್ ವಿರುದ್ದ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಕೋಚಿಮುಲ್ ನಿರ್ದೇಶಕ ವಡಗೂರು ಡಿ.ವಿ.ಹರೀಶ್ ಮಾತನಾಡಿ, ಕೋಲಾರ ಕ್ಷೇತ್ರಕ್ಕೆ ವಲಸೆ ಬಂದವರು ರಾಜಕೀಯ ಮಾರುಕಟ್ಟೆ ಮಾಡುವ ಸ್ಥಿತಿಗೆ ತಲುಪಿದ್ದು, ಸ್ಥಳಿಯರು ಮತ್ತು ಹೊರಗಿನವರ ಪೈಕಿ ಯಾರನ್ನು ಆಯ್ಕೆ ಮಾಡುವುದು ಸೂಕ್ತ ಎನ್ನುವ ಸ್ವಾಭಿಮಾನದ ಚಿಂತನೆಯನ್ನು ಕ್ಷೇತ್ರದ ಜನರು ಮಾಡಬೇಕಾಗಿದೆ ಎಂದರು.

ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷೆ ಕುರ್ಕಿ ರಾಜೇಶ್ವರಿ ಮಾತನಾಡಿ, ಅಧಿಕಾರದಲ್ಲಿದ್ದರೂ ಇಲ್ಲದೇ ಹೋದರೂ ಸಹ ಕಾರ್ಯಕರ್ತರು ತಮ್ಮ ಸ್ವಂತ ಖರ್ಚಿನಲ್ಲಿ ಪಕ್ಷವನ್ನು ಸಂಘಟಿಸಿ, ಉಳಿಸುತ್ತಿದ್ದಾರೆ. ಕುಮಾರಣ್ಣ ಅವರನ್ನು ಸಿಎಂ ಮಾಡಲು ಕೋಲಾರದಲ್ಲಿ ಸಿಎಂಆರ್ ಶ್ರೀನಾಥ್ ಅವರನ್ನು ಗೆಲ್ಲಿಸಿ ಶಕ್ತಿ ತುಂಬಬೇಕೆಂದು ಕೋರಿದರು.

ವೇದಿಕೆಯಲ್ಲಿ ಜಿಪಂ ಮಾಜಿ ಸದಸ್ಯ ಬಾಲಾಜಿ ಚೆನ್ನಯ್ಯ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಜಮೀರ್ ಅಹಮದ್, ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್, ಮುಖಂಡರಾದ ಅರಾಭಿಕೊತ್ತನೂರು ನಂಜುಂಡಗೌಡ, ಸಿಎಂಆರ್ ಹರೀಶ್, ವಕ್ಕಲೇರಿ ರಾಮು, ತಿರುಮಲೇಶ್, ಖಾಜಿಕಲ್ಲಹಳ್ಳಿ ಹರೀಶ್, ಖಲೀಲ್ ಅಹಮದ್, ಅಜೀಬ್ ಬೇಗ್, ಬಂಡಿ ವೆಂಕಟೇಶಪ್ಪ, ಶಬರೀಶ್, ರಫೀಕ್, ಮಂಜುನಾಥ್, ಚಂದ್ರೇಗೌಡ, ಅಶೋಕ್, ಮುದುವಾಡಿ ಮಂಜು, ಗ್ರಾಪಂ ಉಪಾಧ್ಯಕ್ಷೆ ಶಾಂತಮ್ಮ, ಚಂಬೆ ರಾಜೇಶ್, ಕ್ಯಾಲನೂರು ಸುರೇಶ್, ಬೈಚೇಗೌಡ, ಆರೆಪಿ ನಾರಾಯಣಸ್ವಾಮಿ,
ಬಾಬು ಮೌನಿ ಉಪಸ್ಥಿತರಿದ್ದರು.

 

Related Post

ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ
ತಳಸಮುದಾಯವರು ಇಂದಿನ ಸುಳ್ಳುಗಳ ಜೊತೆಗೆ ಟ್ಯಾಗ್ ಆಗುತ್ತಿರುವುದು ದುರಂತ – ಎಲ್.ಎನ್.ಮುಕು0ದರಾಜ್
ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ರವರಿಗೆ ಜಿಲ್ಲಾ ದಲಿತ ಸಂಘಟನೆಗಳ ಸಂಯುಕ್ತ ರಂಗ ಬೆಂಬಲ : ಡಾ.ಎಂ. ಚಂದ್ರಶೇಖರ್

Leave a Reply

Your email address will not be published. Required fields are marked *

You missed

error: Content is protected !!