• Fri. Apr 19th, 2024

ಚಾಕರಸನಹಳ್ಳಿಯಲ್ಲಿ ಚಿಲಿಪಿಲಿ ಮಕ್ಕಳ ಬೇಸಿಗೆ ಶಿಬಿರ ಬೇಸಿಗೆಯಲ್ಲಿ ಮಕ್ಕಳ ಪ್ರತಿಭೆ ಹೆಚ್ಚಲು ಸಹಕಾರಿ-ಶಾಂತಮ್ಮ

PLACE YOUR AD HERE AT LOWEST PRICE

ಕೋಲಾರ ನಗರದ ರಂಗ ಇಂಚರ ಟ್ರಸ್ಟ್ , ಇಂಚರ ಸಾಹಿತ್ಯ ಕುಟೀರದ ವತಿಯಿಂದ ತಾಲ್ಲೂಕಿನ ಚಾಕರಸನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಿಲಿಪಿಲಿ ಮಕ್ಕಳ ಮೇಳ ಬೇಸಿಗೆ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಗಮನ ಮಹಿಳಾ ಒಕ್ಕೂಟದ ಮುಖ್ಯಸ್ಥೆ ಶಾಂತಮ್ಮ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳು ಬೇಸಿಗೆಯಲ್ಲಿ ಅನಾವಶ್ಯಕವಾಗಿ ತಿರುಗುವುದನ್ನು ಬಿಟ್ಟು ಇಂತಹ ಶಿಬಿರಗಳಲ್ಲಿ ಪಾಲ್ಗೊಂಡು ಪಠ್ಯ ವಸ್ತುವಿಗೆ ಭಿನ್ನವಾಗಿ ವಿಶೇಷ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕೆಂದು ಕರೆಯಿತ್ತರು.

ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ನಾಗರಾಜ್, ಎಲ್ಲಾ ಶಿಕ್ಷಕರು ರಜೆಗಳಲ್ಲಿ ಮನೆಗಳಲ್ಲಿದ್ದರೆ ಮುಖ್ಯ ಶಿಕ್ಷಕ ಡಾ.ಇಂಚರ ನಾರಾಯಣಸ್ವಾಮಿ ಮಾತ್ರ ಸುಮಾರು ೧೫ ವರ್ಷಗಳಿಂದ ತಾನಿರುವ ಶಾಲೆಗಳಲ್ಲಿ ಈ ರೀತಿಯಾದಂತಹ ಬೇಸಿಗೆ ಶಿಬಿರಗಳನ್ನು ಹಮ್ಮಿಕೊಂಡು ಮಕ್ಕಳಲ್ಲಿ ಇರುವಂತ ವಿಶೇಷ ಚೈತನ್ಯವನ್ನು ಗುರುತಿಸಿ ಜಿಲ್ಲಾ ಮಟ್ಟ ರಾಜ್ಯಮಟ್ಟಗಳಲ್ಲಿ ರಾಷ್ಟ್ರಮಟ್ಟದವರೆಗೂ ಮಕ್ಕಳನ್ನ ತೊಡಗಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.

ಇದೇ ಪ್ರಪ್ರಥಮವಾಗಿ ಚಾಕರಸನಹಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಈ ಬೇಸಿಗೆ ಶಿಬಿರದಲ್ಲಿ ಮಕ್ಕಳು ಶಿಬಿರದ ಉಪಯೋಗವನ್ನು ಪಡೆದುಕೊಂಡು ತಮ್ಮ ಕೌಶಲ್ಯವನ್ನು ಅಭಿವೃದ್ಧಿಪಡಿಸಿಕೊಳ್ಳಬೇಕೆಂದು ಕರೆಯಿತ್ತರು.

