• Fri. Apr 19th, 2024

ಕೋಲಾರ ಹಾಲು ಒಕ್ಕೂಟದಿಂದ ಹಾಲು ಖರೀದಿ ದರ ೨.೧೦ ರೂ ಹೆಚ್ಚಳ ರೈತರಿಂದ ಖರೀದಿಸುವ ಪ್ರತಿ ಲೀಟರ್‌ಗೆ ೩೩.೯೦ ರೂ ನಿಗದಿ, ರಾಜ್ಯದಲ್ಲೇ ಅತಿ ಹೆಚ್ಚು

PLACE YOUR AD HERE AT LOWEST PRICE

ಕೋಲಾರ ಹಾಲು ಒಕ್ಕೂಟವು ಮಾರ್ಚ್ ೧೬ ರಿಂದ ಜಾರಿಗೆ ಬರುವಂತೆ ಪ್ರತಿ ಲೀಟರ್ ಹಾಲಿಗೆ ೨.೧೦ ರೂ.ಗಳನ್ನು ಹೆಚ್ಚಿಸಿ ಹಾಲು ಖರೀದಿ ದರವನ್ನು ಪರಿಷ್ಕರಿಸಿದ್ದು, ರಾಜ್ಯದ ೧೪ ಹಾಲು ಒಕ್ಕೂಟಗಳಿಗಿಂದ ಅತ್ಯಂತ ಹೆಚ್ಚಿನ ಬೆಲೆ ನೀಡುತ್ತಿದೆಯೆಂದು ಕೋಲಾರ ಹಾಲು ಒಕ್ಕೂಟದ ಅಧ್ಯಕ್ಷ ಕೆ.ವೈ.ನಂಜೇಗೌಡ ಪ್ರಕಟಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಈ ಕುರಿತು ಹೇಳಿಕೆ ನೀಡಿರುವ ಅವರು, ಪ್ರಸ್ತುತ ನೀಡುತ್ತಿರುವ ದರ ರೂ. ೩೧.೯೦ ರಿಂದ ರೂ.೨.೧೦ ಗಳನ್ನು ಹೆಚ್ಚಿಸಿ ಪರಿಷ್ಕರಿಸಿ ರೂ. ೩೩.೯೦. ಗಳಂತೆ ಉತ್ಪಾದಕರಿಗೆ ಮತ್ತು ರೂ. ೩೫.೨೫ ರಂತೆ ಸಂಘಕ್ಕೆ ಪಾವತಿಸಲು ಸರ್ವಾನುಮತದ ತೀರ್ಮಾನ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

ಒಕ್ಕೂಟವು ೧೬.೧೧.೨೦೨೨ ರಿಂದ ಅನ್ವಯವಾಗುವಂತೆ ರೂ. ೨ ಹೆಚ್ಚಿಸಿ, ತದನಂತರ ದಿನಾಂಕ ೦೧.೧೨.೨೦೨೨ ರಿಂದ ರೂ. ೨ ಗಳನ್ನು ಹೆಚ್ಚಿಸಿದ್ದು, ಪ್ರಸ್ತುತ ಉತ್ಪಾದಕರಿಗೆ ಪಾವತಿಸುತ್ತಿರುವ ರೂ. ೩೧.೯೦ ಗಳನ್ನು ಪಾವತಿಸುತ್ತಿದ್ದರೂ ಕ್ಷೇತ್ರದಲ್ಲಿ ಹಾಲು ಉತ್ಪಾದಕರ ಉತ್ಪಾದನಾ ವೆಚ್ಛ ಹೆಚ್ಚಾಗಿ ಕಂಗಾಲಾಗುತ್ತಿರುವುದನ್ನು ಮನಗಂಡು ಹಾಲು ಉತ್ಪಾದಕರ ಸಾಮಾಜಿಕ : ಆರ್ಥಿಕ ಏಳಿಗೆಗಾಗಿ ಹೆಚ್ಚಿನ ಬೆಲೆ ಪರಿಷ್ಕರಿಸುವ ಅನಿವಾರ್ಯತೆ ಆಯಿತು ಎಂದು ವಿವರಿಸಿದ್ದಾರೆ.

