• Mon. May 29th, 2023

ಬಂಗಾರಪೇಟೆ:ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮೂರನೆ ಬಾರಿ ಗೆದ್ದು ಹ್ಯಾಟ್ರಿಕ್ ಸಾಧನೆ ಮಾಡಿದ್ದು, ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ದಸಂದ ರಾಜ್ಯ ಸಂಘಟನಾ ಸಂಚಾಲಕ ಕಲಾವಿದ ಯಲ್ಲಪ್ಪ ಒತ್ತಾಯ ಮಾಡಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು 2023ರ ವಿಧಾನಸಭಾ ಚುನಾವಣೆಯಲ್ಲಿ ದಲಿತರು ಕೋಮುವಾದಿ ಬಿಜೆಪಿ ಪಕ್ಷದ ವಿರುದ್ಧ ಕಾಂಗ್ರೆಸ್ ಪಕ್ಷದ ಪರವಾಗಿ ಮತ ಚಲಾಯಿಸಿದ್ದಾರೆ, ಈ ಹಿನ್ನೆಲೆಯಲ್ಲಿ ಬಂಗಾರಪೇಟೆ ಮೀಸಲು ವಿಧಾನಸಭಾ ಕ್ಷೇತ್ರದ ಸೋಲಿಲ್ಲದ ಸರದಾರ ಎಸ್.ಎನ್.ನಾರಾಯಣಸ್ವಾಮಿ ರವರಿಗೆ ಸಚಿವ ಸ್ಥಾನವನ್ನು ನೀಡಬೇಕಾಗಿತ್ತು.

ಆದರೆ ಕಾಂಗ್ರೆಸ್ ಪಕ್ಷದ ವರಿಷ್ಠ ನಾಯಕರು ಮೀನಾ ಮೇಷ ಎನಿಸುತ್ತಿರುವುದು ಸಮಂಜಸವಲ್ಲ, ಸಚಿವ ಸ್ಥಾನ ನೀಡದೆ ಹೋದರೆ ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಲೋಕಸಭಾ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದೇವೆ ಎಂದು ಕಲಾವಿದ ಯಲ್ಲಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ 135 ಸ್ಥಾನಗಳನ್ನು ಪಡೆಯುವುದರೊಂದಿಗೆ ಸ್ಪಷ್ಟ ಬಹುಮತ ಪಡೆದಿದೆ, ಇದಕ್ಕೆ ಕಾರಣ ದಲಿತ ಪರ ಸಂಘಟನೆಗಳು ಪ್ರಗತಿಪರ ಚಿಂತಕರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲವಾಗಿ ನಿಂತು ಕಾಯ ವಾಚ ಮನಸ ಶ್ರಮಿಸಿರುವುದು.

ಕೋಲಾರ ಜಿಲ್ಲೆಯ ರಾಜಕೀಯ ಚಿತ್ರಣವನ್ನು ಅವಲೋಕಿಸಿ ನೋಡಿದಾಗ ದಲಿತರೆ ಹೆಚ್ಚಾಗಿದ್ದು 4 ಸ್ಥಾನಗಳನ್ನು ಕಾಂಗ್ರೆಸ್ ಪಕ್ಷಕ್ಕೆ ಗೆಲ್ಲಿಸಿ ಕೊಟ್ಟಿದ್ದೇವೆ ಆದರೆ ಕಾಂಗ್ರೆಸ್ ಪಕ್ಷದ ವರಿಷ್ಠ ನಾಯಕರು ದಲಿತ ಸಮುದಾಯದ ಶಾಸಕರಿಗೆ ಸಚಿವ ಸ್ಥಾನ ನೀಡಲು ಮೀನಾ ಮೇಷ ಎಸಗುತ್ತಿರುವುದು ಅತ್ಯಂತ ಖಂಡನೀಯ ಎಂದಿದ್ದಾರೆ.

