• Tue. Apr 23rd, 2024

ಡಿಸಿಸಿ ಬ್ಯಾಂಕ್‌ಗೆ ಪರ್ಯಾಯವಾಗಿ ವಿ.ಆರ್.ಪಿ. ಕ್ರೆಡಿಟ್ ಕೋ-ಅಪರೇಟೀವ್ ಬ್ಯಾಂಕ್ -ವರ್ತೂರು ಪ್ರಕಾಶ್

PLACE YOUR AD HERE AT LOWEST PRICE

ವಿ.ಆರ್.ಪಿ. ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ  ನನ್ನ ಕನಸಿನ ಕೂಸು. ಮಹಿಳೆಯರ ಬಗ್ಗೆ  ನನಗೆ ಇರುವ ಅಪಾರ ಕಾಳಜಿಯ ದ್ಯೋತಕವೇ ಈ ಸೊಸೈಟಿ ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್ ತಿಳಿಸಿದರು.

ಅವರು ಭಾನುವಾರ ನಗರದ ಹೊರವಲಯದ   ಕೋಗಿಲಹಳ್ಳಿಲ್ಲಿರುವ ತಮ್ಮ ನಿವಾಸದಲ್ಲಿ ಏರ್ಪಡಿಸಿದ್ದ ವಿ.ಆರ್.ಪಿ. ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಉದ್ಘಾಟನೆ ನೆರವೇರಿಸಿ ಮಾತನಾಡಿದರು.ಕೋಲಾರ ಡಿಸಿಸಿ ಬ್ಯಾಂಕ್‌ನಲ್ಲಿ ಎಲ್ಲಾ ಸಮುದಾಯಗಳ ಹೆಣ್ಣು ಮಕ್ಕಳಿಗೆ ಸಾಲ ನೀಡುತ್ತಿಲ್ಲ, ಅದು ಕೇವಲ ಒಂದು ಸಮುದಾಯದವರಿಗೆ ಮಾತ್ರ ಸೇವೆ ನೀಡುತ್ತಿದೆ. ಹಾಗಾಗಿ ಡಿಸಿಸಿ ಬ್ಯಾಂಕ್‌ಗೆ ಪರ್ಯಾಯವಾಗಿ ವಿ.ಆರ್.ಪಿ. ಕ್ರೆಡಿಟ್ ಕೋ-ಅಪರೇಟೀವ್ ಬ್ಯಾಂಕ್ ಆರಂಭಿಸಲಾಗಿದೆ ಎಂದರು.

ನನ್ನ ಕ್ಷೇತ್ರದ ಮಹಿಳೆಯರು ಆರ್ಥಿಕವಾಗಿ ಸಬಲೀಕರಣ ಗೊಳ್ಳಬೇಕು ಎಂಬ ಮಹದಾಸೆಯಿಂದ ರೂಪುಗೊಂಡಿರುವ ಈ ಸೊಸೈಟಿಯಲ್ಲಿ ಮಹಿಳೆಯರಿಗಾಗಿ ವಿಶೇಷ ಸವಲತ್ತುಗಳು ಸಾಲ ಸೌಲಭ್ಯಗಳು ನೀಡುವ ಮೂಲಕ ಅವರ ಕುಟುಂಬ ನೆಮ್ಮದಿಯಿಂದ ಜೀವನ ನಡೆಸಬೇಕು ಎಂಬ ಮಹದಾಸೆ ಇಟ್ಟುಕೊಂಡಿರುವ ನನ್ನ ಈ ಮಹಾ ಕಾರ್ಯಕ್ಕೆ ಕ್ಷೇತ್ರದ ಹೆಣ್ಣು ಮಕ್ಕಳು ಆಶೀರ್ವದಿಸಿ ಹರಸಿ ಮುಂಬರುವ ದಿನಗಳಲ್ಲಿ ನನ್ನನ್ನು ಕ್ಷೇತ್ರದ ಶಾಸಕರನ್ನಾಗಿ ಮಾಡಿಕೊಂಡು ಕ್ಷೇತ್ರವನ್ನು ಸಂಪೂರ್ಣವಾಗಿ ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಪೂರ್ಣ ಜವಾಬ್ದಾರಿ ನಿಮ್ಮ ಮೇಲಿದೆ ಎಂದರು.

