• Tue. Apr 23rd, 2024

PLACE YOUR AD HERE AT LOWEST PRICE

ಬಂಗಾರಪೇಟೆ:ಬೆಂಗಳೂರು ವಿವಿ ಉತ್ತರ ವಿಭಾಗದ ಕೋಲಾರ ಜಿಲ್ಲೆಯ ಕುಲಪತಿಗಳಾದ ನಿರಂಜನ್ ಮತ್ತು ಆಪ್ತ ಕಾರ್ಯದರ್ಶಿಯಾದ ರಾಘವೇಂದ್ರ ಆರ್ ಎಸ್ ಎಸ್ ಮತ್ತು ಬಿಜೆಪಿಯ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ದಲಿತ ವಿದ್ಯಾರ್ಥಿ ಅಮೃತ ಕೆ.ಎಸ್. ಎಂಬುವರಿಗೆ ದಾಖಲಾತಿ ನಿರಾಕರಿಸಿ ತಾರತಮ್ಯ ಎಸಗಿದ್ದಾರೆ ಎಂದು ಕರ್ನಾಟಕ ರಿಪಬ್ಲಿಕನ್ ಸೇನೆಯ ಜಿಲ್ಲಾಧ್ಯಕ್ಷ ಚಿಕ್ಕನಾರಾಯಣ ಆರೋಪ ಮಾಡಿದರು.

ಅವರು ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ,  ಅಮೃತ ಬಿನ್ ಶ್ರೀನಿವಾಸಮೂರ್ತಿ ಎಂಬ ದಲಿತ ವಿದ್ಯಾರ್ಥಿ 2023-24ನೇ ಸಾಲಿನ ಸ್ನಾತಕೋತರ ಪದವಿ (ಎಂ.ಎ. ಅರ್ಥಶಾಸ್ತ್ರ)  ದಾಖಲಾತಿ ಬಯಸಿ ಅರ್ಜಿಯನ್ನು ಸಲ್ಲಿಸಿದ್ದು,  ಕುಲಪತಿಗಳಾದ ನಿರಂಜನ್ ಮತ್ತು ಅವರ ಆಪ್ತ ಕಾರ್ಯದರ್ಶಿ ರಾಘವೇಂದ್ರ ನಿರಂತರವಾಗಿ 20 ದಿನಗಳು ವಿದ್ಯಾರ್ಥಿಯನ್ನು ಕಛೇರಿಗೆ ಅಲೆದಾಡುವಂತೆ ಮಾಡಿ ದಾಖಲಾತಿ ಮಾಡಿಕೊಳ್ಳದೆ ನಿರಾಕರಿಸಿರುತ್ತಾರೆಂದು ಆರೋಪಿಸಿದರು.

ಉನ್ನತ ಸಚಿವರ ಅಧೀನ ಕಾರ್ಯದರ್ಶಿಯಾದ ಸ್ನೇಹಾಲ್ ಸುಧಾಕರ್ರ ಬಳಿ ಹೋಗಿ ಘಟನೆಯನ್ನು ವಿವರಿಸಲಾಯಿತು. ಮನವಿಯನ್ನು ಪುರಸ್ಕರಿಸಿದ ಅಧೀನ ಕಾರ್ಯದರ್ಶಿಯವರು ಕುಲಪತಿಗಳಿಗೆ ದೂರವಾಣಿ ಕರೆ ಮಾಡಿ ಕೆ.ಎಸ್.ಅಮೃತರಿಗೆ ದಾಖಲಾತಿ ಮಾಡಿಕೊಳ್ಳುವಂತೆ ತಿಳಿಸಿರುತ್ತಾರೆ. ಆದರೆ ಕುಲಪತಿಗಳಾದ ನಿರಂಜನ್ ಮತ್ತು ರಾಘವೇಂದ್ರ ಉನ್ನತ ಅಧಿಕಾರಿಗಳ ಮಾತನ್ನು ಧಿಕ್ಕರಿಸಿ ದಾಖಲಾತಿಯನ್ನು ನೀಡದೆ ನಿರಾಕರಿಸಿರುತ್ತಾರೆಂದು ಆರೋಪಿಸಿದರು.

ಸದರಿ ಘಟನೆಗೆ ಸಂಬಂಧಪಟ್ಟಂತೆ ಕುಲಪತಿಗಳನ್ನು ಪ್ರಶ್ನಿಸಿದಾಗ ನಾವು ಆರ್ ಎಸ್ ಎಸ್ ಮೂಲದವರು ಮತ್ತು ಬಿಜೆಪಿ ಸರ್ಕಾರದಲ್ಲಿ ನಮ್ಮ ಕುಟುಂಬದ ಸದಸ್ಯರು ಇದ್ದಾರೆ, ನಿಮ್ಮ ಕೈಯಲ್ಲಿ ಏನು ಮಾಡಲು ಸಾಧ್ಯವಿಲ್ಲ, ಎಂದು ಬೇಜವಾಬ್ದಾರಿ ಹೇಳಿಕೆಯನ್ನು ನೀಡುವುದರೊಂದಿಗೆ ದಲಿತ ವಿರೋಧಿ ನೀತಿಯನ್ನು ಅನುಸರಿಸಿರುತ್ತಾರೆ,  ಆರ್ ಎಸ್ ಎಸ್ ಮತ್ತು ಬಿಜೆಪಿಯ ಪ್ರಮುಖ ಗುರಿ ದಲಿತರನ್ನು ಶಿಕ್ಷಣದಿಂದ ವಂಚಿತರನ್ನಾಗಿಸುವುದೇ ಆಗಿದೆ ಎಂದು ಆರೋಪಿಸಿದರು.

