• Wed. Apr 24th, 2024

PLACE YOUR AD HERE AT LOWEST PRICE

ಬಂಗಾರಪೇಟೆ:ನಾಗರಿಕತೆ ಬೆಳೆದಂತೆ ಮಾನವ ವಿಶಾಲಮನೋಭಾವವನ್ನು ಮರೆತು ಸಂಕುಚಿತ  ಮನೋಭಾವವನ್ನು ಹೊಂದುತ್ತಿದ್ದು, ಇದರ ಪರಿಣಾಮವಾಗಿ ಮಾನವೀಯ ಮೌಲ್ಯಗಳು ಕಣ್ಣರೆಯಾಗಿ ಇದು ಸಮಾಜಕ್ಕೆ ಮಾರಕವಾಗಿ ಪರಿಣಮಿಸಿದೆ ಎಂದು ಸಿಡಿಪಿಓ ಮುನಿರಾಜು ಕಲವಳ ವ್ಯಕ್ತಪಡಿಸಿದರು.

ಅವರು ರಾಷ್ಟ್ರೀಯ ಸಾಮಾಜಿಕ ರಕ್ಷಣಾ ಸಂಸ್ಥೆ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಭಾರತ ಸರ್ಕಾರ, ಹಾಗೂ ಶ್ರೀ ಶತಶೃಂಗ ವಿದ್ಯಾಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಪಟ್ಟಣದ ನವಚೇತನ ವಿದ್ಯಾ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ “ಅಂತರಾಷ್ಟ್ರೀಯ ಸಹಸಂಬಂಧ” ಸಂವೇಧನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

21ನೇ ಶತಮಾನದಲ್ಲಿ ಜಾಗತೀಕರಣ, ಔದ್ಯೋಗಿಕರಣ, ಆಧುನೀಕರಣ, ಉದಾರೀಕರಣ ಅತಿ ವೇಗವಾಗಿ ಬೆಳೆದಂತೆಲ್ಲ ಮಾನವ ಸಂಕುಲ ನಮ್ಮ ಸಂಪ್ರದಾಯ, ಆಚಾರ-ವಿಚಾರ, ಸಂಸ್ಕೃತಿಗಳನ್ನು ಮರೆತಿದ್ದಾನೆ. ಅವಿಭಕ್ತ ಕುಟುಂಬಗಳು ಕಣ್ಮರೆಯಾಗಿ ವಿಭಕ್ತ ಕುಟುಂಬಗಳಾಗಿ ಪರಿಣಮಿಸಿ ಕುಟುಂಬ ಸದಸ್ಯರ ನಡುವಿನ ಸಂಬಂಧಗಳು ಹದಗೆಟ್ಟಿವೆ ಎಂದರು.

ಸುಸಂಸ್ಕೃತ ವ್ಯಕ್ತಿತ್ವ ಪುಸ್ತಕದ ಕೈಪಿಡಿಯಿಂದ ದೊರೆಯುವಂತದ್ದಲ್ಲ, ಕುಟುಂಬದ ಸದಸ್ಯರ ಸಹಕಾರ, ಹಿರಿಯ ನಾಗರಿಕರ ಮಾರ್ಗದರ್ಶನ, ಪ್ರೀತಿ, ವಿಶ್ವಾಸ, ಆತ್ಮೀಯತೆ, ಮೂಲಕ ರೂಪಗೊಳ್ಳುತ್ತದೆ.  ಆದರೆ ಇತ್ತೀಚೆಗೆ ಸಾಮಾಜಿಕ, ಮಾನವೀಯ, ನೈತಿಕ ಮೌಲ್ಯಗಳು ಕುಸಿಯುತ್ತಿದ್ದು, ಇದರಿಂದ ವೃದ್ದಾಶ್ರಮಗಳ ಸಂಖ್ಯೆ ಗಣನೀಯವಾಗಿ ಬೆಳೆಯುತ್ತಿದೆ ಎಂದರು.

