• Thu. Apr 18th, 2024

ಕೋಲಾರ I ಶಾಶ್ವತ ನೀರಾವರಿ ಹೋರಾಟ ಸಮಿತಿಯ ಜಲಜಾಗೃತಿ ಪಾದಯಾತ್ರೆ ಕೃಷ್ಟ-ಪೆನ್ನಾರ್ ಜೋಡಣೆ ಅನುಷ್ಠಾನಕ್ಕೆ ಆಂಜನೇಯ ರೆಡ್ಡಿ ಆಗ್ರಹ

PLACE YOUR AD HERE AT LOWEST PRICE

ನೀರಾವರಿ ತಜ್ಞ ಡಾ. ಜಿ.ಎಸ್.ಪರಮಶಿವಯ್ಯನವರ ಪರಿಕಲ್ಪನೆಯ ನ್ಯಾಷನಲ್ ವಾಟರ್ ಡವೆಲಪ್‌ಮೆಂಟ್ ಏಜೆನ್ಸಿ ಶಿಫಾರಸ್ಸು ಮಾಡಿರುವ ಕೃಷ್ಣ ಮತ್ತು ಪೆನ್ನಾರ್ ನದಿಗಳ ಜೋಡಣೆಯ ಯೋಜನೆಯನ್ನು ತುರ್ತಾಗಿ ಅನುಷ್ಟಾನಗೊಳಿಸಿ ಬಯಲು ಸೀಮೆ ಪ್ರದೇಶದ ವ್ಯಾಪ್ತಿಗೆ ಸೇರಿದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ನೀರು ಒದಗಿಸಬೇಕು ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಸಂಚಾಲಕ ಆಂಜನೇಯ ರೆಡ್ಡಿ ಆಗ್ರಹಿಸಿದರು.

ಭಾನುವಾರ ಕೋಲಾರ  ನಗರದ ಶಾಶ್ವತ ನೀರಾವರಿ ಹೋರಾಟ ಸಮಿತಿಯ ವೇದಿಕೆಯಲ್ಲಿ ಜಲಜಾಗೃತಿ ಪಾದಯಾತ್ರೆಯ ಸಮಾವೇಶದಲ್ಲಿ ಅವರು ಮಾತನಾಡಿ, ಜನ ಜಾನುವಾರುಗಳಿಗೆ ಶುದ್ದ ಕುಡಿಯುವ ನೀರನ್ನು ಮತ್ತು ೧.೮೨ ಲಕ್ಷ ಎಕರೆ ರೈತರ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಈ ಯೋಜನೆಯಿಂದ ಕಲ್ಪಿಸಬಹುದಾಗಿದೆ ಎಂದರು.

ಕುಡಿಯುವ ನೀರಾವರಿಗಾಗಿ ಕಳೆದ ೨೦ ವರ್ಷಗಳಿಂದ ಹೋರಾಟ ನಡೆಸಿದ್ದರೂ ಸರ್ಕಾರ ಶಾಶ್ವತ ನೀರಾವರಿ ಬದಲು ಒಂದು ಹನಿಯೂ ನೀರು ಬಾರದ ಎತ್ತಿನ ಹೊಳೆಯ ಅವೈಜ್ಞಾನಿಕ ಯೋಜನೆಯಲ್ಲಿ ಡಿಪಿಆರ್‌ನ್ನು ೮ ಸಾವಿರ ಕೋಟಿಯಿಂದ ೨೪ ಸಾವಿರ ಕೋಟಿ ರೂಗಳಿಗೆ ಹೆಚ್ಚುವರಿಯಾಗಿ ಏರಿಕೆ ಮಾಡಿ ಜನರನ್ನು ಮರಳು ಮಾಡಿದೆ ಎಂದು ಟೀಕಿಸಿದರು.

