• Fri. Mar 29th, 2024

PLACE YOUR AD HERE AT LOWEST PRICE

ಕೆಜಿಎಫ್:ಬೇತಮಂಗಲ ಗ್ರಾಮವನ್ನು ಗ್ರಾಪಂಯಿಂದ ಪಟ್ಟಣ ಪಂಚಾಯಿತಿ ಮಾಡಲು 2011ರಲ್ಲಿ ಜನಸಂಖ್ಯೆ ಕಡಿಮೆ ಇತ್ತು, ಪ್ರಸ್ತುತ ಜನಸಂಖ್ಯೆ ಹೆಚ್ಚಾಗಿದು ಪಟ್ಟಣ ಪಂಚಾಯಿತಿ ಮಾಡಲು ಆಗತ್ಯ ಕ್ರಮ ಕೈಗೊಳ್ಳುವುದಾಗಿ ಶಾಸಕಿ ಎಂ.ರೂಪಕಲಾ ಶಶಿಧರ್ ಹೇಳಿದರು.

ಅವರು ಬೇತಮಂಗಲದ ಹಳೆ ಬಡಾವಣೆಯ ಶ್ರೀ ವಿಜೇಂದ್ರ ಸ್ವಾಮಿ ದೇವಾಲಯದ ಅವರಣ, 1 ನೇ ಬ್ಲಾಕ್, 2ನೇ ಬ್ಲಾಕ್ ಹಾಗೂ ಹೊಸ ಬಡಾವಣೆಯಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಜನಾಶೀರ್ವಾದ ಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

2011ರಲ್ಲಿ ಬೇತಮಂಗಲ ಗ್ರಾಮವನ್ನು ಗ್ರಾಪಂಯಿಂದ ಪಟ್ಟಣ ಪಂಚಾಯಿತಿ ಮಾಡಲು ಸರ್ವೇ ನಡೆಸಿದಾಗ ಜನಸಂಖ್ಯೆಯ ಕೊರತೆಯಿಂದ ಪಟ್ಟಣ ಪಂಚಾಯಿತಿ ಮಾಡಲು ಸಾಧ್ಯವಾಗಿಲ್ಲ ಸದ್ಯ ಜನಸಂಖ್ಯೆಯೂ ಹೆಚ್ಚಾಗಿರುವುದರಿಂದ ಅಗತ್ಯ ಕ್ರಮಕೈಗೊಂಡಿರುವುದಾಗಿ ತಿಳಿಸಿದರು.

ಹಳೆ ಬಡಾವಣೆಯ ಅನೇಕ ರೈತರು ಪಾಲಾರ್ ನದಿಯ ಕಟ್ಟೆಯ ಕೆಳಗಿನ ತೋಟಗಳಿಗೆ ತೆರಳಲು ಪಾಲಾರ್ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಬೇಕೆಂದು ಮನವಿ ಮಾಡಿದಾಗ ತಕ್ಷಣ ಶಾಸಕಿ ಸ್ವಂದಿಸಿ ಚುನಾವಣೆ ಮುಗಿದ ನಂತರ 2 ಕೋಟಿ ವೆಚ್ಚದಲ್ಲಿ ಉತ್ತಮ ಗುಣಮಟ್ಟದಿಂದ ಸುಸಜ್ಜಿತವಾದ ಸೇತುವೆಯನ್ನು ನಿರ್ಮಿಸುವುದಾಗಿ ಭರವಸೆ ನೀಡಿದರು.

ಯುಗಾಧಿ ಹಬ್ಬವನ್ನು ತಾಲ್ಲೂಕಿನ ಪ್ರತಿಯೊಂದು ಕುಟುಂಬವು ಆಚರಣೆ ಮಾಡಬೇಕೆಂಬ ಹಿತದೃಷ್ಠಿಯಿಂದ ಸುಮಾರು 50-60 ಸಾವಿತ ದಿನಸಿ ಕಿಟ್ ಗಳನ್ನು ತಯಾರಿಸಲಾಗುತ್ತಿತ್ತು, ಅದರೆ ವಿರೋಧಿ ಪಕ್ಷದವರು ಕುತಂತ್ರದಿಂದ ದಿನಸಿ ಕಿಟ್ ಗಳನ್ನು ಪೊಲೀಸ್ ಇಲಾಖೆ ವಶಕ್ಕೆ ಪಡೆಯಲಾಗಿದೆ, ಅದರೂ ಸಹ ಬಡ ಕುಟುಂಬಗಳಿಗೆ ಸೇರಬೇಕಿರುವ ಕಿಟ್ ಗಳನ್ನು ಸೇರಿಸಿಯೇ ತಿರುತ್ತೇನೆಂದರು.

ಬೇತಮಂಗಲ ಗ್ರಾಮದ ಅಭಿವೃದ್ಧಿಗೆ ವಿವಿಧ ಇಲಾಖೆಗಳ ಅನುದಾನದಲ್ಲಿ ಸಿಸಿ ರಸ್ತೆ, ಐಮಾಸ್ಟ್ ದೀಪಗಳು, ಡಾಂಬರು ರಸ್ತೆ, ಬೇತಮಂಗಲ ಪಾಲಾರ್ ಕೆರೆಯಲ್ಲಿ 50 ಲಕ್ಷ ವೆಚ್ಚದಲ್ಲಿ ಜಾಲಿ ಗಿಡಗಳು ತೆರುವು, ಹಳೆ ಮದ್ರಾಸ್ ರಸ್ತೆ ಅಭಿವೃದ್ಧಿ ಸೇರಿದಂತೆ ಸಾಕಷ್ಟು ಶ್ರಮ ವಹಿಸಿದ್ದೇನೆಂದರು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಅ.ಮು.ಲಕ್ಷ್ಮೀನಾರಾಯಣ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಕೃಷ್ಣರೆಡ್ಡಿ, ಮುಖಂಡರಾದ ಪದ್ಮನಾಭರೆಡ್ಡಿ, ಗ್ರಾಪಂ ಮಾಜಿ ಅಧ್ಯಕ್ಷರಾದ ದುರ್ಗಾಪ್ರಸಾದ್, ಕಾರಿ ಪ್ರಸನ್ನ, ಗ್ರಾಪಂ ಉಪಾಧ್ಯಕ್ಷ ನಂದೀಶ್, ಗ್ರಾಪಂ ಸದಸ್ಯರಾದ ಸುರೇಂದ್ರ ಗೌಡ, ಸುಕನ್ಯಮ್ಮ, ವಿನು ಕಾರ್ತಿಕ್, ಏಜಾಜ್ ಪಾಷ, ಅರ್ಭಿನ್ ತಾಜ್, ಸ್ವಪ್ನ ಶ್ರೀರಾಮ್, ರೇಣುಕಾ ಸೋಮಣ್ಣ, ಸಂಧ್ಯ, ಕುಸುಮ, ಡೈರಿ ಮಂಜುನಾಥ್, ಅಯ್ಯಪಲ್ಲಿ ಮಂಜುನಾಥ್, ಪಾಪಣ್ಣ, ಓಬಿಸಿ ಮುನಿಸ್ವಾಮಿ, ಚಿದಂಬರಂ ಮೊದಲಾದವರಿದ್ದರು.

Leave a Reply

Your email address will not be published. Required fields are marked *

You missed

error: Content is protected !!