• Fri. Mar 29th, 2024

ಕಾಂಗ್ರೆಸ್ ಪಕ್ಷದ ವತಿಯಿಂದ ಮಾರ್ಚ್ ೬ರಂದು ಕೋಲಾರ ನಗರದ ೩೫ ವಾರ್ಡುಗಳ ಬೂತ್ ಕಮಿಟಿ ರಚನೆ – ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್‌ಬಾಬು

PLACE YOUR AD HERE AT LOWEST PRICE

ಕಾಂಗ್ರೆಸ್ ಪಕ್ಷದ ವತಿಯಿಂದ ಮಾರ್ಚ್ ೬ರಂದು ಕೋಲಾರ ನಗರದ ಕೋಲಾರ ಬೂತ್ ಕಮಿಟಿ ರಚನೆ – ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್‌ಬಾಬು

ಮುಂಬರುವ ವಿಧಾನಸಭಾ ಚುನಾವಣೆ ೨೦೨೩ರ ಪ್ರಯುಕ್ತ ಕೋಲಾರ ನಗರದ ಎಲ್ಲಾ ೩೫ ವಾರ್ಡುಗಳ ಬೂತ್ ಕಮಿಟಿ ರಚನೆಗೆ ಪಕ್ಷ ತಯಾರಿ ನಡೆಸಿದ್ದು. ಇದೇ ಮಾರ್ಚ್ ೬, ಸೋಮವಾರ ಬೆಳಿಗ್ಗೆ ೧೦ ಗಂಟೆಗೆ ಕೋಲಾರ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸಭೆ ನಡೆಸಲಾಗುವುದು ಎಂದು ಕೋಲಾರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್‌ಬಾಬು ತಿಳಿಸಿದ್ದಾರೆ.

ಅವರು ನಮ್ಮಸುದ್ಧಿಯೊಂದಿಗೆ ಮಾದ್ಯಮದೊಂದಿಗೆ ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧಿಸುತ್ತಿರುವ ಹಿನ್ನ.ಲೆಯಲ್ಲಿ ಕೋಲಾರ ರಾಜ್ಯದಲ್ಲೇ ಪ್ರತಿಷ್ಠಿತ ಕಣವಾಗಿದೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲಿ ಹುಮ್ಮಸ್ಸು ಉತ್ಸಾಹ ಹಿಮ್ಮಡಿಯಾಗಿದೆ ಎಂದರು.

ಚುನಾವಣೆ ದಿನಾಂಕ ಯಾವುದೇ ಸಂದರ್ಭದಲ್ಲಿ ಘೋಷಣೆಯಾಗುವ ಸಾಧ್ಯತೆ ಇದ್ದು, ಕಾಂಗ್ರೆಸ್ ಪಕ್ಷದ ವತಿಯಿಂದ ಕೋಲಾರ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಕೋಲಾರ ನಗರದ ಎಲ್ಲಾ ೩೫ ವಾರ್ಡುಗಳ ಹಾಲಿ ನಗರಸಭೆ ಸದಸ್ಯರು, ಮಾಜಿ ನಗರಸಭೆ ಸದಸ್ಯರು, ವಿವಿಧ ವಿಭಾಗಗಳ ಮುಖಂಡರು, ಬೂತ್ ಮಟ್ಟದ ಮುಖಂಡರುಗಳ ಸಭೆಯನ್ನು ಮಾರ್ಚ್ ೬ರಂದು ಕರೆದಿದ್ದು. ಈ ಸಭೆಯಲ್ಲಿ ೧೦ ಜನ ಪುರುಷರು, ೧೦ ಜನ ಮಹಿಳೆಯರು, ೧೦ ಜನ ಯುವಕರನ್ನು ಒಳಗೊಂಡoತೆ ಒಟ್ಟು ೩೦ ಜನರ ವಾರ್ಡ್ ಸಮಿತಿಯನ್ನು ರಚಿಸಲಾಗುವುದು ಎಂದು ತಿಳಿಸಿದ್ದಾರೆ.

ಆಯ್ಕೆಯಾದ ಪ್ರತಿ ವಾರ್ಡಿನ ೩೦ ಜನರ ಸಮಿತಿಗೆ ಚುನಾವಣಾ ಪೂರ್ವ ತಯಾರಿ ತರಬೇತಿ ನೀಡಲಾಗುತ್ತದೆ. ಆ ಮೂಲಕ ಪ್ರತಿ ವಾರ್ಡಿನಲ್ಲೂ ಪಕ್ಷವನ್ನು ಬೇರು ಮಟ್ಟದಲ್ಲೇ ಬಲಗೊಳಿಸುವ ಉದ್ದೇಶ ಹಾಗೂ ಮುಂದಿನ ವಿಧಾನಸಭಾ ಚುನಾವಣೆಯನ್ನ ಸಮರ್ಥವಾಗಿ ಎದುರಿಸಲು ದೊಡ್ಡ ಕಾರ್ಯಪಡೆಯನ್ನು ಕಟ್ಟುಲಾಗುತ್ತದೆ ಎಂದರು.

ಈ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲಾ ನಗರಸಭಾ ಸದಸ್ಯರು, ಮಾಜಿ ಸದಸ್ಯರು, ಬೂತ್ ಮಟ್ಟದ ಸದಸ್ಯರು, ಮಹಿಳಾ ಮುಖಂಡರು, ಯುವ ಮುಖಂಡರು ಭಾಗವಹಿಸಲು ಈ ಮೂಲಕ ಅವರು ಕರೆ ನೀಡಿದ್ದಾರೆ.

Leave a Reply

Your email address will not be published. Required fields are marked *

You missed

error: Content is protected !!