• Thu. Sep 28th, 2023

ಮಾಲೂರು ವಿಧಾನಸಭೆಗೆ ಟಿಕೆಟ್ ಕೈ ತಪ್ಪಿದ್ದಕ್ಕೆ ಕಾರ್ಯಕರ್ತರ ಮುಂದೆ ಕಣ್ಣೀರಿಟ್ಟ ಹೂಡಿ ವಿಜಯ ಕುಮರ್ ದಂಪತಿಗಳು, ಮೋದಿ ಭಾವಚಿತ್ರ ಹರಿದು ಬಿ.ಜೆ.ಪಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಬೆಂಬಲಿಗರು – ಪಕ್ಷೇತರರಾಗಿ ಸ್ಪರ್ಧೆ ಖಚಿತ ಪಡಿಸಿದ  ಹೂಡಿ ವಿಜಯಕುಮಾರ್

PLACE YOUR AD HERE AT LOWEST PRICE

ಮಾಲೂರು ವಿಧಾನಸಭೆಗೆ ಟಿಕೆಟ್ ಕೈ ತಪ್ಪಿದ್ದಕ್ಕೆ ಕಾರ್ಯಕರ್ತರ ಮುಂದೆ ಕಣ್ಣೀರಿಟ್ಟ ಹೂಡಿ ವಿಜಯ ಕುಮರ್ ದಂಪತಿಗಳು,
             ಮೋದಿ ಭಾವಚಿತ್ರ ಹರಿದು ಬಿ.ಜೆ.ಪಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಬೆಂಬಲಿಗರು – ಪಕ್ಷೇತರರಾಗಿ ಸ್ಪರ್ಧೆ ಖಚಿತ ಪಡಿಸಿದ                           ಹೂಡಿ ವಿಜಯಕುಮಾರ್

ಮಾಲೂರು,ಏಪ್ರಿಲ್.೧೨ : ಪಕ್ಷಕ್ಕೆ ನಿಷ್ಠೆಯಿಂದ ದುಡಿದವರಿಗೆ ಬಿಜೆಪಿ ಅನ್ಯಾಯ ಮಾಡುವುದಿಲ್ಲ ಎಂದು ನಂಬಿದ ಕಾರ್ಯಕರ್ತರಿಗೆ ಸಂಸದ ಮುನಿಸ್ವಾಮಿ ಹಾಗೂ ಉಸ್ತುವಾರಿ ಸಚಿವ ಮುನಿರತ್ನ ಮಣ್ಣು ಎರಚಿ ವಲಸೆ ಬಂದವರಿಗೆ ಟಿಕೆಟ್ ಕೊಡಿಸುವ ಮೂಲಕ ಮೂಲ ಬಿಜೆಪಿಗರಿಗೆ ಅನ್ಯಾಯ ಮಾಡಿದ್ದಾರೆ ಎಂದು ಟಿಕೆಟ್ ವಂಚಿತ ಆಕಾಂಕ್ಷಿ ಹೂಡಿ ವಿಜಯಕುಮಾರ್ ಶ್ವೇತಾ ದಂಪತಿಗಳು ಕಣ್ಣೀರಿಟ್ಟಿದ್ದಾರೆ.

ಮಾಲೂರು ಪಟ್ಟಣದ ವೈಟ್ ಗಾರ್ಡ್ನ್ ನಲ್ಲಿರುವ ತಮ್ಮ ಮೋದಿ ನಿವಾಸದ ಬಳಿ ಕಾರ್ಯಕರ್ತರ ಮತ್ತು ಮುಖಂಡರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ,ನನಗೆ ಆಗಿರುವ ಅನ್ಯಾಯಕ್ಕೆ ನೋವು ತಂದಿದೆ. ಹಲವಾರು ವರ್ಷಗಳಿಂದ ಬಿ.ಜೆ.ಪಿ. ಪಕ್ಷ ಕಟ್ಟಿದ ಹಲವಾರು ನಾಯಕರು ಹಾಗೂ ಕಾರ್ಯಕರ್ತರು ಬಿ.ಜೆ.ಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಹಾಗೂ ಪಕ್ಷದ ಹಲವಾರು ಮುಖಂಡರು ಬಿ.ಜೆ.ಪಿ.ಪಕ್ಷ ನೀಡಿದ್ದ ಸ್ಥಾನಗಳಿಗೆ ಸಾಮೂಹಿಕವಾಗಿ ರಾಜೀನಾಮೆ ನೀಡಿ ಬೆಂಬಲ ನೀಡುತ್ತಿರುವುದಕ್ಕೆ ಸದಾಕಾಲವೂ ಚಿರಋಣಿಯಾಗಿರುತ್ತೇನೆ ಎಂದರು.

