ಬಂಗಾರಪೇಟೆ:ಪಟ್ಟಣದಲ್ಲಿ ವಿಧಾನಸಭಾ ಚುನಾವಣೆ ಹಿನ್ನೆಲೆ ಮತದಾರರಿಗೆ ಧೈರ್ಯ ತುಂಬಲು ಬಂಗಾರಪೇಟೆ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಸಂಜೀವ ರಾಯಪ್ಪ ನೇತೃತ್ವದಲ್ಲಿ ಮಿಲಿಟರಿ ಪಡೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಥಸಂಚಲನ ನಡೆಸಿತು.
ಕೆಲವೇ ದಿನಗಳಲ್ಲಿ ಚುನಾವಣೆ ದಿನಾಂಕ ಪ್ರಕಟವಾಗಲಿದ್ದು ಹೀಗಾಗಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸುಲಭವಾಗಿ ಮತದಾನ ಮಾಡಲು ಸುಸಜ್ಜಿತ ವಾತಾವರಣ ನಿರ್ಮಿಸಲು ೀ ಪಥಸಂಚಲನ ನಡೆಸಲಾಯಿತು.
ಪಟ್ಟಣ್ಯಾದ್ಯಂತ ಸುಮಾರು ನೂರಕ್ಕೂ ಹೆಚ್ಚು ಮಂದಿ ಪ್ಯಾರಾ ಮಿಲಿಟರಿ ಪಡೆ ಸಿಬ್ಬಂದಿಯಿಂದ ಪಟ್ಟಣದ ಕೆಂಪೇಗೌಡ ವೃತದಿಂದ ವಿವೇಕಾನಂದ ನಗರ, ವಿಜಯನಗರ, ಕಾರಹಳ್ಳಿ ವೃತ್ತ, ಬಾಲಮುರುಗನ್ ದೇವಸ್ಥಾನ ರಸ್ತೆ, ನಂದಿ ಮೆಡಿಕಲ್, ಬಜಾರ್ ರಸ್ತೆ, ಬಸ್ ನಿಲ್ದಾಣ, ಸಿ ರಹೀಂ ಕಾಂಪೌಂಡ್, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಮಸೀದಿ ರೋಡ್, ಇನ್ನೂ ಅನೇಕ ಕಡೆ ಪಥಸಂಚಲನ ನಡೆಸಿ ಮತದಾನ ಜಾಗೃತಿಯನ್ನು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಡಿವೈಎಸ್ಪಿ ರಮೇಶ್ ಕುಮಾರ್, ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿ ವರ್ಗದವರು ಇದ್ದರು.