ಇದರಿಂದ ಇಂದಿನ ಆಡಳಿತ ಮಂಡಳಿ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಿ ೧೬.೦೩.೨೦೨೩ ರ ಬೆಳಗಿನ ಸರತಿಯಿಂದ ಜಾರಿಗೆ ಬರುವಂತೆ ಶೇ.೪.೦ ಫ್ಯಾಟ್, ಶೇ.೮.೫ ಎಸ್.ಎನ್.ಎಫ್. ಅಂಶವುಳ್ಳ ಪ್ರತಿ ಲೀಟರ್ ಹಾಲಿಗೆ ಪ್ರಸ್ತುತ ನೀಡುತ್ತಿರುವ ದರ ರೂ. ೩೧.೯೦ ರಿಂದ ರೂ.೨.೧೦ ಗಳನ್ನು ಹೆಚ್ಚಿಸಿ ಪರಿಷ್ಕರಿಸಿ ರೂ. ೩೩.೯೦. ಗಳಂತೆ ಉತ್ಪಾದಕರಿಗೆ ಮತ್ತು ರೂ. ೩೫.೨೫ ರಂತೆ ಸಂಘಕ್ಕೆ ಪಾವತಿಸಲು ಸರ್ವಾನುಮತದಿಂದ ತೀರ್ಮಾನಿಸಿದೆ ಎಂದು ತಿಳಿಸಿದ್ದಾರೆ.

ಹಾಲು ಉತ್ಪಾದಕರ ಉತ್ಪಾದನಾ ವೆಚ್ಚ ಹೆಚ್ಚಾಗಿ ಹೈನುಗಾರಿಕೆಯಲ್ಲಿ ಆಸಕ್ತಿ ಕಡಿಮೆ ಆಗುತ್ತಿರುವುದನ್ನು ಕ್ಷೇತ್ರದಲ್ಲಿ ಗಮನಿಸಿದ ನಾನು ಹಲವಾರು ಬಾರಿ ಸದನದಲ್ಲಿ ಪ್ರಶ್ನಿಸಿ ಎಳೆಎಳೆಯಾಗಿ ಅಂಕಿಅಂಶಗಳೊಂದಿಗೆ ಸರ್ಕಾರದ ಗಮನಕ್ಕೆ ತಂದರೂ ಸರ್ಕಾರವು ಹಾಲು ಉತ್ಪಾದಕರ ಹಿತ ಕಾಯ್ದುಕೊಳ್ಳುವಲ್ಲಿ ವಿಳಂಬ ನೀತಿ ತೋರಿಸಿ ಪ್ರತಿ ಲೀಟರ್ ಗೆ ಕನಿಷ್ಟ ರೂ.೫/- ಗಳನ್ನು ಹೆಚ್ಚಿಸಿ ಪರಿಷ್ಕರಿಸದೇ ಕೇವಲ ರೂ. ೨/- ಗಳನ್ನು ಹೆಚ್ಚಿಸಿರುವುದು ಹಾಲು ಉತ್ಪಾದಕರಿಗೆ ಯಾವುದೇ ಉಪಯೋಗ ಆಗದೇ ಇಂದು ರಾಜ್ಯದಲ್ಲಿ ಸರಾಸರಿ ೧೦% ರಿಂದ ೧೫% ಹಾಲು ಶೇಖರಣೆ ಕುಂಠಿತಗೊಂಡಿದೆ ಎಂದು ವಿಷಾದಿಸಿದ್ದಾರೆ.