ಬಿ.ಜೆ.ಪಿ ಪಕ್ಷ ನನಗೆ ಅನ್ಯಾಯ ಮಾಡಿದರೂ, ನನ್ನ ನಂಬಿದ ಮುಖಂಡರ ಹಾಗೂ ಕಾರ್ಯಕರ್ತರನ್ನು ಬಿಟ್ಟು ಹೋಗಬಾರದು ಎಂಬ ಕಾರಣಕ್ಕೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ. ಮಾಲೂರು ತಾಲ್ಲೂಕಿನ ಜನತೆ ನನ್ನ ಕೈ ಹಿಡಿಯುತ್ತಾರೆಂಬ ನಂಬಿಕೆ ಇದೆ. ನಿಮ್ಮ ವಿಶ್ವಾಸಕ್ಕೆ ಧಕ್ಕೆ ಬರದಂತೆ ನಡೆದುಕೊಳ್ಳತ್ತೇನೆಂದು ಹೇಳಿದರು.

ನಮ್ಮ ನಂಬಿಕೆಗೆ ದ್ರೋಹ ಮಾಡಿದ ಬಿ.ಜೆ.ಪಿ.ಪಕ್ಷ ನಮಗೆ ಅವಶ್ಯಕತೆ ಇಲ್ಲವಾದ್ದರಿಂದ ಈಗಾಗಲೇ ನಾನು ಬಿ.ಜೆ.ಪಿ ಪಕ್ಷದ ರಾಜ್ಯ ಫಲಾನುಭವಿಗಳ ಪ್ರಕೋಷ್ಠದ ಸದಸ್ಯ ಸ್ಥಾನಕ್ಕೆ ಹಾಗೂ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ಘೋಷಿಸಿದರು.

ಬಿ.ಜೆ.ಪಿ ಪಕ್ಷದಲ್ಲಿ ಹಲವಾರು ಸ್ಥಾನಗಳಲ್ಲಿ ಇದ್ದ ಮುಖಂಡರುಗಳು ಸಾಮೂಹಿಕವಾಗಿ ರಾಜೀನಾಮೆ ಘೋಷಿಸಿ ಮಾತಾಡಿ, ಧ್ವಂದ್ವ ಸಿದ್ದಾಂತ ಹೊಂದಿರುವ ಹಾಗೂ ದುಡಿಯವರನ್ನು ಗುರುತಿಸದ ಬಿ.ಜೆ.ಪಿ ಪಕ್ಷ ನಮಗೆ ಅಗತ್ಯ ಇಲ್ಲವೆಂದು ಒಕ್ಕೊರಲಿನಿಂದ ತಿಳಿಸಿದರು. ನನ್ನ ಬೆಂಬಲಿಗರ ಒತ್ತಾಸೆಯಂತೆ ಮಾಲೂರು ವಿಧಾನ ಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ತೀರ್ಮಾನ ತೆಗೆದುಕೊಂಡಿರುವುದಾಗಿ ಸಮಾಜ ಸೇವಕ ಹೂಡಿ ವಿಜಯಕುಮಾರ್ ಘೋಷಿಸಿದರು.

