• Sat. Apr 20th, 2024

PLACE YOUR AD HERE AT LOWEST PRICE

ಬಿಜೆಪಿ ಪಕ್ಷ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿದರೂ ಜಾತಿ ನೋಡಿ ಮಾಡೋದಿಲ್ಲಾ. ಯಾವುದೇ ಜಾತಿ ಧರ್ಮಗಳ ವಿರೋಧಿಯೂ ಅಲ್ಲ, ನಿಜವಾದ ಜಾತ್ಯಾತೀತವಾಗಿ ಕೆಲಸ ಮಾಡ್ತಿರೋ ಪಕ್ಷವೆಂದರೆ ಅದು ಬಿಜೆಪಿ ಪಕ್ಷ ಮಾತ್ರ ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.

ತಾಲ್ಲೂಕಿನ ವೇಮಗಲ್ ಹೋಬಳಿ ಕ್ಯಾಲನೂರು ಗ್ರಾಮ ಪಂಚಾಯಿತಿಯಲ್ಲಿ ಆಯೋಜಿಸಲಾಗಿದ್ದ ವಿಜಯ ಸಂಕಲ್ಪಯಾತ್ರೆಯ ಬೃಹತ್ ಸ್ವಾಭಿಮಾನಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಸಿದ್ದರಾಮಯ್ಯನವರು ನಾನು ಅಹಿಂದ ಮುಖಂಡ ಎಂದು ಬಿಂಬಿಸಿ ಕೊಳ್ಳುತ್ತಿದ್ದಾರೆ.  ಆದರೆ, ಯಾವುದೇ ಸಮುದಾಯಗಳಿಗೆ ಅನ್ಯಾಯವಾಗದಂತೆ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುತ್ತಿರುವ ನಿಜವಾದ ಅಹಿಂದ ನಾಯಕರೆಂದರೆ ಅದು ಸನ್ಮಾನ್ಯ ನರೇಂದ್ರ ಮೋದಿ ಆಗಿದ್ದಾರೆ ಎಂದರು.

ಕೋಲಾರದಲ್ಲಿ ಕೆಲವು ಸ್ವಯಂ ಘೋಷಿತ ಮುಖಂಡರು ಇಲ್ಲಿ ಕೋಲಾರದಲ್ಲಿ ಬಟ್ಟೆ ಬಿಚ್ಚಿದ್ದು ಸಾಕಾಗಿ, ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಮನೆ ಮುಂದೆ ಬಟ್ಟೆ ಬಿಚ್ಚಲು ಹೋಗಿದ್ದಾರೆ. ಸಿದ್ದರಾಮಯ್ಯನವರಿಗೆ ರಾಜ್ಯದ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸಲು ಧೈರ್ಯವಿಲ್ಲ, ಕೋಲಾರದಲ್ಲಿ ನಿಂತರೆ ಸೋಲು ಖಚಿತ ಎಂದು ಅರಿತ ಸಿದ್ದರಾಮಯ್ಯ ವಾಪಸ್ಸು ಹೋಗಿದ್ದಾರೆ. ಈ ಸ್ವಯಂ ಘೋಷಿತ ಮುಖಂಡರು ದಲಿತರೆಲ್ಲಾ ಕಾಂಗ್ರೆಸ್ ಜೊತೆ ಇರುವುದಾಗಿ ಹೇಳ್ತಾ ಇದ್ದಾರೆ. ವಾಸ್ತವದಲ್ಲಿ ದಲಿತರು ಕಾಂಗ್ರೆಸ್‌ಗಿoತ ಬಿಜೆಪಿ ಪಕ್ಷದಲ್ಲೇ ಹೆಚ್ಚಿಗಿದ್ದಾರೆ ಎಂದರು.

ಮಾಜಿ ಸಚಿವ ಆರ್.ವರ್ತೂರ್ ಪ್ರಕಾಶ್ ಮಾತನಾಡಿ, ನರೇಂದ್ರಮೋದಿಯವರ ಅಭಿವೃದ್ದಿ ಕೆಲಸಗಳನ್ನು ಮೆಚ್ಚಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ. ನಾನು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದ ಮೇಲೆ ಕೋಲಾರ ವಿಧಾನಸಭಾ ಕ್ಷೇತ್ರದ ಅಭಿವೃದ್ದಿಗೆ ೨೫ ಕೋಟಿ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ತಂದಿದ್ದೇನೆ.

೧೫ ಕೋಟಿ ಗ್ರಾಮೀಣ ರಸ್ತೆ ಅಭಿವೃದ್ದಿಗೆ ಹಾಗೂ ೧೦ ಕೋಟಿ ನಗರ ಪ್ರದೇಶದ ಅಭಿವೃದ್ದಿಗೆ ಖರ್ಚು ಮಾಡಲಾಗುವುದು ಎಂದರು.
ಕೋಲಾರದಲ್ಲಿ ಕೆಲವು ಸ್ವಯಂ ಘೋಷಿತ ಮುಖಂಡರಿಗೆ ಸಿದ್ದರಾಮಯ್ಯನವರು ಯೂಟರ್ನ್ ತೆಗೆದುಕೊಂಡಿರುವುದರಿoದ ಉದ್ಯೋಗ ಇಲ್ಲವಾಗಿದೆ. ವರ್ತೂರ್ ಪ್ರಕಾಶ್ ಗೆದ್ದರೆ ನಮಗೇನು ತೊಂದರೆ ಕೊಡ್ತಾರೋ ಅಂತ ಭಯಬೀತರಾಗಿದ್ದಾರೆ. ಆದರೆ, ನಾನು ಯಾರಿಗೂ ತೊಂದರೆ ಕೊಡುವುದಿಲ್ಲ, ಯಾರೂ ಹೆದರುವುದೂ ಬೇಡ, ನಾನು ನಿಮ್ಮ ಸೇವಕ ಒಳ್ಳೆಯದನ್ನೇ ಮಾಡುವೆ ಎಂದರು.