ಕರ್ನಾಟಕ ರಾಜ್ಯ ಶಿಕ್ಷಕರ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಬಿ.ಶಿವಕುಮಾರ್, ರಜೆಗಳಲ್ಲಿ ಮಕ್ಕಳಿಗೆ ಈ ರೀತಿಯಾದಂತಹ ಚಟುವಟಿಕೆಗಳು ಮರೀಚಿಕೆಯಾಗಿದ್ದು ರಂಗ ಇಂಚರ ಟ್ರಸ್ಟ್ ಇಂಚರ ಸಾಹಿತ್ಯ ಕುಟೀರ ಕೋಲಾರ ಇವರು ಹಮ್ಮಿಕೊಂಡಿರುವಂತ ಈ ಶಿಬಿರದಲ್ಲಿ ಚಟುವಟಿಕಾಧಾರಿತ ವಿಷಯಗಳನ್ನು ಮನನ ಮಾಡಿಕೊಂಡು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕಿವಿಮಾತನ್ನು ಹೇಳಿದರು

ಶಿಬಿರವನ್ನು ಕುರಿತು ಗ್ರಾಮದ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಮಂಜುನಾಥ್ ಮಾತನಾಡಿ, ನಿಜವಾಗಲೂ ನಮ್ಮ ಗ್ರಾಮದ ಮಕ್ಕಳು ಪುಣ್ಯ ಮಾಡಿದ್ದಾರೆಂದು ಭಾವಿಸುತ್ತಾ ಇದೇ ಮೊಟ್ಟ ಮೊದಲ ಬಾರಿಗೆ ಗ್ರಾಮದಲ್ಲಿ ಈ ರೀತಿಯಾದಂತ ಶಿಬಿರವನ್ನು ಹಮ್ಮಿಕೊಂಡಿರುವುದು ವಿಶೇಷವಾಗಿದೆ ಇದರ ಎಲ್ಲಾ ಸದುಪಯೋಗವನ್ನ ಮಕ್ಕಳು ಪಡೆದುಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ರಂಗ ಇಂಚರ ಟ್ರಸ್ಟ್ ಅಧ್ಯಕ್ಷ ಡಾ.ಇಂಚರ ನಾರಾಯಣಸ್ವಾಮಿ ಮಾತನಾಡಿ, ಸಂಸ್ಥೆಯು ಗ್ರಾಮೀಣ ಮಕ್ಕಳಿಗಾಗಿ ಇಂತಹ ಹತ್ತು ಹಲವಾರು ಚಟುವಟಿಕೆಗಳನ್ನು ಸುಮಾರು ೧೫ ವರ್ಷಗಳಿಂದ ಸಮಾಜಮುಖಿಯಾಗಿ ಕೆಲಸ ಮಾಡುತ್ತಾ ಬಂದಿದೆ ಎಂದರು.

ಕಾರ್ಯಕ್ರಮದಲ್ಲಿ ಶಿಕ್ಷಕರಾದ ಬಿ.ವಿ. ನಂಜುಂಡಪ್ಪ ಮತ್ತು ವೈ ವೆಂಕಟೇಶ್ ಮಕ್ಕಳನ್ನು ರಂಜಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಎನ್.ಜಿ.ಐಶ್ವರ್ಯ, ಎ.ಚಂದ್ರಶೇಖರ್, ಎನ್.ಸರಸ್ವತಿ ಕಾರ್ಯನಿರ್ವಹಿಸಿದರು.

 

Related Post

ಶೇ.೯೦ ರಷ್ಟು ದೇಶದ ಸಮುದಾಯಗಳು ಮುಖ್ಯವಾಹಿನಿ ಮಾದ್ಯಮಗಳಲ್ಲಿ, ಕಾರ್ಪೋರೇಟ್ ವಿಭಾಗದಲ್ಲಿ ಮತ್ತು ಅತ್ಯುನ್ನತ ಸರ್ಕಾರಿ ಹುದ್ದೆಗಳಲ್ಲಿ ಭಾಗವಹಿಸುವಿಕೆ ಇಲ್ಲ! : ರಾಹುಲ್ ಗಾಂಧಿ
ರಾಜಕೀಯ ಪಕ್ಷಗಳು ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಅನ್ಯಾಯ ಮಾಡಿವೆ : ಸಮುದಾಯ ಮುಖಂಡರ ಆಕ್ರೋಶ,
ಸಂವಿಧಾನ ಉಳಿಸಲು ದೇಶದ ಸಮಗ್ರತೆ ಕಾಪಾಡಲು ಬಿಜೆಪಿಯನ್ನು ಸೋಲಿಸಿ: ಮಂಜುನಾಥ್ ಅಣ್ಣಯ್ಯ

Leave a Reply

Your email address will not be published. Required fields are marked *

You missed

error: Content is protected !!