ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಖಾವು ದಿನೇ ದಿನೇ ರೋಚಕತೆಯನ್ನು ಪಡೆಯುತ್ತಿದೆ. ಕಾಂಗ್ರೆಸ್ ಜೆಡಿಎಸ್ ಬಿಜೆಪಿ ಪಕ್ಷಗಳು ತಮ್ಮದೇ ಪಡೆಯನ್ನು ಕಟ್ಟಿಕೊಂಡು ಜಾತಿವಾರು ಸಂಘಟನೆಗೆ ಇಳಿದಿವೆ. ಇದರಿಂದ ಯಾವುದೇ ಸಮುದಾಯ ಒಂದು ನಿರ್ಧಿಷ್ಟ ಪಕ್ಷದೊಂದಿಗೆ ಇಲ್ಲ ಎನ್ನುವ ಸಂದೇಶ ಸ್ಪಷ್ಟವಾಗಿ ಗೋಚರಿಸುತ್ತಿದೆ. ಈ ಮದ್ಯೆ ಪ್ರಜ್ಞಾವಂತ ದಲಿತ ಸಂಘಟನೆಗಳ ಒಕ್ಕೂಟ ಜೆಡಿಎಸ್ ಪಕ್ಷದ ಅಭ್ಯರ್ಥಿ ಪರವಾಗಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ.
ನಗರದ ನಚಿಕೇತ ನಿಲಯದಲ್ಲಿ ಸಭೆ ಸೇರಿದ ಪ್ರಜ್ಞಾವಂತ ದಲಿತ ಸಂಘಟನೆಗಳ ಒಕ್ಕೂಟದ ನೂರಾರು ಮುಖಂಡರು ಸಭೆ ಸೇರಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಬೆಂಬಲಿಸು ನಿಟ್ಟಿನಲ್ಲಿ ನಿರ್ಣಯ ತೆಗೆದುಕೊಂಡಿದ್ದಾರಲ್ಲದೆ, ಮಾರ್ಚ್ ೨೫ರ, ಶನಿವಾರದಂದು ಬೃಹತ್ ದಲಿತ ಸಮಾವೇಶಕ್ಕೆ ಪೂರ್ವಬಾವಿ ಸಭೆಯನ್ನು ನಡೆಸಿದರು.
ಇಲ್ಲಿಯ ತನಕ ಆಳಿದ ರಾಷ್ಟ್ರೀಯ ಪಕ್ಷಗಳು ಬಡವರಿಗೆ ಅಕ್ಕಿಯ ಆಸೆಯನ್ನು ತೋರಿಸಿ, ನಮ್ಮ ಭೂಮಿ, ನೀರು, ಶಿಕ್ಷಣ ಕಸಿದುಕೊಂಡು ನಮ್ಮನ್ನು ಗುಲಾಮರನ್ನಾಗಿ ಮಾಡಿದ್ದಾರೆ. ಇನ್ನೂ ಸ್ವತಃ ಅಂಬೇಡ್ಕರ್ ರವರೇ ಹೇಳಿರುವಂತೆ ಕಾಂಗ್ರೆಸ್ ಉರಿಯುವ ಮನೆಯಾಗಿದೆ. ಅಷ್ಟೇ ಅಲ್ಲದೆ, ಅಲ್ಲಿ ಸಲ್ಲದ ಸಿದ್ದರಾಮಯ್ಯ ಇಲ್ಲಿ ಸಲ್ಲುವರೇ, ಎಂಬಿತ್ಯಾದಿ ಪ್ರಶ್ನೆಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು. ಈ ನಿಟ್ಟಿನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದಿಂದ ಯಾರೇ ಸ್ಪರ್ಧೆ ಮಾಡಿದರೂ ಅವರನ್ನು ಸೋಲಿಸಬೇಕೆಂದು ಅಭಿಪ್ರಾಯಕ್ಕೆ ಬಂದರು.
ಈ ಹಿನ್ನಲೆಯಲ್ಲಿ ಕಳೆದ ೬ ವರ್ಷಗಳಿಂದ ಕ್ಷೇತ್ರದಲ್ಲಿ ಸಮಾಜ ಸೇವೆಯಲ್ಲಿ ತೊಡಗಿರುವ ಸಿಎಂಆರ್ ಶ್ರೀನಾಥ್‌ರವರು ಜನರೊಂದಿಗೆ ನಿತ್ಯ ಬೆಸೆಯುವ ಸ್ಥಳೀಯ ನಾಯಕರಾಗಿ ಹೊರಹೊಮ್ಮಿದ್ದು, ಪ್ರಜ್ಞಾವಂತ ದಲಿತ ಸಂಘಟನೆಗಳ ಒಕ್ಕೂಟದಿಂದ ಮಾರ್ಚ್ ೨೫ರ ಶನಿವಾರದಂದು ಬೆಳಿಗ್ಗೆ ೧೦ ಗಂ ಟೆಗೆ ನಗರದ ಬೈರೇಗೌಡ ಲೇಔಟ್ ಮೈದಾನದಲ್ಲಿ “ಜೆಡಿಎಸ್ ನಡಿಗೆ ದಲಿತರ ಕಡೆ..ಪ್ರಜ್ಞಾವಂತರೆಡೆಗೆ” ಬೃಹತ್ ದಲಿತ ಸಮಾವೇಶ ನಡೆಸಲು ತೀರ್ಮಾನಿ, ಸಮಾವೇಶಕ್ಕೆ ಸಕಲ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಸದರಿ ಸಮಾವೇಶಕ್ಕೆ ಸುಮಾರು ೧೦ ಸಾವಿರ ಜನ ಸೇರುವ ನಿರೀಕ್ಷೆನ್ನು ಹೊಂದಲಾಗಿದೆ.
ಈ ಸಂಧರ್ಭದಲ್ಲಿ ಹಿರಿಯ ಮುಖಂಡ ಬಾಲಾಜಿ ಚೆನ್ನಯ್ಯ, ಭಾರತೀಯ ದಲಿತ ಸೇನೆ ದಲಿತ ನಾರಾಯಣಸ್ವಾಮಿ, ವಾಲ್ಮೀಕಿ ಮುಖಂಡ ಎಂ, ಬಾಲಗೋವಿಂದ, ದಲಿತ ಸಿಂಹ ಸೇನೆಯ ಹೂಹಳ್ಳಿ ಪ್ರಕಾಶ್, ಕುವೆಂಪುನಗರ ಆನಂದ್‌ಕುಮಾರ್, ಗಾಂಧಿನಗರ ಚೇತನ್‌ಬಾಬು, ಕುರುಗಲ್ ಗಿರೀಶ್, ತಾರಕ್ ಮಂಜು, ಹಾರೋಹಳ್ಳಿ ವೇಣು, ಗಂಗಮ್ಮನಪಾಳ್ಯದ ಮುರಳಿಮೋಹನ್,ಶಿವು, ಕೋಟೆ ಮಧು, ಕೋನಪ್ಪ, ಭೋವಿ ಸಮಾಜದ ರವಿ, ಕುರುಬಪೇಟೆ ಕುಮಾರ್, ವಿನೋಬ್ ನಗರ ಶ್ಯಾಮ್, ಐತರಾಸನಹಳ್ಳಿ ನರಸಿಂಹಪ್ಪ ವಲ್ಲಭಿ ಅಂಬರೀಶ್, ನರಸಾಪುರ ನಾಗರಾಜ್ ಇತರರು ಇದ್ದರು.