ಬಂಗಾರಪೇಟೆ:ಕೆ.ಜಿ.ಎಫ್ ಎಸ್.ಪಿ ಡಾ.ಧರಣಿದೇವಿ ನೇತೃತ್ವದಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿ ಮತದಾರರಿಗೆ ಹಂಚಲು ಸಂಗ್ರಹಿಸಿದ್ದ 4 ಕೋಟಿ 5 ಲಕ್ಷ ರೂಪಾಯಿ ಹಣವನ್ನ ವಶಕ್ಕೆ ಪಡೆದಿದ್ದಾರೆ.
ಬಂಗಾರಪೇಟೆ ತಾಲ್ಲೂಕಿನ ಹಂಚಾಳ ಬಳಿ ಇರುವ ಜಿಯೋನ್ ಹಿಲ್ಸ್ ಗಾಲ್ಫ್ ರೆಸಾರ್ಟ್‌ನ ವಿಲ್ಲಾ ದಲ್ಲಿರಿಸಿದ್ದ ಕಂತೆ ಕಂತೆ ಹಣವನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಿ ರಮೇಶ್ ಯಾದವ್ ಅನ್ನೋರಿಗೆ ಸೇರಿದ ವಿಲ್ಲಾ ಎಂದು ತಿಳಿದುಬಂದಿದೆ.
ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಕೆಜಿಎಫ್ ಎಸ್ಪಿ ಡಾ.ಧರಣಿದೇವಿ ನೇತೃತ್ವದ ಬಂಗಾರಪೇಟೆ ಪೊಲೀಸ್ ಇನ್ಸಪೆಕ್ಟರ್ ಸಂಜೀವರಾಯಪ್ಪ ತಂಡ ದಾಳಿ ಮಾಡಿದ್ದಾರೆ. ಜಿಯೋನ್ ಹಿಲ್ಸ್ ಗಾಲ್ಫ್ ರೆಸಾರ್ಟ್ 279 ನಂಬರ್ ವಿಲ್ಲಾದಲ್ಲಿ ಪತ್ತೆಯಾದ ಹಣ ಮತದಾರರಿಗೆ ಹಂಚಲು ಸಂಗ್ರಹಿಸಿದ್ದು ಎನ್ನಲಾಗಿದೆ.
ಬಂಗಾರಪೇಟೆ ತಾಲ್ಲೂಕಿನಲ್ಲಿ ಪಂಚಾಯತಿ ವಾರು ಹೆಸರು ಬರೆದು ಬಂಡಲ್ ಮಾಡಿಟ್ಟಿದ್ದ ಹಣ ಇದಾಗಿತ್ತು. ದಾಳಿ ವಿಚಾರ ತಿಳಿಯುತ್ತಿದ್ದಂತೆ ಕಾರ್ ಬಿಟ್ಟು ಪರಾರಿಯಾಗಿರುವ ಮಾಲೀಕ ರಮೇಶ್ ಯಾದವ್ ತಪ್ಪಿಸಿಕೊಂಡಿದ್ದಾರೆ.
ಮೊದಲಿಗೆ ವಿಲ್ಲಾದಲ್ಲಿದ್ದ 2 ಕೋಟಿ 54 ಲಕ್ಷ ಹಾಗೂ ಕಾರ್‌ನ ಬೀಗ ಒಡೆದ ವೇಳೆ ಕಾರ್ ನಲ್ಲಿ ಮೂರು ಗೋಣಿ ಚೀಲದಲ್ಲಿದ್ದ ಒಂದುವರೆ ಕೋಟಿ ಹಣ ಪತ್ತೆಯಾಗಿದೆ. ಇದೇ ವೇಳೆ ಕಾಂಗ್ರೇಸ್ ಅಭ್ಯರ್ತೀಗೆ ಸೇರಿದ ಕಾರನಲ್ಲಿದ್ದ ಹಣವನ್ನೂ ವಶಕ್ಕೆ ಪಡೆಯಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ನೀತಿ ಸಂಹಿತೆ ಉಲ್ಲಂಘನೆಯಡಿ ವಿಲ್ಲಾ ಮಾಲೀಕ ರಮೇಶ್ ಯಾದವ್ ಮತ್ತು ಕಾಂಗ್ರೇಸ್ ಅಭ್ಯರ್ಥಿ ಎಸ್.ಎನ್.ನಾರಾಯಣಸ್ವಾಮಿರ ಮೇಲೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ ಎನ್ನಲಾಗಿದೆ.