ಬಂಗಾರಪೇಟೆ ವಿಧಾನಸಭಾ ಮೀಸಲು ಕ್ಷೇತ್ರದಲ್ಲಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರು ಸತತ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು ಇಡೀ ಕ್ಷೇತ್ರವನ್ನ ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಆದರೆ ಪ್ರಸಕ್ತ ನಡೆದ ಚುನಾವಣೆಯಲ್ಲಿ ಅನೇಕ ಹಿರಿಯ ಕಾಂಗ್ರೆಸ್ ನಾಯಕರ ಸ್ವಾರ್ಥ ಅಧಿಕಾರದ ವ್ಯಾಮೋಹದಿಂದ ಪಕ್ಷವನ್ನು ತ್ಯಜಿಸಿದ್ದರು.

ವಿರೋಧ ಪಕ್ಷದವರು ಇದನ್ನು ಬಂಡವಾಳನ್ನಾಗಿಸಿಕೊಂಡು ಶಾಸಕರ ವಿರುದ್ಧ ಅನೇಕ ನಿರಾಧಾರ ಆರೋಪಗಳ ಸುರಿಮಳೆಗಳನ್ನು ಗೈದರು. ಜೆಡಿಎಸ್ ಬಿಜೆಪಿ ಆಂತರಿಕ ಒಳ ಒಪ್ಪಂದ ಮಾಡಿಕೊಂಡು ಅನೈತಿಕ ರಾಜಕಾರಣಕ್ಕೆ ವೇದಿಕೆ ನಿರ್ಮಿಸಿದ್ದರು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಬಹು ಸಂಖ್ಯಾತ ದಲಿತ ವರ್ಗ ಶಾಸಕರ ಕೈಹಿಡಿದು ಮೂರನೇ ಬಾರಿಗೆ ಜಯ ಸಾಧಿಸಲು ಸಹಕರಿಸಿದರು ಎಂದಿದ್ದಾರೆ.

ಜಿಲ್ಲೆಯಲ್ಲಿ ಗೆದ್ದವರು ಇತರೆ ಶಾಸಕರಿಗಿಂತ ಎಸ್.ಎನ್‌ನಾರಾಯಣಸ್ವಾಮಿ ಅವರು ಅತ್ಯಂತ ಹಿರಿಯ ರಾಜಕಾರಣಿ ಹಾಗೂ ಹ್ಯಾಟ್ರಿಕ್ ಜಯ ಸಾಧಿಸಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಈ ಬಾರಿ ಎಸ್.ಎನ್.ನಾರಾಯಣಸ್ವಾಮಿಯವರಿಗೆ ಮೊದಲ ಪಟ್ಟಿಯಲ್ಲಿ ಸಚಿವ ಸ್ಥಾನ ಸಿಗುತ್ತದೆ ಎಂಬ ಆಶಾ ಭಾವನೆಯಿಂದ ಕ್ಷೇತ್ರದ ಜನ ಕಾಯುತ್ತಿದ್ದರು, ಆದರೆ ನಮ್ಮ ಭಾವನೆಗೆ ಕಾಗ್ರೆಸ್ ಪಕ್ಷ ಧಕ್ಕೆ ತಂದಿದೆ.

ದಯವಿಟ್ಟು ಮುಖ್ಯಮಂತ್ರಿಗಳು ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಸಿಎಂ ಡಿ.ಕೆ.ಶಿವಕುಮಾರ್ ಸಾಹೇಬರು ಆದಷ್ಟು ಬೇಗ ಒಮ್ಮತ ತೀರ್ಮಾನಕ್ಕೆ ಬಂದು ಎಸ್.ಎನ್.ನಾರಾಯಣಸ್ವಾಮಿರಿಗೆ ಸಚಿವ ಸ್ಥಾನ ಕಲ್ಪಿಸಿ ಕೊಡಬೇಕು ಇಲ್ಲವಾದಲ್ಲಿ ದಲಿತ ಪರ ಪ್ರಗತಿ ಪರ ಚಿಂತಕರು ಹೋರಾಟಗಾರರು ಸಭೆ ಕರೆದು ಸ್ಥಳೀಯ ಚುನಾವಣೆ ಲೋಕಸಭಾ ಚುನಾವಣೆ ತಕ್ಕ ಉತ್ತರ ನೀಡುತ್ತವೆ ಎಂದು ಅವರು ಎಚ್ಚರಿಸಿದ್ದಾರೆ.

Leave a Reply

Your email address will not be published. Required fields are marked *

You missed

error: Content is protected !!