• Fri. Mar 29th, 2024

PLACE YOUR AD HERE AT LOWEST PRICE

ಪ್ರತಿಯೊಬ್ಬರು ಮತಕ್ಕಿರುವ ಮೌಲ್ಯವನ್ನು ಅರಿತು ಮತ ಚಲಾಯಿಸಿದರೆ ಮಾತ್ರ ರಾಜ್ಯಾಧಿಕಾರದ ಕಡೆಗೆ ನಡೆಯಲು ಸಾಧ್ಯ. ರಾಜಕೀಯ ಚಿಂತನೆಗಾಗಿ ರಾಜ್ಯಾಧಿಕಾರದ ಅವಶ್ಯಕತೆ ಇದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಸೂಲಿಕುಂಟೆ ರಮೇಶ್ ಹೇಳಿದರು.

ಕೋಲಾರ ನಗರದ ನಚಿಕೇತ ನಿಲಯ ಬುದ್ಧ ಮಂದಿರದಲ್ಲಿ ನಡೆದ ಪ್ರಭುದ್ಧ ಭಾರತಕ್ಕಾಗಿ ಬೃಹತ್ ಸಮಾವೇಶ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ದಿವಂಗತ ಎನ್.ಶಿವಣ್ಣ ಅವರು ಇಡೀ ರಾಜ್ಯದಲ್ಲೇ ದಲಿತ ಚಳವಳಿಯ ಛಾಪನ್ನು ಮೂಡಿಸಿದವರು. ಇಡೀ ರಾಜ್ಯದಲ್ಲಿ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರನ್ನು ಒಟ್ಟಾಗಿ ತೆಗೆದುಕೊಂಡು ಹೋದ ಮುಂಚೂಣಿ ನಾಯಕರು. ಅವರ ಅವಽಯಲ್ಲಿ ಸಮಾಜಿಕ ನ್ಯಾಯದ ಕನಸಾದ ಸದಾಶಿವ ಆಯೋಗದ ವರದಿ ರಚನೆಯಾಗಿ ಇಂದು ಧ್ವನಿ ಎತ್ತುವಂತಾಗಿದೆ. ಅಂಬೇಡ್ಕರ್ ಅವರ ಆಶಯ, ಸಂವಿಧಾನದ ರಕ್ಷಣೆ, ಅಲ್ಪಸಂಖ್ಯಾತರ ರಕ್ಷಣೆ ದಲಿತರ ರಕ್ಷಣೆ ಸಮಿತಿಯ ಜವಾಬ್ದಾರಿಯಾಗಿದೆ ಎಂದರು.

ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪ್ರಜಾಪ್ರಭುತ್ವದಲ್ಲಿ ಸಂವಿಧಾನವನ್ನು ನೀಡಿ ಮತದಾನದ ಹಕ್ಕನ್ನು ನೀಡಿದರು. ಮತವನ್ನು ಮಾರಾಟ ಮಾಡಿಕೊಳ್ಳದೇ ತಮ್ಮ ಒಂದು ಮತದಿಂದ ಹಣೆಬರಹವನ್ನು ಬದಲಾಯಿಸಿಕೊಳ್ಳಬಹುದು ಎಂದಿದ್ದರು. ಆ ಕನಸನ್ನು ನನಸು ಮಾಡಿದವರು ಕಾನ್ಶೀರಾಮ್ ಅವರು, ಅವರು ವಾಪಸ್ ಪಡೆದ ಒಂದು ಮತದಿಂದ ಕೇಂದ್ರ ಸರ್ಕಾರವೇ ಪತನವಾಗಿದ್ದನ್ನು ನಾವೆಲ್ಲರೂ ಮತಕ್ಕಿರುವ ಮೌಲ್ಯವನ್ನು ಮನಗಂಡು ಮತ ಚಲಾಯಿಸಿ ರಾಜ್ಯಾಧಿಕಾರದತ್ತ ಹೆಜ್ಜೆ ಹಾಕೋಣವೆಂದು ಹೇಳಿದರು.

ಜಿಲ್ಲಾ ಸಂಚಾಲಕ ನಾಗನಾಳ ಮುನಿಯಪ್ಪ ಮಾತನಾಡಿ, ಮಾ,೧೫ ರಂದು ೮ ಜಿಲ್ಲೆಗಳ ಬೃಹತ್ ಸಮಾವೇಶ ಹಾಗೂ ಉತ್ತರ ಭಾರತದಲ್ಲಿ ರಾಜಕೀಯ ಪ್ರಜ್ಞೆ ಮೂಡಿಸಿದ ಕಾನ್ಶೀರಾಮ್ ಅವರ ಜಯಂತಿ ಸಹ ಆಚರಿಸಿಲಾಗುವುದು ಎಂದರು.
ಅವಿಭಜಿತ ಜಿಲ್ಲೆಗಳ ದಲಿತ ನಾಯಕರೆನ್ನಿಸಿಕೊಂಡಿದ್ದ ಎನ್.ಶಿವಣ್ಣ ಅವರು ನಮ್ಮನ್ನಗಲಿ ೧೬ ವರ್ಷಗಳು ಕಳೆದಿವೆ. ಅವರ ನೆನಪುಗಳ ನಮ್ಮನ್ನು ಬಿಟ್ಟು ಹೋಗಿಲ್ಲ. ಅವರ ನಾಯಕತ್ವ ನಮ್ಮ ಮನಸ್ಸಿನ ಮೇಲೆ ಪ್ರಭಾವ ಬೀರಿದೆ. ಅವರ ಚಳುವಳಿ ಹಾದಿಯಲ್ಲಿ ನಾವು ಮುನ್ನಡೆಯೋಣ ಎಂದರು.

ಸಭೆಯಲ್ಲಿ ಕದಸಂಸ ಜಿಲ್ಲಾ ಮುಖಂಡರಾದ ಎಚ್.ಮುನಿಚೌಡಪ್ಪ, ರೋಜಾರಹಳ್ಳಿ ಡಾ.ವೆಂಕಟರಮಣ, ಗೋವಿಂದರಾಜು, ಸಿ ಈರಪ್ಪ, ಮದನಹಳ್ಳಿ ವೆಂಕಟೇಶ್, ದೇಶಿಹಳ್ಳಿ ಶ್ರೀನಿವಾಸ್, ಕೋಡಿರಾಮಸಂದ್ರ ಯಲಪ್ಪ, ಬೆಳ್ಳೂರು ಅನಿಲ್, ಕೆಜಿಎಫ್ ಶ್ರೀಧರ್, ಕೆಜಿಎಫ್ ಸಂಪತ್, ಶೆಟ್ಟಿವಾರಪಲ್ಲಿ ದೇವರಾಜ್ ಎಮ್ಮೇನತ್ತ ರಮೇಶ್, ಮದನಹಳ್ಳಿ ಸೋಮಪ್ಪ, ಮಹಿಳಾ ಒಕ್ಕೂಟದ ಚಂದ್ರಕಲಾ ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *

You missed

error: Content is protected !!