PLACE YOUR AD HERE AT LOWEST PRICE
ನಾನು ಬಿರುಗಾಳಿ ಇದ್ದಂತೆ ಯಾರಿಂದಲೂ ಅಡ್ಡಿಪಡಿಸಲು ಸಾಧ್ಯವಿಲ್ಲ, ನನ್ನೊಂದಿಗೆ ಗ್ರಾಮೀಣ ಬಡ ಜನರಿದ್ದು ಅಲೆಯಲ್ಲಿ ಕೊಚ್ಚಿ ಹೋಗುವ ಭಯದಿಂದಲೇ ಸಿದ್ದರಾಮಯ್ಯ ಕೋಲಾರಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ ಹಣ ಹಂಚಲು ಬಂದರೆ ಪಡೆದು ಕಾಂಗ್ರೆಸ್,ಜೆಡಿಎಸ್‌ನವರಿಗೆ ಮೂರು ನಾಮ ಹಾಕಿ ಕಳುಹಿಸಿ ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್ ಕರೆ ನೀಡಿದರು.
ಕೋಲಾರ ತಾಲ್ಲೂಕಿನ ಚೆಂಜಿಮಲೆ ಗ್ರಾಮದಲ್ಲಿ ೨೫೦ಕ್ಕೂ ಹೆಚ್ಚು ಮಂದಿ ಜೆಡಿಎಸ್,ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಬಿಜೆಪಿಗೆ ಬರಮಾಡಿಕೊಂಡು ಅವರು ಮಾತನಾಡುತ್ತಿದ್ದರು.
ಗ್ರಾಮೀಣ ಭಾಗದ ಶೇ.೯೦ ಮತಗಳು ಎಂದರೆ ೧.೧೯ ಲಕ್ಷಮತ, ಇದರಲ್ಲಿ ಶೇ.೬೫ ರಷ್ಟು ಮತ ಬಂದರೂ ನನ್ನ ಆಯ್ಕೆ ತಡೆಯಲು ಸಾಧ್ಯವಿಲ್ಲ ಎಂದ ಅವರು, ನಾನು ಸಮುದ್ರ ಇದ್ದಂತೆ ಅಲೆಗಳಿಗೆ ಕೊಚ್ಚಿಹೋಗುತ್ತೀರಾ ಎಂದು ಸಿದ್ದರಾಮಯ್ಯ ಅವರಿಗೆ ಎಚ್ಚರಿಕೆ ನೀಡಿದರು.
ಹಿಂದುಳಿದ ಸಣ್ಣ ಜಾತಿಗಳ ಮತಗಳು ನಮಗೆ ಬೇಡ ನಾವು ದೊಡ್ಡ ಜಾತಿಗಳಿಂದಲೇ ಗೆಲ್ಲುತ್ತೇವೆ ಎಂಬ ಭ್ರಮೆಯಲ್ಲಿ ಜೆಡಿಎಸ್,ಕಾಂಗ್ರೆಸ್ಸಿನವರಿದ್ದಾರೆ, ಎಲ್ಲಾ ಸಣ್ಣ ಜಾತಿಗಳು ಒಗ್ಗೂಡಿ ನಿಮ್ಮ ಶಕ್ತಿ ತೋರಿಸಿ, ಅವರು ನೀಡುವ ಹಣ ಬೇಡವೆನ್ನದಿರಿ, ಅದು ನಿಮ್ಮ ಹಣವೇ ಪಡೆಯಿರಿ ಮತ ಹಾಕುವಾಗ ಎಚ್ಚರವಹಿಸಿ ನನಗೆ ಮತ ನೀಡಿ ಎಂದರು.
ಗ್ರಾಮದ ಮುಖಂಡರಾದ ಗಂಗಪ್ಪ, ನಾಗೇಶ್, ನಾರಾಯಣಸ್ವಾಮಿ, ಅಂಗಡಿ ಮುನಿಯಪ್ಪ ಸೇರಿದಂತೆ ದಲಿತ ಕಾಲೋನಿಯ ೨೫೦ಕ್ಕೂ ಹೆಚ್ಚು ಮಂದಿ ಬಿಜೆಪಿಗೆ ಸೇರ್ಪಡೆಯಾದರು.
ಬೆಗ್ಲಿ ಸೂರ್ಯ ಪ್ರಕಾಶ್, ಬಿಜೆಪಿ ತಾಲ್ಲೂಕು ಅಧ್ಯಕ್ಷ ರಾಮಚಂದ್ರೇಗೌಡ,ಕೆಯುಡಿಎ ಅಧ್ಯಕ್ಷ ವಿಜಯಕುಮಾರ್, ಜಿಪಂ ಮಾಜಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಮಾಜಿ ಸದಸ್ಯ ಅರುಣ್ ಪ್ರಸಾದ್, ಕುರುಬರ ಸಂಘದ ನಿರ್ದೇಶಕಿ, ಸರಸ್ವತಮ್ಮ, ಮಾಜಿ ನಗರಸಭಾ ಸದಸ್ಯ ಮುಖೇಶ್, ವೇಮಗಲ್ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್, ಕೋಗಿಲಹಳ್ಳಿ ಲೋಕೇಶ್, ಉಪನ್ಯಾಸಕ ಶ್ರೀನಿವಾಸ್,ಮುನೇಗೌಡ ಮತ್ತಿತರರಿದ್ದರು.