• Thu. Apr 25th, 2024

*ವಿರೋಧ ಪಕ್ಷದ ಶಾಸಕರಿಗೆ ರಾಜ್ಯ ಸರ್ಕಾರ ಅನುದಾನ ನೀಡಲ್ಲ:ರೂಪಕಲಾ.*

PLACE YOUR AD HERE AT LOWEST PRICE

ಕೆಜಿಎಫ್:ಆಡಳಿತ ಪಕ್ಷದ ಶಾಸಕರು ಎಷ್ಟು ಅನುದಾನ ಕೇಳಿದರೂ ರಾಜ್ಯದಲ್ಲಿ  ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಬಿಡುಗಡೆ ಮಾಡುತ್ತದೆ, ಆದರೆ  ವಿರೋಧ ಪಕ್ಷದ ಶಾಸಕರು ಕಣ್ಣೀರಲ್ಲ, ರಕ್ತ ಸುರಿಸಿದರೂ ಅನುದಾನ ಬಿಡುಗಡೆ ಮಾಡುವುದಿಲ್ಲ ಎಂದು ಶಾಸಕಿ ರೂಪಕಲಾ ಆರೋಪಿಸಿದರು.

ಬೆಮೆಲ್ ಕಾರ್ಖಾನೆ ಬಳಿ ನಡೆಯುತ್ತಿದ್ದ ಡಬಲ್ ರಸ್ತೆ ಡಾಂಬರೀಕರಣ ಕಾಮಗಾರಿಯನ್ನು ಪರಿಶೀಲಿಸಿ ಮಾತನಾಡಿದ ಅವರು ಪ್ರತಿಯೊಂದಕ್ಕೂ ಸರ್ಕಾರದಲ್ಲಿ ಕಾಡಿ ಬೇಡಿಕೊಂಡರೂ ಅನುದಾನವನ್ನು ಬಿಡುಗಡೆ ಮಾಡುವ ಗೋಜಿಗೇ ಹೋಗುವುದಿಲ್ಲ. ಈ ಸರ್ಕಾರದಲ್ಲಿ ಅನುದಾನಗಳನ್ನು ತೆಗೆದುಕೊಂಡು ಬರುವುದು ಅಷ್ಟು ಸುಲಭದ  ಮಾತಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ನಗರಸಭೆಗೆ ಪೌರಾಯುಕ್ತರಾಗಿ ಯಾರೇ ನೂತನವಾಗಿ ಬಂದು ಅಧಿಕಾರ ವಹಿಸಿಕೊಂಡರೂ ಅವರೆಲ್ಲರೂ ಬಂದು ಬೆಮೆಲ್ ಆಡಳಿತ ಮಂಡಳಿಯವರೊಂದಿಗೆ ಕಂತುಗಳಲ್ಲಿ ಬಾಕಿ ಇರುವ ತೆರಿಗೆ ಹಣವನ್ನು ಪಾವತಿಸುವಂತೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಬಡ್ಡಿ ಲೆಕ್ಕ ಹಾಕಿದರೆ ಸುಮಾರು 75 ಕೋಟಿಯಷ್ಟಾಗುವುದರಿಂದ ಬಡ್ಡಿಯನ್ನು ಮನ್ನಾ ಮಾಡುತ್ತೇವೆ ಎಂದು ತಿಳಿಸಿದರೂ ಇದುವರೆಗೆ ಬಿಡಿಗಾಸು ತೆರಿಗೆ ಹಣವನ್ನು ಬೆಮೆಲ್ ಕಾರ್ಖಾನೆಯವರು ಕಟ್ಟಿಲ್ಲ ಎಂದರು.

