• Sat. Apr 20th, 2024

ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿರುವ 2,37,000 ಮತಗಳ ಪೈಕಿ ಶೇಕಡಾ 60ರಷ್ಟು ಮತಗಳು ಸಿದ್ದರಾಮಯ್ಯ ಪರವಾಗಿ ಚಲಾವಣೆ ಆಗಲಿವೆ-ಎಂಎಲ್ಸಿ ಅನಿಲ್ ಕುಮಾರ್

ByNAMMA SUDDI

Mar 14, 2023

PLACE YOUR AD HERE AT LOWEST PRICE

ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರು ಖಂಡಿತ ಸ್ಪರ್ಧೆ ಮಾಡುತ್ತಾರೆ. ಸಿದ್ದರಾಮಯ್ಯ ಪರವಾಗಿ ಬೂತ್ ಮಟ್ಟದ ಸಭೆ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಬೂತ್ ಮಟ್ಟದ ಸಮಿತಿ ರಚನೆ ನಡೆಯುತ್ತಿದೆ ಎಂದು ಎಂಎಲ್ಸಿ ಅನಿಲ್ ಕುಮಾರ್ ತಿಳಿಸಿದ್ದಾರೆ.

ಅವರು ಕೋಲಾರ ನಗರದ ಕ್ಲಾಕ್ ಟವರ್ ನಲ್ಲಿ ವಾರ್ಡ್ ನಂ.23 ಕೆ.ಜಿ.ಮೊಹಲ್ಲಾದಲ್ಲಿ ಕಾಂಗ್ರೆಸ್ ಪಕ್ಷದ ವಾರ್ಡುವಾರು ಸಭೆಯಲ್ಲಿ ಮಾತನಾಡಿ, ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿರುವ 2,37,000 ಮತಗಳ ಪೈಕಿ ಶೇಕಡಾ 60ರಷ್ಟು ಮತಗಳು ಸಿದ್ದರಾಮಯ್ಯ ಪರವಾಗಿ ಚಲಾವಣೆ ಆಗಲಿವೆ. ಅವರು ಬರೋಲ್ಲ ಅಂತ ವಿರೋಧಿಗಳು ಅಪಪ್ರಚಾರ ಮಾಡುತ್ತಿದ್ದಾರೆ, ಸಿದ್ದರಾಮಯ್ಯ ರವರಿಗೆ ಕೋಲಾರ ಸೇಫ್ ಆಗಿದ್ದು, ಅಪಪ್ರಚಾರ ಮಾಡುತ್ತಿರುವ ಜೆಡಿಎಸ್ ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು ಎಂದು ಟೀಕಿಸಿದರು.

ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಅವರು ಸ್ಪರ್ಧೆ ಮಾಡೋಲ್ಲ ಎಂದು ವಿರೋಧ ಪಕ್ಷಗಳ ಚಿತಾವಣೆ ನಡೆಯುತ್ತಿದೆ. ಏಕೆಂದರೆ ಸಿದ್ದರಾಮಯ್ಯ ಸ್ಪರ್ಧೆ ಮಾಡಿದರೆ ಠೇವಣಿ ಬರೋಲ್ಲ ಎಂದು ಆತಂಕ ಅವರಿಗಿದೆ. ಸಿದ್ದರಾಮಯ್ಯ ಬಾರದೇ ಇದ್ದರೆ ನಮಗೊಂದು ಅವಕಾಶ ಸಿಗುತ್ತದೆ ಎಂದು ಆಶಾಭಾವನೆಯಿಂದ ಕೆಲವರು ಪ್ರಚಾರ ಮತ್ತು ಸೇವೆ ಮಾಡುತ್ತಾ ಇದ್ದಾರೆ. ಇವೆಲ್ಲದಕ್ಕೂ ಇತಿಶ್ರೀ ಹಾಡಲು ಇದೇ ತಿಂಗಳ 20-21ರಂದು ಸಿದ್ದರಾಮಯ್ಯ ಕೋಲಾರ ವಾಸ್ತವ್ಯ ಮಾಡುವರು. ಅಂದು ಏಳು ಗ್ರಾಮ ಪಂಚಾಯತ್ ಭೇಟಿ ಕಾರ್ಯಕ್ರಮ, ಮಾಧ್ಯಮಗಳೊಂದಿಗೆ ಸಂವಾದ ಇದ್ಜು,ಷಯಾರು ಏನೇ ಅಪಪ್ರಚಾರ ಮಾಡಿದರು ಸಿದ್ದರಾಮಯ್ಯ ಸ್ಪರ್ಧೆ ಖಚಿತ ಎಂದು ತಿಳಿಸಿದರು