ಕೋಲಾರ ಮುಖ್ಯಡೇರಿಯು ಸುಮಾರು ೨೭ ವರ್ಷಗಳ ಹಿಂದೆ ನಿರ್ಮಿಸಿರುವ ಹಳೆಯ ಡೇರಿಯಾಗಿದ್ದು, ಇಲ್ಲಿನ ಯಂತ್ರೋಪಕರಣಗಳು ಹಾಗೂ ತಂತ್ರಜ್ಞಾನವು ಹಳೆಯದಾಗಿರುವುದರಿಂದ, ನೂತನ ಎಂ.ವಿ.ಕೆ. ಗೋಲ್ಡನ್ ಡೇರಿ ಸ್ಥಾಪನೆಗೆ ರೂ. ೧೩೫ ಕೋಟಿಗಳ ವೆಚ್ಚದಲ್ಲಿ ಸ್ಥಾಪನೆಗೆ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ಪಡೆದು ಅಂದಿನ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ  ಅಧ್ಯಕ್ಷತೆಯಲ್ಲಿ ಶಂಕುಸ್ಥಾಪನೆಯನ್ನು ನೆರವೇರಿಸಲಾಗಿರುತ್ತದೆ. ಆದರೆ ಸರ್ಕಾರ ಬದಲಾವಣೆಯಾದ ನಂತರ ಸದರಿ ಕಾಮಗಾರಿಗೆ ಹಲವು ಕಾರಣಗಳೊಡ್ಡಿ ಸಹಕಾರ ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತಡೆಯಾಜ್ಞೆ ನೀಡಲಾಗಿತ್ತು. ಆದರೆ ಇದೀಗ ತೆರವುಗೊಳಿಸಲಾಗಿದೆ ತಿಳಿಸಿದ್ದಾರೆ.

ಇಂದಿನ ಸಭೆಯಲ್ಲಿ ಒಕ್ಕೂಟದ ಆಡಳಿತ ಮಂಡಲಿ ಸದಸ್ಯರಾದ ಜಯಸಿಂಹಕೃಷ್ಣಪ್ಪ, ಕೆ.ಎನ್. ನಾಗರಾಜ್, ಮಂಜುನಾಥರೆಡ್ಡಿ, ಜೆ. ಕಾಂತರಾಜ್, ವೈ.ಬಿ. ಅಶ್ವಥನಾರಾಯಣ, ಡಿ.ವಿ. ಹರೀಶ್, ಎನ್.ಸಿ. ವೆಂಕಟೇಶ್, ಎನ್. ಹನುಮೇಶ್, ಸುನಂದಮ್ಮ, ಕಾಂತಮ್ಮ , ಎಸ್.ವಿ. ಸುಬ್ಬಾರೆಡ್ಡಿ, ಡಾ: ಜಿ.ಟಿ. ರಾಮಯ್ಯ, ಉಪ ನಿರ್ದೇಶಕರು (ಪ.ವೈ. : ಪ.ಪಾ) ಕೆ.ಎ. ನಾಗರಾಜ್, ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಎಂ. ಕೃಷ್ಣಪ್ಪ, ಕಹಾಮ ಪ್ರತಿನಿಧಿ ಹಾಗೂ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ಗೋಪಾಲಮೂರ್ತಿ ಹಾಜರಿದ್ದರೆಂದು ತಿಳಿಸಿದ್ದಾರೆ.

 

Related Post

ಶೇ.೯೦ ರಷ್ಟು ದೇಶದ ಸಮುದಾಯಗಳು ಮುಖ್ಯವಾಹಿನಿ ಮಾದ್ಯಮಗಳಲ್ಲಿ, ಕಾರ್ಪೋರೇಟ್ ವಿಭಾಗದಲ್ಲಿ ಮತ್ತು ಅತ್ಯುನ್ನತ ಸರ್ಕಾರಿ ಹುದ್ದೆಗಳಲ್ಲಿ ಭಾಗವಹಿಸುವಿಕೆ ಇಲ್ಲ! : ರಾಹುಲ್ ಗಾಂಧಿ
ರಾಜಕೀಯ ಪಕ್ಷಗಳು ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಅನ್ಯಾಯ ಮಾಡಿವೆ : ಸಮುದಾಯ ಮುಖಂಡರ ಆಕ್ರೋಶ,
ಸಂವಿಧಾನ ಉಳಿಸಲು ದೇಶದ ಸಮಗ್ರತೆ ಕಾಪಾಡಲು ಬಿಜೆಪಿಯನ್ನು ಸೋಲಿಸಿ: ಮಂಜುನಾಥ್ ಅಣ್ಣಯ್ಯ

Leave a Reply

Your email address will not be published. Required fields are marked *

You missed

error: Content is protected !!