ಸಿಎಸ್‍ಆರ್ ಯೋಜನೆಯಡಿಯಲ್ಲಿ ಬೇರೆ ಎಲ್ಲೆಲ್ಲೋ ಅಭಿವೃದ್ಧಿ ಕಾಮಗಾರಿಗಳನ್ನು ಬೆಮೆಲ್‍ನವರು ಮಾಡುತ್ತಾರೆ. ಆದರೆ ಕೆಜಿಎಫ್ ನಗರಕ್ಕೆ ಅವರ ಕೊಡುಗೆ ಏನು? ಪ್ರತಿ ವರ್ಷ ಬರುವ ಲಾಭದಿಂದ ಶೇ 10 ರಷ್ಟು ಇಲ್ಲವೇ ಶೇ 15 ರಷ್ಟು ಹಣವನ್ನು ಮೀಸಲಿರಿಸಿ ಕೆಜಿಎಫ್ ನಗರದ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಏಕೆ ಬಳಸಿಲ್ಲ? ಕಾರ್ಖಾನೆಯಲ್ಲಿ ದುಡಿಯುವ ಕಾರ್ಮಿಕರು ಇದೆಲ್ಲವನ್ನೂ ಪ್ರಶ್ನಿಸಬೇಕು ಎಂದರು.

ಬೆಮೆಲ್‍ನವರಲ್ಲದೇ ಬಿಜಿಎಂಎಲ್‍ನವರು ಕಳೆದ 25 ವರ್ಷಗಳಿಂದ ರಾಜ್ಯ ಸರ್ಕಾರಕ್ಕೆ ಕಟ್ಟಬೇಕಾಗಿರುವ ರಾಯಲ್ಟಿ ಹಣವನ್ನು ಪಾವತಿಸದೇ ಬಾಕಿ ಉಳಿಸಿಕೊಂಡಿದ್ದು, ಇದನ್ನು ಪಾವತಿಸಿದಲ್ಲಿ 100 ವರ್ಷಗಳ ಕಾಲ ಗಣಿಯಲ್ಲಿ ದುಡಿದ ಕಾರ್ಮಿಕರಿಗೆ 25 ವರ್ಷಗಳಿಂದ ಬಾಕಿ ಉಳಿಸಿಕೊಂಡಿರುವ 52 ಕೋಟಿ ಹಣವನ್ನು ಎಲ್ಲರಿಗೂ ಪಾವತಿಸಬಹುದಾಗಿತ್ತು. ಎಂದರು.

ಈವೇಳೆ ನಗರಸಭೆ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ, ಸದಸ್ಯರಾದ ಮಾಣಿಕ್ಯಂ, ಸನಾ, ಶ್ರೀನಿವಾಸ್,ಯುವ ಕಾಂಗ್ರೇಸ್ ನ ಫ್ರಾನ್ಸಿಸ್ ಮೊದಲಾದವರು ಇದ್ದರು.

Related Post

ಸರ್ಕಾರದಿಂದ ಪರೀಕ್ಷೆ ವೇಳೆಯಲ್ಲಿ ಹಿಂದೂ ಮಹಿಳೆಯರ ಮಾಂಗಲ್ಯ-ಕಾಲುಂಗುರ ತೆಗೆಸುವ ದುಸ್ಸಾಹಸ: ಡಾ.ವೇಣುಗೋಪಾಲ್ ಆಕ್ರೋಶ
ಮೀಸಲಾತಿ ದುರುಪಯೋಗ ಸಾಭೀತಾದ ಹಿನ್ನಲೆ ಕೊತ್ತೂರು ಮಂಜುನಾಥ್ ಶಾಸಕ ಸ್ಥಾನ ರದ್ದು ಮಾಡುವಂತೆ ಕರ್ನಾಟಕ ದಲಿತ ಸಂಘಟನೆಗಳ ಮಹಾ ಒಕ್ಕೂಟ ಆಗ್ರಹ
ಐತಿಹಾಸಿಕ ೨೦೦ ನೇ ಹುಣ್ಣಿಮೆ ಹಾಡು ಕಾರ್ಯಕ್ರಮ ಪಂಚರಾಜ್ಯಗಳ ಸಾಂಸ್ಕೃತಿಕ ಸಂಗಮಕ್ಕೆ  ಆದಿಮ ಸಜ್ಜು.

Leave a Reply

Your email address will not be published. Required fields are marked *

You missed

error: Content is protected !!