• Fri. Apr 19th, 2024

PLACE YOUR AD HERE AT LOWEST PRICE

ಶ್ರೀನಿವಾಸಪುರ:ತಾಲ್ಲೂಕಿನಾದ್ಯಂತ ಅರಣ್ಯ ಇಲಾಖೆಯಿಂದ ಸರ್ವೆ ಮಾಡುತ್ತಿದ್ದು ಸರ್ವೆಗೂ ಮೊದಲೇ ಉಪಗ್ರಹ ಸರ್ವೆ ಮಾಡಿ ಆಳವಾದ ಟ್ರೆಂಚ್ ಹೊಡೆದು ಟ್ರೆಂಚ್ ಗಳಲ್ಲಿ ಬಿದುರು ಬೆಳೆಸಿದ್ದು, ಕೆಲವು ಕಡೆ ಕಬ್ಬಿಣ ಗ್ರಿಲ್ ಸಹ ಹಾಕಿರುವುದರಿಂದ ರೈತರಿಗೆ ತೊಂದರೆಯಾಗಿದೆ ಎಂದು ರೈತ ಸಂಘ ಆರೋಪಿಸಿತು.

ಶ್ರೀನಿವಾಸಪುರದ ಶ್ರೀನಿವಾಸಪುರದ ಅರಣ್ಯ ಇಲಾಖೆ ಕಚೇರಿ ಮುಂದೆ ರೈತ ಸಂಘ ಪ್ರತಿಭಟನೆ ಮಾಡಿ ಮುಖಂಡರು ಮಾತನಾಡಿ, ಅರಣ್ಯ ಇಲಾಖೆ ಅಧಿಕಾರಿಗಳು ಮತ್ತೆ ಸರ್ವೆ ಮಾಡುತ್ತಿರುವುದು ಅರ್ಥ ವಿಲ್ಲದ ಸರ್ವೆಯಾಗಿದೆ. ಸರ್ವೆ ಮಾಡುವುದಾದರೆ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಜೊತೆಯಾಗಿ ಸರ್ವೆ ಮಾಡಬೇಕು.

ಈಗ ಮಾಡುತ್ತಿರುವ ಸರ್ವೆ ನಿಲ್ಲಿಸಿ, ಕಾಡಲ್ಲಿ ಹಾಕಿರುವ ಸಿಮೆಂಟ್ ಕಂಬಗಳು ತೆರವುಗೊಳಿಸಬೇಕು. ತಾಲ್ಲೂಕಿನಲ್ಲಿ ಕಾಡು ಪ್ರಾಣಿಗಳಾದ ನವಿಲು ಜಿಂಕೆ ಮುಂತಾದ ಪ್ರಾಣಿಗಳು ರೈತರ ಬೆಳೆಗಳ ಮೇಲೆ ದಾಳಿ ಮಾಡುತ್ತಿದ್ದು ರೈತರಿಗೆ ನಷ್ಟವಾಗದಂತೆ ಕ್ರಮ ಕೈಗೊಳ್ಳಬೇಕು. ನಷ್ಟವಾದ ಬೆಳೆಗೆ ಸೂಕ್ತ ಪರಿಹಾರ ಕೊಡಬೇಕೆಂದು ಒತ್ತಾಯಿಸಿದರು.

ರೈತರ ಸಂಘದ ಮನವಿ ಸ್ವೀಕರಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಇಲ್ಲದ ಕಾರಣ ರೈತ ಸಂಘದ ವತಿಯಿಂದ ರಸ್ತೆ ತಡೆದು ಆಕ್ರೋಶ ಹೊರ ಹಾಕಿ ತಾಲ್ಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾದ್ಯಕ್ಷ ಟಿ.ಎನ್.ರಾಮೇಗೌಡ, ಪದಾಧಿಕಾರಿಗಳಾದ ಶ್ರೀರಾಮರೆಡ್ಡಿ, ವೀರಭದ್ರ ಸ್ವಾಮಿ, ಈರಪ್ಪರೆಡ್ಡಿ, ಶ್ರೀಧರ್, ಗಂಗಾಧರ್, ವಿನೋದ್, ರಮೇಶ್ ಮುಂತಾದವರಿದ್ದರು.

Related Post

ಶೇ.೯೦ ರಷ್ಟು ದೇಶದ ಸಮುದಾಯಗಳು ಮುಖ್ಯವಾಹಿನಿ ಮಾದ್ಯಮಗಳಲ್ಲಿ, ಕಾರ್ಪೋರೇಟ್ ವಿಭಾಗದಲ್ಲಿ ಮತ್ತು ಅತ್ಯುನ್ನತ ಸರ್ಕಾರಿ ಹುದ್ದೆಗಳಲ್ಲಿ ಭಾಗವಹಿಸುವಿಕೆ ಇಲ್ಲ! : ರಾಹುಲ್ ಗಾಂಧಿ
ರಾಜಕೀಯ ಪಕ್ಷಗಳು ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಅನ್ಯಾಯ ಮಾಡಿವೆ : ಸಮುದಾಯ ಮುಖಂಡರ ಆಕ್ರೋಶ,
ಸಂವಿಧಾನ ಉಳಿಸಲು ದೇಶದ ಸಮಗ್ರತೆ ಕಾಪಾಡಲು ಬಿಜೆಪಿಯನ್ನು ಸೋಲಿಸಿ: ಮಂಜುನಾಥ್ ಅಣ್ಣಯ್ಯ

Leave a Reply

Your email address will not be published. Required fields are marked *

You missed

error: Content is protected !!