ಕುಲಪತಿ ನಿರಂಜನ್ರವರು ಮೂಲತಹ ಮೈಸೂರಿನವರಾಗಿದ್ದು ಕಚೇರಿಗೆ ಬೇಕಾದ ಸ್ಕ್ಯಾನರ್ ಒದಗಿಸಲು ದೂರವಾಣಿ ಕರೆಯಲ್ಲಿ ನಾಲ್ಕು ಲಕ್ಷ ಹೆಚ್ಚುವರಿ ಹಣ ಬಿಲ್ ಮಾಡಿ ಕೊಡುವುದಾಗಿ ಉಳಿದ ಹಣವನ್ನು ತಮ್ಮ ಖಾತೆಗೆ ವರ್ಗಾವಣೆ ಮಾಡುವಂತೆ ಮಾರಾಟಗಾರರಲ್ಲಿ ಮನವಿ ಮಾಡುತ್ತಿದ್ದರು.

ಕಚೇರಿಗೆ ಬೇಕಾದ ಇನ್ನಿತರ ಸಾಮಗ್ರಿಗಳನ್ನು ಕಡಿಮೆ ಹಣದಲ್ಲಿ ಖರೀದಿಸಿ ಹೆಚ್ಚುವರಿ ಹಣ ಬಿಲ್ ಪಾವತಿ ಮಾಡಿ ಮಾರಾಟಗಾರರಿಂದ ತಮ್ಮ ಖಾತೆಗೆ ಹಣ ವರ್ಗಾವಣೆ ಮಾಡಿಕೊಳ್ಳುವ ಹುನ್ನಾರ  ನಡೆಯುತ್ತಿದೆ..  ಇಂತಹ ದಲಿತ ವಿರೋಧಿ ಮನುವಾದಿ ಸಿದ್ಧಾಂತದ ಅಧಿಕಾರಿಗಳನ್ನು ಸರ್ಕಾರ ಈ ಕೂಡಲೇ ವಜಾ ಮಾಡಬೇಕು.

ಕೆ.ಎಸ್.ಅಮೃತ ಎಂಬುವರಿಗೆ ನ್ಯಾಯ ಒದಗಿಸಿ ಕೊಡಬೇಕು, ಇಲ್ಲದೆ ಹೋದಲ್ಲಿ ಉತ್ತರ ವಿಭಾಗದ ವಿಶ್ವವಿದ್ಯಾಲಯದ ಮುಂಭಾಗದಲ್ಲಿ ಬೃಹತ್ ತಮಟೆ ಚಳುವಳಿಯ ಮೂಲಕ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.

ಈ ವೇಳೆ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಮಚಂದ್ರ. ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ ಬಿ.ಅಂಬರೀಶ್. ಜಿಲ್ಲಾಧ್ಯಕ್ಷ ಯಲ್ಲೇಶ್. ಭೀಮ ಪ್ರಜಾ ಸಂಘದ ಜಿಲ್ಲಾಧ್ಯಕ್ಷ ಮುನಿರಾಜು. ಉಪಸ್ಥಿತರಿದ್ದರು.

Related Post

ಬಲಗೈ ಸಮುದಾಯದ ಬಹುಸಂಖ್ಯಾತ ಚಿಕ್ಕತಾಳಿ ಸಮಾಜವನ್ನು ಕಾಂಗ್ರೆಸ್ ಅಭ್ಯರ್ಥಿ ನಿರ್ಲಕ್ಷ್ಯ ಮಾಡಿದ್ದಾರೆ : ಸಮುದಾಯ ಮುಖಂಡರ ಆರೋಪ
ಕೆ.ಹೆಚ್.ಮುನಿಯಪ್ಪ ಬಲಗೈಭಂಟ ಜಿಪಂ ಮಾಜಿ ಸದಸ್ಯ ಎಂ.ರಾಮಚ0ದ್ರ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆ
ಕೋಲಾರ ಮೀಸಲು ಕ್ಷೇತ್ರವನ್ನು ಸಾಮಾನ್ಯ ಕ್ಷೇತ್ರ ಮಾಡುತ್ತೇನೆ ಎಂದ ವರ್ತೂರು ಪ್ರಕಾಶ್ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು – ದಲಿತ್ ನಾರಾಯಣಸ್ವಾಮಿ ಅಕ್ರೋಶ

Leave a Reply

Your email address will not be published. Required fields are marked *

You missed

error: Content is protected !!