ತಮಗೆ ಬೇಕಾದ ಗುತ್ತಿಗೆದಾರರಿಗೆ ಸಾವಿರಾರು ಕೋಟಿ ಕಾಮಗಾರಿಗಳನ್ನು ಕೊಡಿಸಿ ಚುನಾವಣೆಗೆ ಅಗತ್ಯವಾದ ಸಂಪನ್ಮೂಲಗಳನ್ನು ಪಡೆಯುವ ಹುನ್ನಾರ ಮಾಡಲಾಗಿದೆ ಇಂತಹ ಜನಪ್ರತಿನಿಧಿಗಳಿಂದ ಬಯಲು ಸೀಮೆ ಜಿಲ್ಲೆಗಳಿಗೆ ನೀರು ಹರಿಯಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಎತ್ತಿನ ಹೊಳೆ ಅವೈಜ್ಞಾನಿಕ ಯೋಜನೆಯೆಂದು ಸೆಂಟ್ರಲ್ ವಾಟರ್ ಕಮೀಷನ್ ಅಧ್ಯಯನ ಸಂಸ್ಥೆ ವರದಿ ಕಳೆದ ೨೦೧೨ರಲ್ಲಿ ನೀಡಿತ್ತು, ಜನ ವಿಜ್ಞಾನದ ಮರು ಅಧ್ಯಾಯನಕ್ಕೆ ಶಿಫಾರಸು ಮಾಡಿ ನ್ಯಾಷನಲ್ ಇನ್ಸಟಿಟ್ಯೊಟ್ ಆಫ್ ಹೈಡ್ರಾಲಜಿ ೨೦೧೪ರಲ್ಲಿ ಸರ್ಕಾರಕ್ಕೆ ನೀಡಿತ್ತು. ಟೆಕ್ನಿನಿಕಲ್ ಎಕ್ಸ್‌ಫರ್ಟ್ ಸಮಿತಿ ೨೦೧೫ರಲ್ಲಿ ಅವೈಜ್ಞಾನಿಕ ಯೋಜನೆ ಎಂದು ತಿಳಿಸಿದ್ದರೂ ಸಹ ಈ ಯೋಜನೆಯ ನೆಪದಲ್ಲಿ ಸಾರ್ವಜನಿಕರ ಹಣವನ್ನು ಲೂಟಿ ಮಾಡಲಾಗಿದೆ ಎಂದರು.

ನಾವು ಕೇಳಿದ್ದು ಶುದ್ದ ಕುಡಿಯುವ ನೀರು ಅದರೆ ಅವರು ಅಂತರ್ಜಲ ಅಭಿವೃದ್ದಿ ನೆಪದಲ್ಲಿ ಕಲುಷಿತ ನೀರನ್ನು ಕುಡಿಯುವ ನೀರಿನ ಕೆರೆಗಳಿಗೆ ಹರಿಸುವ ಮೂಲಕ ಕಲುಷಿತ ಮಾಡಿದ್ದಾರೆ ಇದರಿಂದ ಜನ ಜಾನುವಾರುಗಳು ಅಲ್ಲದೆ ಕೃಷಿಯು ಸಹ ವಿಷಪೂರಿತವಾಗಿದೆ, ಕೆ.ಸಿ.ವ್ಯಾಲಿ ಮತ್ತು ಹೆಚ್.ಎನ್.ವ್ಯಾಲಿ ನೀರನ್ನು ಮೂರು ಹಂತದಲ್ಲಿ ಶುದ್ದೀಕರಣ ಮಾಡಿ ಹರಿಸುವುದಾಗಿ ಭರವಸೆ ನೀಡಿ ಈಗ ಎರಡು ಹಂತದಲ್ಲಿ ಅರೆ ಸಂಸ್ಕರಿಸಿ ಕೊಳಚೆ ನೀರನ್ನು ಅಮಾನವೀಯವಾಗಿ ಹರಿಸಲಾಗುತ್ತಿದೆ ಎಂದು ಆಕ್ರೋಷ ವ್ಯಕ್ತಪಡಿಸಿದರು.

ಇದರ ವಿರುದ್ದ ನೀರಾವರಿ ಹೋರಾಟ ಸಮಿತಿ ಪ್ರತಿಭಟಿಸಿದ ಹಿನ್ನಲೆಯಲ್ಲಿ ೨೦೨೩ರ ಬಜೆಟ್‌ನಲ್ಲಿ ಯಾವೂದೇ ಅನುದಾನವನ್ನು ಮೀಸಲಿರಸದೆ ಮೂರನೇ ಹಂತದ ಸಂಸ್ಕರಣೆಯ ಭರವಸೆ ನೀಡಿರುವುದ ಮುಗ್ದ ಜನರನ್ನು ವಂಚಿಸುವುದಾಗಿದೆ ಎಂದು ತೀವ್ರವಾಗಿ ಖಂಡಿಸಿದರು.

