• Thu. Mar 28th, 2024

PLACE YOUR AD HERE AT LOWEST PRICE

ಬಯಲು ಸೀಮೇ ಪ್ರದೇಶದ ಜಿಲ್ಲೆಗಳಲ್ಲಿ ಕಳೆದ ೨೦ ವರ್ಷಗಳಿಂದ ಶಾಶ್ವತ ನೀರಾವರಿ ಹೋರಾಟ ಸಮಿತಿಗಳು ಕೋಲಾರ ಜಿಲ್ಲೆ, ಚಿಕ್ಕಬಳ್ಳಾಪುರ ಜಿಲ್ಲೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೇರಿದಂತೆ ಕುಡಿಯುವ ನೀರಿಗಾಗಿ, ಅಂತರ್ಜಲ ಅಭಿವೃದ್ದಿಗಾಗಿ, ನೀರಿನ ಸಂರಕ್ಷಣೆಗಾಗಿ, ನೀರಿನ ಭದ್ರತೆಗಾಗಿ ಸಾರ್ವಜನಿಕರಲ್ಲಿ ಅರಿವುಂಟು ಮಾಡಲು ಜಲ ಜಾಗೃತಿಯ ೧೦ ದಿನಗಳ ಕಾಲ ಪಾದಯಾತ್ರೆಯನ್ನು ಮಾ ೩ ಶುಕ್ರವಾರದಿಂದ ಹಮ್ಮಿಕೊಂಡಿದೆ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಸಂಚಾಲಕ ಅಂಜನೇಯರೆಡ್ಡಿ ತಿಳಿಸಿದರು,

ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಮಾ ೩ರ ಶುಕ್ರವಾರ ಮಿನಿ ಜಲಿಯನ್‌ವಾಲಭಾಗ್ ಎಂದೇ ಪ್ರಚಲಿತದಲ್ಲಿರುವ ಗೌರಿಬಿದನೂರು ಸಮೀಪದ ವಿದುರಾಶ್ವಥದಿಂದ ಚಾಲನೆ ನೀಡಲಾಗುವುದು, ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ, ಡಾ.ಎ.ಎಸ್.ಪ್ರಕಾಶ್ ಅವರು ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ ಎಂದರು.
ಮಾ ೪ರಂದು ಮಂಚೇನಹಳ್ಳಿ,ಮಾ ೫ರಂದು ದೊಡ್ಡಬಳ್ಳಾಪುರ, ಮಾ ೬ರಂದು ದೇವನಹಳ್ಳಿ, ಮಾ ೭ರಂದು ಚಿಕ್ಕಬಳ್ಳಾಪುರ,ಮಾ ೮ರಂದು ಶಿಡ್ಲಘಟ್ಟ, ಮಾ ೯ರಂದು ಚಿಂತಾಮಣಿ ಹಾಗೂ ಮಾ ೧೦ರಂದು ಶ್ರೀನಿವಾಸಪುರ, ಮಾ ೧೧ ರಂದು ಮುಳಬಾಗಿಲು ಮೂಲಕ ಮಾ ೧೨ರಂದು ಕೋಲಾರವನ್ನು ಪ್ರವೇಶಿಸಿ ಶಾಶ್ವತ ನೀರಾವರಿ ಹೋರಾಟ ಸಮಿತಿ ವೇದಿಕೆಯಲ್ಲಿ ಸಮಾವೇಶಗೊಳ್ಳಲಿದೆ ಎಂದರು.

ಬಜೆಟ್‌ಗಳಲ್ಲಿ ಬಯಲು ಸೀಮೆ ಪ್ರದೇಶಗಳಿಗೆ ಕುಡಿಯುವ ನೀರಿನ ಅವೈಜ್ಞಾನಿಕ ಯೋಜನೆಗಳನ್ನು ರೂಪಿಸಿದೆ, ವಿಜ್ಞಾನಿಗಳ ಪರಿಸರ ತಜ್ಞರ ವರದಿಗಳನ್ನು ತಿರಸ್ಕರಿಸಿ ಸಾರ್ವಜನಿಕರ ಹಣವನ್ನು ಲೂಟಿ ಮಾಡಿದ್ದೆ ಜನಪ್ರತಿನಿಽಗಳ ಮತ್ತು ಸರ್ಕಾರದ ಸಾಧನೆಯಾಗಿದೆ, ಕುಡಿಯುವ ನೀರು ಕೇಳಿದರೆ ಕೆ.ಸಿ.ವ್ಯಾಲಿ ಯೋಜನೆಯಲ್ಲಿ ಮೂರನೇ ಹಂತದ ಶುದ್ದೀಕರಣ ಮಾಡದೆ ಕಲ್ಮಶ ನೀರನ್ನು ಕೆರೆಗಳಿಗೆ ತುಂಬಿಸಿ ಪರಿಸರ ನಾಶಪಡೆಸಲಾಗಿದೆ. ಬಜೆಟ್‌ನಲ್ಲಿ ಮೂರನೇ ಹಂತದ ಶುದ್ದೀಕರಣದ ಭರವಸೆ ನೀಡಿದೆ ಹೊರತು ಅನುದಾನವನ್ನು ಮಂಜೂರು ಮಾಡದೆ ಮೂಗಿಗೆ ತುಪ್ಪ ಸವರುವಂತ ಆಶ್ವಾಸನೆ ನೀಡಿದೆ ಎಂದು ಹೇಳಿದರು.

ಪಾದಯಾತ್ರೆಯಲ್ಲಿ ರೈತ ಹೋರಾಟದ ವಿಡಿಯೋಗಳ ಜೊತೆಗೆ ಡಾ.ಪರಮಶಿವಯ್ಯ ಅವರ ಹೆಸರಿನಲ್ಲಿ ಗ್ರಂಥಾಲಯವನ್ನು ಪ್ರದರ್ಶನವನ್ನು ಮಾಡಲಾಗುವುದು. ಈ ಯಾತ್ರೆಗೆ ಸಾರ್ವಜನಿಕರು ಹೆಚ್ಚಿನ ಸಹಕಾರ ನೀಡ ಬೇಕೆಂದು ಮನವಿ ಮಾಡಿದರು,
ಪತ್ರಿಕಾಗೋಷ್ಠಿಯಲ್ಲಿ ನೀರಾವರಿ ಹೋರಾಟ ಸಮಿತಿಯ ಮುಖಂಡರಾದ ಹೊಳಲಿ ಪ್ರಕಾಶ್, ರಾಜೇಶ್, ಅಬ್ಬಣಿ ಶಿವಪ್ಪ, ತ್ಯಾಗರಾಜ್, ಡಾ.ರಮೇಶ್,ಅಂಬರೀಷ್, ನಾರಾಯಣಗೌಡ, ಚಂಬೆ ರಾಜೇಶ್, ಮಳ್ಳೂರು ಹರೀಶ್, ಉಪಸ್ಥಿತರಿದ್ದರು, ಮುಖಂಡರಾದ ಕನ್ನಡದ ವೆಂಕಟಪ್ಪ, ಕೋಟಿಗಾನಹಳ್ಳಿ ರಾಮಯ್ಯ, ಪುಟ್ಟರಾಜು, ಅನೂರು ರಾಜೇಶ್ ಮುಂತಾದವರು ಹಾಜರಿದ್ದರು.

ಸುದ್ದಿ ಓದಿ ಹಂಚಿ:

 

Leave a Reply

Your email address will not be published. Required fields are marked *

You missed

error: Content is protected !!