• Fri. Mar 29th, 2024

*ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಟೀಕಿಸುವವರಿಗೆ ಮೇ ತಿಂಗಳಲ್ಲಿನ ಫಲಿತಾಂಶವೇ ಉತ್ತರವಾಗಬೇಕು-ಬ್ಯಾಲಹಳ್ಳಿ ಗೋವಿಂದಗೌಡ*

PLACE YOUR AD HERE AT LOWEST PRICE

ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧೆ ಬೆನ್ನಲ್ಲೇ ದಾರಿ ಹೋಕರು ಟೀಕೆ ಮಾಡಲು ಹೊರಟಿದ್ದಾರೆ. ಅವರಿಗೆಲ್ಲ ಮೇ ತಿಂಗಳಲ್ಲಿನ ಫಲಿತಾಂಶವೇ ಉತ್ತರವಾಗಬೇಕು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.

ತಾಲೂಕಿನ ಮಡಿವಾಳ ಗ್ರಾಮದಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಪಕ್ಷದ ಬೂತ್ ಮಟ್ಟದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಗೆ ಸಿದ್ದರಾಮಯ್ಯ ಅವರನ್ನು ಟೀಕೆ ಮಾಡುವುದು ಅವರ ಪ್ರವೃತ್ತಿಯಾಗಿಗೆ ಅದರ ಬಗ್ಗೆ ಯಾರು ಕೂಡ ತಲೆ ಕೆಡಿಸಿಕೊಳ್ಳಬೇಡಿ. ಮತದಾರರು ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಜನಪ್ರಿಯ ಯೋಜನೆಗಳನ್ನು ಬೆಂಬಲಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ಹಾಕುವ ಮೂಲಕವೇ ಉತ್ತರ ಕೊಡಬೇಕು ಎಂದರು.

ಸಿದ್ದರಾಮಯ್ಯ ಮಾ.೨೦ ಮತ್ತು ೨೧ ರಂದು ಎರಡು ದಿನಗಳ ಕಾಲ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಪ್ರವಾಸ ಮಾಡಲಿದ್ದು, ಮಾ.೨೦ ರಂದು ಕ್ಯಾಲನೂರು ಗ್ರಾಮದಲ್ಲಿ ಬೃಹತ್ ಸಭೆ ನಡೆಸಲಾಗುತ್ತಿದೆ. ಈ ಭಾಗದಲ್ಲಿ ಹೆಚ್ಚಿನ ಜನರು ಪಾಲ್ಗೊಳ್ಳಬೇಕೆಂದು ಕೋರಿದ ಅವರು, ಮುಂದಿನ ಭವಿಷ್ಯದ ಜೀವನದ ದೃಷ್ಟಿಯಿಂದ ಯೋಚನೆ ಮಾಡಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕೆoದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಶ್ರೀನಿವಾಸಗೌಡ ಮಾತನಾಡಿ, ಮಾಜಿ ಸಿಎಂ ಸಿದ್ದರಾಮಯ್ಯರನ್ನು ಕೋಲಾರ ಕ್ಷೇತ್ರದ ಜನತೆ ಸ್ಮರಣೆ ಮಾಡಿಕೊಳ್ಳಬೇಕು. ಕೆಸಿವ್ಯಾಲಿ ಯೋಜನೆ ಸೇರಿದಂತೆ ಅನೇಕ ರೈತಪರ ಯೋಜನೆಗಳಿಂದಾಗಿ ಜಿಲ್ಲೆಗೆ ಅನುಕೂಲ ಕಲ್ಪಿಸಿದ್ದಾರೆ. ಈಗಾಗಲೇ ಜಿಲ್ಲೆಯಿಂದ ಮೊದಲ ಮುಖ್ಯಮಂತ್ರಿ ನೀಡಲಾಗಿದ್ದು,ಸಿದ್ದರಾಮಯ್ಯರನ್ನು ಬೆಂಬಲಿಸಿ ಮುಂದಿನ ಮುಖ್ಯಮಂತ್ರಿಯನ್ನೂ ನಮ್ಮ ಜಿಲ್ಲೆಯಿಂದಲೇ ನೀಡೋಣ ಎಂದು ಹೇಳಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ ಮಾತನಾಡಿ, ಸಿದ್ದರಾಮಯ್ಯರ ಸಾಧನೆಗಳನ್ನು ಮುಂದಿಟ್ಟುಕೊoಡು ಪ್ರಚಾರಕ್ಕೆ ತೆರಳುತ್ತಿದ್ದು, ಜನರಿಗೆ ಮನವರಿಕೆ ಮಾಡಿಕೊಡಬೇಕು. ಬಡವರ ಪರವಾಗಿ ಯೋಜನೆಗಳನ್ನು ರೂಪಿಸಲು ಕಾಂಗ್ರೆಸ್ ನಿoದ ಮಾತ್ರ ಸಾಧ್ಯವಿದ್ದು, ಈಗಾಗಲೇ ಜಿಲ್ಲೆಯಲ್ಲಿ ಮೂಲ ಕಾಂಗ್ರೆಸ್ಸಿಗರು ಜನತಾ ಪರಿವಾರದ ನಾಯಕರು ಜತೆಯಾಗಿ ಕೆಲಸ ಮಾಡುತ್ತಿದ್ದೇವೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಜಿಲ್ಲೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಸಹಕರಿಸುವಂತೆ ಕೋರಿದರು.

ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಕಡಗಟ್ಟೂರು ದಯಾನಂದ್, ಕೋಚಿಮುಲ್ ಮಾಜಿ ನಿರ್ದೇಶಕ ರಾಮಕೃಷ್ಣೇಗೌಡ, ಮಾಜಿ ತಾಪಂ ಅಧ್ಯಕ್ಷ ಉದಯ್ ಶಂಕರ್, ಸ್ಥಳೀಯ ಮುಖಂಡರಾದ ದೇವರಾಜ್, ಶ್ರೀನಿವಾಸ್, ವೆಂಕಟಸ್ವಾಮಪ್ಪ, ಲಕ್ಷ್ಮಣ್, ಮುನಿರಾಜು, ಬೈರೇಗೌಡ, ಗೋಪಾಲಕೃಷ್ಣ, ಮಲ್ಲಪ್ಪನಹಳ್ಳಿ ಸೋಮಣ್ಣ, ನಾರಾಯಣಸ್ವಾಮಿ, ತಿರುಮಲಪ್ಪ, ಚಂದ್ರಶೇಖರ್, ಡೇವಿಡ್, ರಿಯಾಜ್ ಉಪಸ್ಥಿತರಿದ್ದರು.

 

ಇದನ್ನೂ ಓದಿ : *ಯಾರೇ ತೊಂದರೆ ನೀಡಿದರು ಬಡವರಿಗೆ ಆಹಾರಕಿಟ್‍ ಸೇರಲಿವೆ:ರೂಪಕಲಾ.*

Leave a Reply

Your email address will not be published. Required fields are marked *

You missed

error: Content is protected !!