ನಾನು ೧೦ ವರ್ಷಗಳ ಕಾಲ ಶಾಸಕನಾಗಿದ್ದ ವೇಳೆ ದಲಿತ ಮುಖಂಡರನ್ನು ತಾಲ್ಲೂಕು ಪಂಚಾಯ್ತಿ ಸದಸ್ಯರು, ಅಧ್ಯಕ್ಷರು, ಜಿಲ್ಲಾ ಪಂಚಾಯ್ತಿ ಸದಸ್ಯರನ್ನಾಗಿ ಮಾಡಿದ್ದೇನೆ. ನೂರಾರು ಗ್ರಾಮ ಪಂಚಾಯ್ತಿ ಸದಸ್ಯರನ್ನು ಮಾಡಿದ್ದೇನೆ. ನಾನು ದಲಿತರಿಗಾಗಿ ಪ್ರಾಣ ಬೇಕಾದರೂ ಕೊಡ್ತೀನಿ ಎಂದ ಅವರು, ದಲಿತರನ್ನು ಸಿದ್ದರಾಮಯ್ಯನವರಿಗೆ ಅಡವಿಡಲು ಹೊರಟಿರುವ ಸ್ವಾರ್ಥ ದಲಿತ ನಾಯಕರನ್ನು ನಂಬಬೇಡಿ ಎಂದರು.

ಇದೇ ವೇಳೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಹಿರಿಯ ಮುಖಂಡ ಬೆಗ್ಲಿ ಸೂರ್ಯಪ್ರಕಾಶ್, ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಸೂಲೂರು ಆಂಜಿನಪ್ಪ, ಜಿಲ್ಲಾ ಪಂಚಾಯ್ತಿ ಸದಸ್ಯ ಅರುಣ್ ಪ್ರಸಾದ್ ಮಾತನಾಡಿದರು.

ಈ ಸಂದರ್ಭಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯೆ ರೂಪಶ್ರೀ, ಬಂಕ್ ಮಂಜು, ತಾಲ್ಲೂಕು ಅಧ್ಯಕ್ಷ ಸಿ.ಡಿ.ರಾಮಚಂದ್ರೇಗೌಡ, ಜಿಲ್ಲಾ ಅಲ್ಪಸಂಖ್ಯಾತ ಮುಖಂಡರದ ಬೆಗ್ಲಿಸಿರಾಜ್, ಯುವ ಮೋರ್ಚಾ ನವೀನ್, ಕಡಗಟ್ಟೂರು ದೇವರಾಜ್, ಕ್ಯಾಲನುರು ಪಿ.ವೆಂಕಟೇಶ್, ದಿಲೀಪ್, ಗ್ರಾಮ ಪಂಚಾಯ್ತಿ ಅಧ್ಯಕ್ಷ ಜಂಶೀರ್ ಪಾಷಾ, ಬಸವಗೌಡ, ಡೈರಿಬಾಬು, ಕ್ಯಾಲನೂರು ಪ್ರಕಾಶ್, ಶಂಕರ್, ಗಾಂಧಿನಗರ ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.

Related Post

2024ರ ಲೋಕಸಭಾ ಚುನಾವಣೆ ಸಂವಿಧಾನ ಪರ ಮತ್ತು ಸಂವಿಧಾನ ವಿರೋಧಿ ಧೋರಣೆ ಹಾಗೂ ಮನಸ್ಥಿತಿಗಳ ನಡುವಿನ ಯುದ್ಧವಾಗಿದೆ – ಎಂ.ಎಲ್.ಸಿ. ಸುಧಾಮದಾಸ್
ಶೇ.೯೦ ರಷ್ಟು ದೇಶದ ಸಮುದಾಯಗಳು ಮುಖ್ಯವಾಹಿನಿ ಮಾದ್ಯಮಗಳಲ್ಲಿ, ಕಾರ್ಪೋರೇಟ್ ವಿಭಾಗದಲ್ಲಿ ಮತ್ತು ಅತ್ಯುನ್ನತ ಸರ್ಕಾರಿ ಹುದ್ದೆಗಳಲ್ಲಿ ಭಾಗವಹಿಸುವಿಕೆ ಇಲ್ಲ! : ರಾಹುಲ್ ಗಾಂಧಿ
ರಾಜಕೀಯ ಪಕ್ಷಗಳು ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಅನ್ಯಾಯ ಮಾಡಿವೆ : ಸಮುದಾಯ ಮುಖಂಡರ ಆಕ್ರೋಶ,

Leave a Reply

Your email address will not be published. Required fields are marked *

You missed

error: Content is protected !!