ಕಾರ್ಯಕರ್ತರಲ್ಲಿ ಮನವಿ ಮಾಡಿದ ಅವರು ದಯವಿಟ್ಟು ಗೊಂದಲ ಮಾಡಬೇಡಿ…. ಪ್ರಚಾರ ಮಾಡಿ. ಸಿದ್ದರಾಮಯ್ಯ ಕೋಲಾರಕ್ಕೆ ಬಂದೇ ಬರುತ್ತಾರೆ, ಗೆಲ್ಲುತ್ತಾರೆ, ಅವರೇ ಈ ನಾಡಿನ ದೊರೆ. ಮುಖ್ಯಮಂತ್ರಿ ಆಗಿದ್ದಾಗ ಬಹಳಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ಕೆಸಿ ವ್ಯಾಲಿ, ಡಿಸಿಸಿ ಬ್ಯಾಂಕ್ ಮೂಲಕ ಸಾಲ, ಅಲ್ಪಸಂಖ್ಯಾತರ ಸಮುದಾಯಕ್ಕೆ ಶಾದಿಭಾಗ್ಯ, ಸ್ಕಾಲರ್ಶಿಪ್, ಅಲ್ಪಸಂಖ್ಯಾತರು ನಮ್ಮವರು ಎಂದು ಸಿದ್ದರಾಮಯ್ಯ ವಿರೋಧಿಗಳ ಬಾಯಲ್ಲಿ ಸಿದ್ರಾಮುಲ್ಲಾಖಾನ್ ಆಗಿದ್ದು ಕೂಡ ನಿಮಗಾಗಿ ಎಂದು ಸಮರ್ಥನೆ ಮಾಡಿಕೊಂಡರು.

ಸಿದ್ದರಾಮಯ್ಯ ನಾಯಕತ್ವ ಮೆಚ್ಚಿ ನೂರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದು, ಗ್ರಾಮಾಂತರ ಪ್ರದೇಶಗಳಲ್ಲಿ ಆತ್ಮೀಯವಾಗಿ ಆಹ್ವಾನಿಸುತ್ತಿದ್ಜಾರೆ. ಇದೇ ತಿಂಗಳ 20-21ರಂದು ಸಿದ್ದರಾಮಯ್ಯ ಬಂದು ಹೋದ ಮೇಲೆ ಚಿತ್ರಣ ಬದಲಾವಣೆ ಆಗಲಿದೆ ಎಂದು ಅವರು ಹೇಳಿದರು.

