• Thu. Mar 28th, 2024

PLACE YOUR AD HERE AT LOWEST PRICE

ಕೆಜಿಎಫ್:ಬೇತಮಂಗಲ ಗ್ರಾಮದ ಕ್ಯಾಸಂಬಳ್ಳಿ ಮುಖ್ಯ ರಸ್ತೆಯಲ್ಲಿ ಹಾಲಿನ ಉತ್ಪನ್ನಗಳ ಹಾಗೂ ಹಾಲು ಕರೆಯುವ ಯಂತ್ರಗಳು ಸೇರಿದಂತೆ ಎಲ್ಲಾ ಯಂತ್ರಗಳು ದೊರೆಯುವ ಸ್ಮಾರ್ಟ್ ಮೂಗ್ರೌವ್ ಕಂಪನಿಯ ಮಳಿಗೆಯನ್ನು ನೂತನವಾಗಿ ಉದ್ಘಾಟನೆ ಮಾಡಲಾಯಿತು.

ಕ್ಯಾಸಂಬಳ್ಳಿ ಮುಖ್ಯ ರಸ್ತೆಯ ಎಸ್‍ಎಲ್‍ವಿ ಹಾಲಿನ ಕೇಂದ್ರದ ಬಳಿ ಎಸ್‍ಎಲ್‍ವಿ ಮಾಲೀಕರಾದ ವೆಂಕಟೇಶ್ (ಅಪ್ಪಿ) ಅವರ ಮಾಲೀಕತ್ವದಲ್ಲಿ ನೂತನವಾಗಿ ಘಟಕವನ್ನು ಉದ್ಘಾಟನೆ ಮಾಡಲಾಗಿದ್ದು, ಗ್ರಾಮೀಣ ಭಾಗದ ಹೈನುಗಾರಿಕೆಯ ರೈತರಿಗೆ ಸಹಕಾರಿಯಾಗಿದ್ದಾರೆ.

ಈ ಸ್ಮಾರ್ಟ್ ಮೂಗ್ರೌವ್ ಕಂಪನಿಯ ಘಟಕದಲ್ಲಿ ರೈತರ ಕೃಷಿ ಚಟುವಟಿಕೆಗಳಿಗೆ ಬೇಕಾದ ಯಂತ್ರಗಳು ಹಾಗೂ ಇತರೆ ರಸಗೊಬ್ಬರ ಸೇರಿದಂತೆ ಇತರೆ ಯಂತ್ರಗಳನ್ನು ಸಹ ಬೇರೆ ಕಂಪನಿ ಬೆಲೆಗಿಂತ ಕಡಿಮೆ ಬೆಲೆಗೆ ನೀಡಲಾಗುತ್ತದೆ ಎಂದು ಮಾಲೀಕ ವೆಂಕಟೇಶ್ ಅವರು ತಿಳಿಸಿದರು.

ಗ್ರಾಮೀಣ ಭಾಗದ ಜನರು ಹೆಚ್ಚಿನ ಪ್ರಮಾಣದಲ್ಲಿ ಹೈನುಗಾರಿಕೆಯಿಂದಲ್ಲೇ ಜೀವನ ರೂಪಿಸಿಕೊಂಡಿರುವುದರಿಂದ ರೈತರಿಗೆ ಉಪಯೋಗವಾಗಲಿ ಎಂಬ ಹಿತ ದೃಷ್ಠಿಯಿಂದ ಹಸುಗಳಿಗೆ ಬೇಕಿರುವ ಆಹಾರ ಪದಾರ್ಥಗಳು, ಹಾಲಿನ ಉತ್ಪನ್ನಗಳು, ಹಾಲು ಕರೆಯುವ ಯಂತ್ರಗಳು.

ಹಸುಗಳಿಗೆ ರಬ್ಬರ್ ಮ್ಯಾಟ್, ಹಾಲಿನ ಕ್ಯಾನ್, ಖನಿಜ ಮಿಶ್ರಣ ಹಾಗೂ ಡೈರಿ ಉಪಕರಣಗಳು ಸೇರಿದಂತೆ ಅಗತ್ಯ ಯಂತ್ರಗಳನ್ನು ಒಂದೇ ಕಂಪನಿಯಿಂದ ನೀಡಲಾಗುತ್ತದೆ ಎಂದು ಮಾಲೀಕ ವೆಂಕಟೇಶಪ್ಪ ತಿಳಿಸಿದರು.

ಈ ಸಂದರ್ಭದಲ್ಲಿ ಸ್ಮಾರ್ಟ್ ಮೂಗ್ರೌವ್ ಕಂಪನಿಯ ಸತೀಶ್,ಚಿರಂಜೀವಿ, ಭಾಸ್ಕರ್, ಮಧು, ಮುಖಂಡರಾದ ರಮೇಶ್, ಶ್ರೀನಿವಾಸ್ ರಾಜ್, ಮಂಜುನಾಥ್, ರವಿ, ಅಪ್ಪಿ, ವಡವೇಲು, ರಾಜೇಶ್, ಶಿವ, ಕಾರ್ತಿಕ್ ಸೇರಿದಂತೆ ಹಾಲು ಪೂರೈಸುವ ರೈತರು ಹಾಗೂ ಸಾರ್ವಜನಿಕರು ಇದ್ದರು.

Leave a Reply

Your email address will not be published. Required fields are marked *

You missed

error: Content is protected !!