ಕಳೆದ ೧೯೯೭ರಲ್ಲಿ ಆಗಿನ ಜಿಲ್ಲಾಧಿಕಾರಿ ಸಂಜಯ್ ದಾಸ್ ಗುಪ್ತ ಅವರು ಅವಿಭಜಿತ ಜಿಲ್ಲೆಯ ೫೪೦೦ ಕೆರೆಗಳ ಅಭಿವೃದ್ದಿಗೆ ಇಸ್ತ್ರೋ ಸಂಸ್ಥೆಯಿಂದ ಮಾಡಿಸಿದ್ದ ಡಾ.ಪರಮಶಿವಯ್ಯ ಯೋಜನೆಯ ಅಧ್ಯಯನ ವರದಿಯನ್ನು ಕಸದ ಬುಟ್ಟಿಗೆ ಎಸೆದು ಅಂತರ್ಜಲ ಅಭಿವೃದ್ದಿಯ ಹೆಸರಿನಲ್ಲಿ ಕೋಟಿ ಕೋಟಿ ಲೂಟಿ ಮಾಡಲಾಗಿದೆ ಎಂದರು.

ಭಾರತೀಯ ವಿಜ್ಞಾನ ಸಂಸ್ಥೆ ನಡೆಸಿದ ಸಂಶೋಧನೆಯಲ್ಲಿ ನಮ್ಮ ಜಿಲ್ಲೆಯ ಕುಡಿಯುವ ನೀರಿನ ಕೊಳವೆ ಬಾವಿಗಳ ನೀರಿನಲ್ಲಿ ಅಪಾಯಕಾರಿ ವಿಕಿರಣ ಪೂರಿತ ಯುರೇನಿಯಂ ಧಾತು ಪತ್ತೆಯಾಗಿರುವುದನ್ನು ಕಂಡು ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರಸಿಂಗ್ ಶೇಖಾವತ್ ಇತ್ತೀಚೆಗೆ ಭೇಟಿ ನೀಡಿದಾಗ ಕಳವಳ ವ್ಯಕ್ತ ಪಡೆಸಿದ್ದಾರೆ. ಅದರೆ ಸರ್ಕಾರಗಳು ಎಚ್ಚೆತ್ತು ಕೊಳ್ಳದ ಹಿನ್ನಲೆಯಲ್ಲಿ ಜನಸಾಮಾನ್ಯರು ಯಾವೂದೇ ಪರ್ಯಾಯ ವ್ಯವಸ್ಥೆ ಇಲ್ಲದೆ ಅನಿವಾರ್ಯದ ಪರಿಸ್ಥಿತಿಯಲ್ಲಿ ವಿಷಕಾರಿ ನೀರನ್ನು ಕುಡಿದು ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತ ಪಡೆಸಿದರು,

ಶಾಶ್ವತ ನೀರಾವರಿ ಹೋರಾಟ ಸಮಿತಿಯ ಸಂಚಾಲಕ ಹೊಳಲಿ ಪ್ರಕಾಶ್, ರಾಜೇಶ್, ವೆಂಕಟೇಶ್, ಪುಟ್ಟಣ, ಅಬ್ಬಣಿ ಶಿವಪ್ಪ, ರಾಜಣ್ಣ, ಕಲ್ವಮಂಜಲಿ ಶಿವಣ್ಣ, ನಾರಾಯಣಸ್ವಾಮಿ,ಕೃಷ್ಣ, ಮುಂತಾದವರು ಉಪಸ್ಥಿತರಿದ್ದರು.

 

ಸುದ್ದಿ ಓದಿ ಹಂಚಿ:

Related Post

ಶೇ.೯೦ ರಷ್ಟು ದೇಶದ ಸಮುದಾಯಗಳು ಮುಖ್ಯವಾಹಿನಿ ಮಾದ್ಯಮಗಳಲ್ಲಿ, ಕಾರ್ಪೋರೇಟ್ ವಿಭಾಗದಲ್ಲಿ ಮತ್ತು ಅತ್ಯುನ್ನತ ಸರ್ಕಾರಿ ಹುದ್ದೆಗಳಲ್ಲಿ ಭಾಗವಹಿಸುವಿಕೆ ಇಲ್ಲ! : ರಾಹುಲ್ ಗಾಂಧಿ
ರಾಜಕೀಯ ಪಕ್ಷಗಳು ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಅನ್ಯಾಯ ಮಾಡಿವೆ : ಸಮುದಾಯ ಮುಖಂಡರ ಆಕ್ರೋಶ,
ಸಂವಿಧಾನ ಉಳಿಸಲು ದೇಶದ ಸಮಗ್ರತೆ ಕಾಪಾಡಲು ಬಿಜೆಪಿಯನ್ನು ಸೋಲಿಸಿ: ಮಂಜುನಾಥ್ ಅಣ್ಣಯ್ಯ

Leave a Reply

Your email address will not be published. Required fields are marked *

You missed

error: Content is protected !!