ಎಂಎಲ್ಸಿ ನಸೀರ್ ಅಹ್ಮದ್ ಮಾತನಾಡಿ, ಕಾಂಗ್ರೆಸ್ ಪಕ್ಷದಿಂದ ಮಾತ್ರ ರಾಜ್ಯದ ಉದ್ದಾರ ಸಾಧ್ಯ. ಈಗ ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಬೆಲೆ ಏರಿಕೆ ಮೂಲಕ ರಾಜ್ಯದ ಜನರ ಬದುಕನ್ನು ತತ್ತರಗೊಳಿಸುತ್ತಿದೆ. ಇವೆಲ್ಲ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಮೂರು ಗ್ಯಾರಂಟಿ ಯೋಜನೆಗಳನ್ನು ತಂದಿದ್ದು, ಕುಟುಂಬದ ಪ್ರತಿ ಮಹಿಳೆಗೂ ತಿಂಗಳಿಗೆ ಎರಡು ಸಾವಿರ, ಪ್ರತಿ ಮನೆಗೆ ಇನ್ನೂರು ಯೂನಿಟ್ ವಿದ್ಯುತ್, ಪ್ರತಿ ವ್ಯಕ್ತಿಗೆ ಹತ್ತು ಕೆಜಿ ಅಕ್ಕಿ ಇವೆಲ್ಲವೂ ಕಾಂಗ್ರೆಸ್ ಪಕ್ಷದ ಮಹತ್ವಾಕಾಂಕ್ಷಿ ಯೋಜನೆಗಳಾಗಿದ್ಜು, ಇವೆಲ್ಲ ಜಾರಿಗೆ ಬರಬೇಕು ಎಂದರೆ ಕಾಂಗ್ರೆಸ್ ಪಕ್ಷಕ್ಕೆ ನೀವು ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.

ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿ ಮಾಡಬೇಕು ಎಂದು ನನಗೆ ಬಹಳ ಆಸೆ ಇದ್ದು, ಕೋಲಾರ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ಸಿದ್ದರಾಮಯ್ಯ ಘೋಷಣೆ ಮಾಡಲಿದ್ದಾರೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ನಂದಿನಿ ಪ್ರವೀಣ್ ಮಾಜಿ ನಗರಸಭಾ ಸದಸ್ಯ ಸೋಮಶೇಖರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ ಬಾಬು, ನಗರಸಭೆ ಉಪಾಧ್ಯಕ್ಷ ಜುಗ್ನು ಅಸ್ಲಾಂ, ಅಬ್ದುಲ್ ಖಯ್ಯೂಂ, ಸೀಪೂರ್ ಅಕ್ರಂ, ಚಂಜಿಮಲೆ ರಮೇಶ್, ನಗರಸಭಾ ಸದಸ್ಯ ಮುರಳೀಗೌಡ ಕಾಲಾ ಪ್ರಕಾಶ್ , ನಯಾಜ್ ಪಾಷಾ ಮಾಜಿ ನಗರಸಭಾ ಅಧ್ಯಕ್ಷ ನಸೀರ್ ಅಹ್ಮದ್ , ಚಂದ್ರಮೌಳಿ,ಷರಮೇಶ್ ಸಾದಿಕ್ , ತ್ಯಾಗರಾಜ ನವೀದ್ ಪಾಷಾ (ನಯ್ಯೂ) ಕುರಿಗಳ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.

Related Post

2024ರ ಲೋಕಸಭಾ ಚುನಾವಣೆ ಸಂವಿಧಾನ ಪರ ಮತ್ತು ಸಂವಿಧಾನ ವಿರೋಧಿ ಧೋರಣೆ ಹಾಗೂ ಮನಸ್ಥಿತಿಗಳ ನಡುವಿನ ಯುದ್ಧವಾಗಿದೆ – ಎಂ.ಎಲ್.ಸಿ. ಸುಧಾಮದಾಸ್
ಶೇ.೯೦ ರಷ್ಟು ದೇಶದ ಸಮುದಾಯಗಳು ಮುಖ್ಯವಾಹಿನಿ ಮಾದ್ಯಮಗಳಲ್ಲಿ, ಕಾರ್ಪೋರೇಟ್ ವಿಭಾಗದಲ್ಲಿ ಮತ್ತು ಅತ್ಯುನ್ನತ ಸರ್ಕಾರಿ ಹುದ್ದೆಗಳಲ್ಲಿ ಭಾಗವಹಿಸುವಿಕೆ ಇಲ್ಲ! : ರಾಹುಲ್ ಗಾಂಧಿ
ರಾಜಕೀಯ ಪಕ್ಷಗಳು ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಅನ್ಯಾಯ ಮಾಡಿವೆ : ಸಮುದಾಯ ಮುಖಂಡರ ಆಕ್ರೋಶ,

Leave a Reply

Your email address will not be published. Required fields are marked *

You missed

error: Content is protected !!