• Fri. Mar 29th, 2024

PLACE YOUR AD HERE AT LOWEST PRICE

ಕೆಜಿಎಫ್:ನಗರದಲ್ಲಿ ಅಪ್ರಾಪ್ತ ಮಕ್ಕಳು ಸಲ್ಯೂಷನ್ ಸೇವೆನೆಯ ಆಮಿಷಕ್ಕೆ ಒಳಗಾಗಿರುವ ಬಗ್ಗೆ ಪೊಲೀಸರಿಗೆ ವ್ಯಾಪಕ ದೂರುಗಳು ಬಂದ ಹಿನ್ನಲೆಯಲ್ಲಿ ರಾಬರ್ಟ್‍ಸನ್‍ಪೇಟೆ ಪೊಲೀಸರು ದಾಳಿ ನಡೆಸಿ ಸುಮಾರು 35ಲಕ್ಷ ರೂಗಳ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ನಗರದ ಕುವೆಂಪು ಬಸ್ ನಿಲ್ದಾಣದ ಎದುರಿಗಿನ ಸೂರ್ಯ ಅಶೋಕ ಟೈರ್ ಅಂಗಡಿಯಲ್ಲಿ ಸಲ್ಯೂಷನ್ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

50 ರೂ ಬೆಲೆ ಸಲ್ಯೂಷನ್‍ನನ್ನು 80 ರೂಗೆ ಮಾರಾಟ ಮಾಡುತ್ತಿದ್ದು, ಸದರಿ ಸಲ್ಯೂಷನ್ ಸೇವನೆಯಿಂದ ಸಮಾಜದ ಸ್ವಾಸ್ಥ್ಯ ಹಾಳಾಗಿ ಯುವಕ, ಯುವತಿಯರು ಸಲ್ಯೂಷನ್‍ಗೆ ದಾಸರಾಗಿ ವ್ಯಸನಿಗಳಾಗುತ್ತಿದ್ದಾರೆ ಎನ್ನಲಾಗಿದೆ.

ಸೂರ್ಯ ಅಶೋಕ ಟೈರ್ ಅಂಗಡಿಯಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಸುಮಾರು 10 ಲಕ್ಷ ಬೆಲೆ ಬಾಳುವ 1797 ಸಲ್ಯೂಷನ್ ಟ್ಯೂಬ್‍ಗಳು, ಸಲ್ಯೂಷನ್ ದಂಧೆಗಾಗಿ ಅಕ್ರಮವಾಗಿ ಗಿರವಿ ಇಟ್ಟುಕೊಂಡಿದ್ದ 1192 ಮೊಬೈಲ್ ಫೋನ್‍ಗಳು, 9 ದ್ವಿಚಕ್ರ ವಾಹನಗಳು ಮತ್ತು ಒಂದು ಇನ್ನೋವಾ ಕಾರು, ಲಾಪ್‍ಟಾಪ್ ಸೇರಿದಂತೆ ಒಟ್ಟಾರೆ 35 ಲಕ್ಷ ಬೆಲೆಬಾಳುವ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಅಪ್ರಾಪ್ತ ಮಕ್ಕಳು ಸಲ್ಯೂಷನ್ ಖರೀದಿಗೆ ಹಣವಿಲ್ಲದೆ ಇದ್ದಾಗ ಮೊಬೈಲ್‍ನ್ನು ಅಡವಿಟ್ಟು ಸಲ್ಯೂಷನ್ ಖರೀದಿ ಮಾಡುತ್ತಿದ್ದರು ಎನ್ನಲಾಗಿದೆ. ಯಾವುದೇ ಪರವಾನಿಗೆ ಇಲ್ಲದೆ 1192 ಮೊಬೈಲ್ ಪೋನ್‍ಗಳು ಗಿರವಿ ಇಟ್ಟಕೊಂಡಿದ್ದು, ಒಂದು ಇನ್ನೋವಾ ಕಾರು ಮತ್ತು ಇತರೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ಗಿರವಿ ಇಟ್ಟುಕೊಂಡು ಅಂಗಡಿ ಮಾಲೀಕ ಸುರೇಶ್ ಭಾಫ್ನಾ ಸಲ್ಯೂಷನ್ ಮಾರಾಟ ದಂಧೆಯಲ್ಲಿ ತೊಡಗಿಸಿಕೊಂಡಿದ್ದ ಎಂದು ಹೇಳಲಾಗಿದೆ.

ಡಿವೈಎಸ್ಪಿ ರಮೇಶ್ ಮಾರ್ಗದರ್ಶದನಲ್ಲಿ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಭಾರತಿ ಹಾಗೂ ಸಿಬ್ಬಂದಿ ದಾಳಿ ನಡೆಸಿ 35 ಲಕ್ಷ ರೂಪಾಯಿಗಳ ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಂಡು ಆರೋಪಿಯಾದ ಸುರೇಶ್  ಭಾಪ್ನಾನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಪೊಲೀಸ್ ವರಿಷ್ಟಾಧಿಕಾರಿ ಡಾ.ಧರಣಿದೇವಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You missed

error: Content is protected !!