ಎಸ್.ಮುನಿಸ್ವಾಮಿಯವರು ಸಂಸದರಾಗಿ ಗೆದ್ದಮೇಲೆ ಎಂಟೂ ಕ್ಷೇತ್ರದಲ್ಲಿ ಪಕ್ಷವನ್ನು ಎರಡು ಮೂರು ಗುಂಪುಗಳನ್ನಾಗಿ ವಿಭಾಗ ಮಾಡಿದ್ದಾರೆ. ಹಿರಿಯ ನಾಯಕ ಯಡಿಯೂರಪ್ಪನವರ ಮಾತಿಗೆ ಬೆಲೆ ನೀಡಿಲ್ಲ. ಮುಂದಿನ ದಿನಗಳಲ್ಲಿ ಎಂ.ಪಿ.ಮುನಿಸ್ವಾಮಿ ರವರು ಇದರ ಪ್ರತಿಫಲ ಉಣ್ಣುತ್ತಾರೆ ಎಂಬ ಆಕ್ರೋಶ ಸಭೆಯಲ್ಲಿ ವ್ಯಕ್ತವಾಯಿತು.

ಬಿ.ಜೆ.ಪಿ ಪಕ್ಷ ನುಡಿದಂತೆ ನಡೆದಿಲ್ಲ, ಕಷ್ಟ ಕಾಲದಲ್ಲಿ ಹೂಡಿ ವಿಜಯಕುಮಾರ್ ಕಾರ್ಯಕರ್ತರ ಕೈ ಹಿಡಿದಿದ್ದಾರೆ. ನಾವುಗಳ ಅವರು ಕಷ್ಟದಲ್ಲಿ ಇರುವಾಗ ನಾವುಗಳು ಅವರಿಗೆ ಬೆನ್ನೆಲುಬಾಗಿ ನಿಲ್ಲಬೇಕು ಎಂಬ ನಿರ್ಣಯ ಕೈಗೊಳ್ಳಲಾಯಿತು.

ಮುಖಂಡರ ಜೊತೆಗೆ ಯುವ ಶಕ್ತಿ ಯಾವುದಕ್ಕೂ ಭಯಪಡದೆ ಇಂದಿನ ಹುಮ್ಮಸ್ಸು ಚುನಾವಣೆ ಕಡೆತನಕ ಇರಬೇಕು,ನಮಗೆ ಅನ್ಯಾಯ ಆಗಿರುವುದನ್ನು ಮತದಾರರಿಗೆ ತಿಳಿಸಿ ಹೂಡಿ ವಿಜಯಕುಮಾರ್ ರವರನ್ನು ಶಾಸಕರನ್ನಾಗಿ ಮಾಡಬೇಕು ಎಂದು ಸಭೆ ತೀರ್ಮಾನ ತೆಗೆದುಕೊಂಡಿತು.

ಭಾಷಣಗಳಿoದ ಪ್ರಯೋಜನ ಇಲ್ಲ , ಬೂತ್ ಗಳಲ್ಲಿ ಕೆಲಸ ಮಾಡಿ ಹೂಡಿ ವಿಜಯಕುಮಾರ್ ರವರನ್ನು ಗೆಲ್ಲಿಸುವ ಮೂಲಕ ನಗೆ ಚೆಲ್ಲೋಣ.ತಾತ್ಕಾಲಿಕವಾಗಿ ನೋವು ನೀಡಿದವರು ಮುಂದಿನ ದಿನಗಳಲ್ಲಿ ನಾಲ್ಕರಷ್ಟು ಅವರು ಅನುಭವಿಸುತ್ತಾರೆ ಎಂದು ತಿಳಿಸಿದರು.

ಸಭೆಯಲ್ಲಿ ಬಿ.ಜೆ.ಪಿ ಪಕ್ಷದ ಹನುಮಪ್ಪ, ಪ್ರಭಾಕರ್, ತಿಪ್ಪಣ್ಣ,ಚಂಬೆ ನಾರಾಯಣ ಗೌಡ ಬಿ.ಆರ್.ವೆಂಕಟೇಶ್, ರಾಮಮೂರ್ತಿ,ಹುಂಗೇನ ಹಳ್ಳಿ ವೆಂಕಟೇಶ್, ಮೋಹನ್ ಬಾಬು,ನಾಗಣ್ಣ, ಕೆಂಬೋಡಣ್ಣ, ಅಮರೇಶ್ ರೆಡ್ಡಿ, ದೇವರಾಜ ರೆಡ್ಡಿ,ಜಗಣ್ಣ, ಚಂದ್ರಣ್ಣ ಸೇರಿದಂತೆ ಸಾವಿರಾರು ಮುಖಂಡರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!