ಕೋಲಾರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ನಿದ್ದೆಗೆಟ್ಟು ರಾತ್ರಿವೇಳೆಯಲ್ಲೂ ಪ್ರಚಾರಕ್ಕೆ ಇಳಿದಿದ್ದು, ವಿಶೇಷವಾಗಿ ಮುಸ್ಲಿಂ ಸಮುದಾಯ ವಾಸಿಸುವ ವಾರ್ಡ್ಗಳಿಗೆ ಭೇಟಿ ನೀಡಿ ಮತಯಾಚನೆ ಮಾಡುತ್ತಿದ್ದು ಸಾರ್ವಜನಿಕರ ಗಮನ ಸೆಳೆಯುತ್ತಿದ್ದಾರೆ.
ಶುಕ್ರವಾರ ಕೋಲಾರ ನಗರದ ಅಲ್ಪಸಂಖ್ಯಾತರು ವಾಸಿಸುವ ಹಲವು ವಾರ್ಡುಗಳಿಗೆ ಬೇಟಿ ನೀಡಿ, ಮತಯಾಚನೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಅಲ್ಪಸಂಖ್ಯಾತರ ಪರ ಕಾಳಜಿ ಇರುವ ಯಾವುದಾದರೂ ಪಕ್ಷ ಇದೆ ಎಂದರೆ ಅದು ಜೆಡಿಎಸ್ ಮಾತ್ರ. ಏಕೆಂದರೆ ಅಲ್ಪಸಂಖ್ಯಾತರ ಮುಖಂಡರೋರ್ವರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಿ, ಹಲವು ಮುಖಂಡರಗಳಿಗೆ ಉನ್ನತ ಸ್ಥಾನಮಾನಗಳನ್ನು ನೀಡುವ ಮೂಲಕ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಅಲ್ಪಸಂಖ್ಯಾತರ ಪರ ಅವರ ಕಾಳಜಿಯನ್ನು ತೋರಿಸುತ್ತದೆ ಎಂದು ಹೇಳುವ ಮೂಲಕ ಅಲ್ಪ ಸಂಖ್ಯಾತರ ಮನಗೆಲ್ಲುವ ಪ್ರಯತ್ನದಲ್ಲಿ ಮಗ್ನರಾಗಿದ್ದಾರೆ.
ತಾವು ಸಾಮಾನ್ಯ ರೈತ ಕುಟುಂಬದಿoದ ಹುಟ್ಟಿ ಬಂದು, ಉನ್ನತ ವ್ಯಾಸಂಗವನ್ನು ಮಾಡಿ, ತನ್ನ ತವರಿಗೆ ಏನನ್ನಾದರೂ ಮಾಡಬೇಕೆಂಬ ಅದಮ್ಯ ಬಯಕೆಯಿಂದ ಸಮಾಜ ಸೇವೆಗೆ ಇಳಿದಿದ್ದು, ಮಾಜಿ ಪ್ರಧಾನಿ ದೇವೇಗೌಡರ ಆಶೀರ್ವಾದ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಜನಪರ ಆಡಳಿತ ವೈಖರಿಯನ್ನು ನೋಡಿ ಅವರ ಅಭಿಮಾನಿಯಾಗಿ ಜೆಡಿಎಸ್ ಪಕ್ಷದ ಕಟ್ಟಾಳುವಾಗಿ ಕಳೆದ ಐದು ವರ್ಷಗಳಿಂದ ಕ್ಷೇತ್ರದಲ್ಲಿ ನಿಷ್ಕಲ್ಮಶ ಹಾಗೂ ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ ನಿರಂತರವಾಗಿ ನಿಮ್ಮಗಳ ಸೇವೆ ಮಾಡುತ್ತಾ ಬಂದಿದ್ದೇನೆ ಎಂದರು.
ಯಾವುದೇ ಅಧಿಕಾರ ಇಲ್ಲದೆ ಇದ್ದರೂ ಕೂಡ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ನನ್ನ ಕೈಲಾದಷ್ಟು ಸೇವೆ ಮಾಡಿದ್ದೇನೆ. ಈಗ ನಿಮ್ಮ ಮುಂದೆ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ನಿಂತಿದ್ದು, ತಾವುಗಳು ಆಶೀರ್ವಾದ ಮಾಡಿದ್ದೆ ಆದರೆ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕನಾಗಿ ಬಹಳಷ್ಟು ಅನುದಾನಗಳನ್ನು ತರುವ ಮೂಲಕ ಕೋಲಾರ ವಿಧಾನಸಭಾ ಕ್ಷೇತ್ರವನ್ನು ಮಾದರಿಯನ್ನಾಗಿ ಮಾಡುವ ಮೂಲಕ ಸ್ವಾಭಿಮಾನವನ್ನು ಮೆರೆಯುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್, ಅಲ್ಪಸಂಖ್ಯಾತ ಮುಖಂಡರುಗಳಾದ, ನವೀದ್ ಪಾಷಾ, ಇಮ್ರಾನ್, ಕುರುಬ ಸಮಾಜದ ಜೆಟ್ ಅಶೋಕ್, ಸುಧಾಕರ್, ಕುವೆಂಪುನಗರ ಆನಂದ್ , ನಯ್ಯೂ, ಹಾಗೂ ಮತ್ತಿತರರು ಈ ಸಂದರ್ಭದಲ್ಲಿ ಸಿಎಂಆರ್ ಶ್ರೀನಾಥ್ ರವರೊಂದಿಗೆ ಹೆಜ್ಜೆ ಹಾಕಿದರು