PLACE YOUR AD HERE AT LOWEST PRICE
ಬಂಗಾರಪೇಟೆ.ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಪರ ಚಿತ್ರನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಭರ್ಜರಿ ರೋಡ್ ಶೋ ಮೂಲಕ ಮತಯಾಚನೆ ಮಾಡಿದರು.
ದರ್ಶನ್‍ರನ್ನು ಕಣ್ತುಂಬಿಕೊಳ್ಳಲು ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು ದರ್ಶನ್ ಆಗಮಿಸುತ್ತಿದ್ದಂತೆ ನೂಕುನುಗ್ಗಲಿನಲ್ಲಿ ಅಭಿಮಾನಿಗಳು ಹುಚ್ಚೆದ್ದು ಕುಣಿದು ಕುಪ್ಪಳಿಸಿದರು.
ಮೇ 10ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಪರವಾಗಿ ಪಟ್ಟಣಲ್ಲಿ ಪ್ರಚಾರ ಮಾಡಲು ಹಮ್ಮಿಕೊಂಡಿದ್ದ ರೋಡ್ ಶೋನಲ್ಲಿ ಸಾವಿರಾರು ಸಂಖ್ಯೆಯಲ್ಲಿ ದರ್ಶನ್ ಅಭಿಮಾನಿಗಳು ಜಮಾಯಿಸಿದ್ದರು.
ಬೆಳಗ್ಗೆ 10ಗಂಟೆಗೆ ನಟ ದರ್ಶನ್ ಆಗಮಿಸುವರೆಂದು ಪ್ರಚಾರ ಮಾಡಲಾಗಿತ್ತು.ಆದರೆ ಅವರು ಬರುವಷ್ಟರಲ್ಲಿ ಒಂದು ಗಂಟೆಯಾಗಿತ್ತು.ಮೂರು ಗಂಟೆಗಳ ಕಾಲ ತಡವಾಗಿ ಬಂದರೂ ಅಭಿಮಾನಿಗಳು ಮಾತ್ರ ಸ್ಥಳದಿಂದ ಕಾಲ್ಕಿತ್ತದೆ ಬಿಸಿನಲ್ಲೆ ಎದುರು ನೋಡುತ್ತಿದ್ದರು.
ತೆರೆದ ವಾಹನದಲ್ಲಿ.ದರ್ಶನ್ ಬರುತ್ತಿದ್ದಂತೆ ಅಭಿಮಾನಿಗಳು ಪಟಾಕಿ ಸಿಡಿಸಿ ತಮ್ಮ ನೆಚ್ಚಿನ ನಟನ ಮೇಲೆ ಪುಷ್ಪಾಭಿಷೇಕ ಮಾಡಿದರು.ಸುಮಾರು ಎರಡು ಗಂಟೆಗಳ ಕಾಲ ನಡೆದ ರೋಡ್ ಶೋ ಉದ್ದಕ್ಕೂ ಪುಷ್ಪಾರ್ಚನೆ ಮಾಡಿ ತಮ್ಮ ಅಭಿಮಾನ ಪ್ರದರ್ಶಿಸಿದರು.
ದರ್ಶನ್ ರನ್ನು ನೋಡಲು ಯುವಕರು ಹಾಗೂ ಯುವತಿಯರು ಹೆಚ್ಚಾಗಿ ಪಾಲ್ಗೊಂಡಿದ್ದರು.ಬಜಾರ್ ರಸ್ತೆಯಲ್ಲಿ ದರ್ಶನ್ ರೋಡ್ ಶೋ ಬರುತ್ತಿದ್ದಂತೆ ಮನೆಗಳ,ಕಟ್ಟಡಗಳ ಮೇಲೆ ಮಹಿಳೆಯರು ಸೇರಿದಂತೆ ಅಭಿಮಾನಿಗಳು ಕಾಯುತ್ತಿದ್ದು ಕಂಡು ಬಂತು,.
ಕುವೆಂಪು ವೃತ್ತದಲ್ಲಿ ರೋಡ್ ಶೋ ಆಗಮಿಸುತ್ತಿದ್ದಂತೆ ಜನದಟ್ಟಣೆ ಹೆಚ್ಚಾಯಿತು,ಆಗ ಅಭಿಮಾನಿಗಳು ದರ್ಶನ್ ಮಾತನಾಡಲು ಒತ್ತಾಯಿಸಿದರು.ಆಗ ನಟ ದರ್ಶನ್ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿ ಬಂಗಾರಪೇಟೆ ಜನರ ಮನಸು ಬಂಗಾರದಂತಿದೆ ನಾನು ಹಲವು ಬಾರಿ ಪಟ್ಟಣಕ್ಕೆ ಬಂದು ಇಲ್ಲಿನ ಪಾನಿಪೂರಿ ಸವಿದು ಹೋಗಿರುವೆ ಆದರೆ ಯಾರಿಗೂ ಗೊತ್ತಾಗಿಲಿಲ್ಲ,
ಅಷ್ಟರ ಮಟ್ಟಿಗೆ ಇಲ್ಲಿನ ಪಾನಿಪೂರಿ ಪ್ರಸಿದ್ದವಾಗಿದೆ ಎಂದು ಹೊಗಳಿದರು.ಮೇ 10ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿರನ್ನು ಅತ್ಯಾಧಿಕ ಮತಗಳ ಅಂತರದಿಂದ ಜಯಶೀಲರನ್ನಾಗಿ ಮಾಡಿ ನಿಮ್ಮಗಳ ಸೇವೆ ಮಾಡಲು ಅವಕಾಶ ಕಲ್ಪಿಸಿಕೊಡಬೇಕು ಎಂದಷ್ಟೇ ಹೇಳಿ ತೆರಳಿದರು.
ರೋಡ್ ಶೋನಲ್ಲಿ ಬಿಜೆಪಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿ,ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ, ಮುಖಂಡರದ ಕೆ.ಚಂದ್ರಾರೆಡ್ಡಿ, ಬಿ.ವಿ.ಮಹೇಶ್, ಪಕ್ಷದ ತಾಲೂಕು ಅಧ್ಯಕ್ಷ ನಾಗೇಶ್ ಪುರಸಭೆ ಸದಸ್ಯ ಕಪಾಲಿಶಂಕರ್ ಮತ್ತಿತರರು ಇದ್ದರು.