ಕಳೆದ ಒಂದು ದಶಕ ಕೋಲಾರ ವಿಧಾನಸಭಾ ಕ್ಷೇತ್ರ ರಾಮ ರಾಜ್ಯವಾಗಿತ್ತು ಕಾರಣ ಇಲ್ಲಿ ನಾನು ಶಾಸಕ, ಸಚಿವನಾಗಿದ್ದೆ, ಪ್ರಸ್ತುತ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕಾಣದೆ ಕೋಲಾರ ವಿಧಾನಸಭಾ ಕ್ಷೇತ್ರವು ಹದಗೆಟ್ಟು ಹೋಗಿದೆ. ಹದಗೆಟ್ಟ ಕೋಲಾರನ್ನು ಮತ್ತೆ ಗತ ವೈಭವ ಮರುಕಳಿಸುವಂತೆ ಮಾಡುವ ಮೂಲಕ ಮತ್ತೊಮ್ಮೆ ವರ್ತೂರ್ ಪ್ರಕಾಶ್ ಎಂಬ ಘೋಷವಾಕ್ಯದಡಿ ನೀವೆಲ್ಲರೂ ಹೋರಾಡೋ ಮೂಲಕ ಕ್ಷೇತ್ರವನ್ನು ಮತ್ತೆ ರಾಮರಾಜ್ಯವನ್ನಾಗಿಸಬೇಕಿದೆ..‌ ಈ ಮೂಲಕ ನಾವು ಎಲ್ಲರೂ ಸೇರಿ ಹೊಸತೊಂದು ಇತಿಹಾಸ ಸೃಷ್ಟಿ ಮಾಡಬೇಕಿದೆ ಎಂದು ಅವರು ತಿಳಿಸಿದರು.ಇದೇ ವೇಳೆ ಸುಮಾರು ಒಂದು ಸಾವಿರ ಮಹಿಳೆಯರಿಗೆ ಹರಿಶಿಣ ಕುಂಕುಮ ದೊಂದಿಗೆ ಸೀರೆಗಳನ್ನು ಉಡುಗೊರೆಯಾಗಿ ನೀಡಲಾಯಿತು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ತೇಜಸ್ ವರ್ತೂರು, ಬೆಗ್ಲಿ ಸೂರ್ಯ ಪ್ರಕಾಶ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಿಎಸ್ ವೆಂಕಟೇಶ್, ಮುಖಂಡ ಬಂಕ್ ಮಂಜು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ರೂಪಶ್ರೀ ಮಂಜುನಾಥ್, ಶ್ರೀಮತಿ ಉಮಾ, ಮುನಿಚಿನ್ನಪ್ಪ ಹಾಗೂ
ವಿ.ಆರ್.ಪಿ. ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕರುಗಳಾದ, ರಮೇಶ್ ಭರತ್, ಮುನಿರಾಜು, ವೆಂಕಟೇಶ್, ರಾಧಾ, ನಿತಿನ್ ವರ್ತೂರು, ಪುಷ್ಪ ಅನಿತಾ,, ಸರಸ್ವತಿ ಹಾಗೂ ಆಡಳಿತಾಧಿಕಾರಿ ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.

Related Post

ಬಲಗೈ ಸಮುದಾಯದ ಬಹುಸಂಖ್ಯಾತ ಚಿಕ್ಕತಾಳಿ ಸಮಾಜವನ್ನು ಕಾಂಗ್ರೆಸ್ ಅಭ್ಯರ್ಥಿ ನಿರ್ಲಕ್ಷ್ಯ ಮಾಡಿದ್ದಾರೆ : ಸಮುದಾಯ ಮುಖಂಡರ ಆರೋಪ
ಕೆ.ಹೆಚ್.ಮುನಿಯಪ್ಪ ಬಲಗೈಭಂಟ ಜಿಪಂ ಮಾಜಿ ಸದಸ್ಯ ಎಂ.ರಾಮಚ0ದ್ರ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆ
ಕೋಲಾರ ಮೀಸಲು ಕ್ಷೇತ್ರವನ್ನು ಸಾಮಾನ್ಯ ಕ್ಷೇತ್ರ ಮಾಡುತ್ತೇನೆ ಎಂದ ವರ್ತೂರು ಪ್ರಕಾಶ್ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು – ದಲಿತ್ ನಾರಾಯಣಸ್ವಾಮಿ ಅಕ್ರೋಶ

Leave a Reply

Your email address will not be published. Required fields are marked *

You missed

error: Content is protected !!