ತಂತ್ರಜ್ಞಾನ ಬೆಳದಂತೆಲ್ಲ ಮಾನವನ ಜೀವನ ಯಾಂತ್ರಿಕವಾಗಿ ಪರಿಣಮಿಸಿದೆ, ತಲೆಮಾರುಗಳ ನಡುವಿನ ಅಂತರ ಹೆಚ್ಚಾಗಿ ಗೊಂದಲ, ದುಗುಡ, ಮಾನಸಿಕ ತುಮುಲುಗಳಲ್ಲಿ ಜೀವಿಸುವಂಥಾಗಿದೆ. ಮಾನವನಲ್ಲಿ ಧನಾತ್ಮಕ ಮನೋಭಾವನೆಗಳು ಕಡಿಮೆಯಾಗಿ ಋಣಾತ್ಮಕ ಮನೋಭಾವನೆಗಳು ಹೆಚ್ಚಾಗುತ್ತಿದೆ.

ಇದರಿಂದ ದ್ವೇಷ, ಅಸೂಯೆ, ತಾರತಮ್ಯ ನೀತಿಗಳು ಹೆಚ್ಚಾಗುತ್ತಿದೆ. ಈ ಕಾರಣದಿಂದ  ಭವಿಷ್ಯದಲ್ಲಿ ಮಾನವ ಸಂಕುಲ ಅವನತಿಯ ಹಂತವನ್ನು ತಲುಪುತ್ತದೆ. ಇತ್ತೀಚಿಗೆ ತಂತ್ರಜ್ಞಾನ ಬೆಳೆದಂತೆ ಮೊಬೈಲ್ ಗಳ ಹಾವಳಿ ನಾಯಿ ಕೊಡೆಗಳಂತೆ ಹೆಚ್ಚಾಗುತ್ತಿದ್ದು, ಯುವ ಸಮುದಾಯ ಕುಟುಂಬದ ಸದಸ್ಯರೊಂದಿಗೆ ಸಂವಹನ ನಡೆಸುವುದನ್ನು ಮರೆತುಬಿಟ್ಟಿದ್ದಾರೆ.

ಕೆಲವರು ಕೇವಲ ಮೊಬೈಲ್ ನಲ್ಲಿ ತನ್ನ ಜೀವನವನ್ನು ರೂಪಿಸಿಕೊಳ್ಳಲು ನಿರ್ಧರಿಸಿದಂತಾಗಿದೆ. ಈ ಹಿನ್ನೆಲೆಯಲ್ಲಿ ಅವಿಭಕ್ತ ಕುಟುಂಬಗಳ ಸಂಖ್ಯೆಯನ್ನು ಗಟ್ಟಿಗೊಳಿಸಬೇಕು, ಸಂಬಂಧಗಳನ್ನು ಉಳಿಸಿಕೊಳ್ಳಬೇಕು, ಹಿರಿಯರ ಅನುಭವಗಳನ್ನು ಸದ್ಬಳಿಕೆ ಮಾಡಿಕೊಂಡು ಜೀವನ ನಡೆಸುವುದು ಅತ್ಯಗತ್ಯ ಇದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಬಿ ಎಲ್ ಓ ಲೀಲಾ. ಶತಶೃಂಗ ವಿದ್ಯಾ ಸಂಸ್ಥೆಯ ರಾಜ್ಯ ಕಾರ್ಯದರ್ಶಿ ಗಿರೀಶ್. ಶ್ರವಣ್ ಕುಮಾರ್ ಶಿಕ್ಷಕರಾದ ನಾಗರಾಜು ಉಪಸ್ಥಿತರಿದ್ದರು.

Related Post

ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ
ತಳಸಮುದಾಯವರು ಇಂದಿನ ಸುಳ್ಳುಗಳ ಜೊತೆಗೆ ಟ್ಯಾಗ್ ಆಗುತ್ತಿರುವುದು ದುರಂತ – ಎಲ್.ಎನ್.ಮುಕು0ದರಾಜ್
ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ರವರಿಗೆ ಜಿಲ್ಲಾ ದಲಿತ ಸಂಘಟನೆಗಳ ಸಂಯುಕ್ತ ರಂಗ ಬೆಂಬಲ : ಡಾ.ಎಂ. ಚಂದ್ರಶೇಖರ್

Leave a Reply

Your email address will not be published. Required fields are marked *

You missed

error: Content is protected !!