• Thu. Sep 28th, 2023

ರಸ್ತೆ ಉಬ್ಬಿಗೆ ವೈಟ್ ಟ್ಯಾಪಿಂಗ್ ಇಲ್ಲದೆ ಅಫಘಾತಗಳು ಸಂಭವಿಸುತ್ತಿದೆ, ಸಂಬoಧಪಟ್ಟ ಇಲಾಖೆ ಸ್ಪಂಧಿಸದಿದ್ದರೆ ರಸ್ತೆತಡೆ ಎಚ್ಚರಿಕೆ ನೀಡಿರುವ ಸಾರ್ವಜನಿಕರು.

PLACE YOUR AD HERE AT LOWEST PRICE

ವಾಹನಗಳ ಅತಿ ವೇಗ ಹಾಗೂ ಅಫಘಾತ ತಪ್ಪಿಸಲು ಮುಂಜಾಗೃತವಾಗಿ ಅಳವಡಿಸಿರುವ ರಸ್ತೆ ಉಬ್ಬಿನಿಂದ ವಾಹನ ಸವಾರರಿಗೆ ಒಂದಿಲ್ಲೊಂದು ಸಮಸ್ಯೆ ಎದುರಾಗುತ್ತಿದ್ದು ರಸ್ತೆ ಉಬ್ಬಿಗೆ ವೈಟ್ ಟ್ಯಾಪಿಂಗ್ ಹಾಗೂ ಐಡೆಂಟಿಫಿಕೇಷನ್ ಇಲ್ಲದೆ ವಾಹನ ಸವಾರರು ಅತಿವೇಗವಾಗಿ ಬಂದು ರಸ್ತೆ ಉಬ್ಬಿನಿಂದ ಕೆಳಗೆ ಬಿದ್ದು ಕೈ ಕಾಲು ಮುರಿದು ಕೊಳ್ಳುತ್ತಿರುವ ಘಟನೆಗಳು ಕೋಲಾರ ತಾಲ್ಲೂಕಿನ ಭಟ್ರಹಳ್ಳಿ‌ಗೇಟ್ ಬಳಿ ಜರುಗಿದೆ,

ಭಟ್ರಹಳ್ಳಿ‌ ಗೇಟ್ ಬಳಿ ಜನ ಸಂದಣಿ ಹೆಚ್ಚಾಗಿರುವ ಕಾರಣ ಅಫಘಾತ ತಪ್ಪಿಸಲು ಎರಡು ಕಡೆ ರಸ್ತೆ ಉಬ್ಬನ್ನು ನಿರ್ಮಿಸಲಾಗಿದೆ. ಅದ್ರೆ ಅದೇ ರಸ್ತೆ ಉಬ್ಬಿನ ಮಾಹಿತಿ ಇಲ್ಲದ ಕಾರಣ ಅಥವ ರಸ್ತೆ ಉಬ್ಬು ಇರುವ ಬಗ್ಗೆ ಎದ್ದು ಕಾಣುವಂತೆ ವೈಟ್ ಟ್ಯಾಪಿಂಗ್ ಇಲ್ಲದೆ ವಾಹನ ಸಾವಾರರು ಅತೀ ವೇಗವಾಗಿ ಬಂದು ಅಫಘಾತಗಳು ಸಂಭವಿಸುತ್ತಿದೆ.

ಇನ್ನು ಹಲವು ಬಾರಿ ರಸ್ತೆ ಉಬ್ಬಿನ ಸಮಸ್ಯೆಯಿಂದ ವಾಹನ ಸವಾರರಿಗೆ ಹಾಗುತ್ತಿರುವ ತೊಂದರೆ ಬಗ್ಗೆ ಜನಪ್ರತಿನಿಧಿಗಳಿಗೆ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ, ಹೀಗಿದ್ದರೂ ರಸ್ತೆ ಉಬ್ಬಿನಿಂದ ಹಾಗುತ್ತಿರುವ ಸಮಸ್ಯೆ ಬಗ್ಗೆ ಯಾರೊಬ್ಬರು ಗಮನ ಹರಿಸದೇ ಪ್ರತೀ ದಿನ ರಸ್ತೆ ಉಬ್ಬು ಕಾಣದೆ ಅಫಘಾತಗಳು ಸಂಭವಿಸುತ್ತಿದೆ, ಕೂಡಲೇ ರಸ್ತೆ ಉಬ್ಬಿನಿಂದ ಉಂಟಾಗುತ್ತಿರುವ ಸಮಸ್ಯೆಗೆ ಅಧಿಕಾರಿಗಳು ಕೂಡಲೇ ಸ್ಪಂದಿಸಿ ಬಗೆಹರಿಸಬೇಕು ಎಂದು ಸ್ಥಳಿಯ ಸಾರ್ವಜನಿಕರು ಹಾಗೂ ವಾಹನ ಸವಾರರು ಆಗ್ರಹಿಸಿದ್ದಾರೆ. ಇಲ್ಲವಾದಲ್ಲಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸುವ ಎಚ್ಚರಿಕಯನ್ನ ನೀಡಿದ್ದಾರೆ.

Leave a Reply

Your email address will not be published. Required fields are marked *

You missed

error: Content is protected !!