• Thu. Sep 28th, 2023

PLACE YOUR AD HERE AT LOWEST PRICE

ಬಂಗಾರಪೇಟೆ:ಶಾಸಕರು ಕ್ಷೇತ್ರದ ಶಕ್ತಿಯಾಗಿ ಸದಾಕಾಲ ಜನರ ಒಡನಾಡಿಯಾಗಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ ದಣಿವರಿಯದ ನಾಯಕ, ಇವರಿಗೆ ಕ್ಷೇತ್ರದ ಸಮಸ್ತ ಜನತೆಯ ಪರವಾಗಿ 56ನೇ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಎಂದು ಕಾಂಗ್ರೆಸ್ ಯುವ ಘಟಕದ ಕಾರ್ಯದರ್ಶಿ ವಿ. ಹರೀಶ್ ರವರು ಶುಭಕೋರಿದರು.

ಪಟ್ಟಣದ ಸಾರ್ವಜನಿಕ ಬಸ್ ನಿಲ್ದಾಣದ ಸಮೀಪದಲ್ಲಿ ಸಮಾಜ ಸೇವಕ ಎಳನೀರು ವೆಂಕಟೇಶ್ ಹಾಗು ಯುವ ಕಾಂಗ್ರೆಸ್ ಘಟಕದ ಕಾರ್ಯದರ್ಶಿ ವಿ. ಹರೀಶ್ ರವರ ನೇತೃತ್ವದಲ್ಲಿ ಎಸ್. ಎನ್. ನಾರಾಯಣಸ್ವಾಮಿ ರವರ ಜನ್ಮದಿನದ ಪ್ರಯುಕ್ತ ಸಾರ್ವಜನಿಕರಿಗೆ ಬಿರಿಯಾನಿ ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಾಸಕರು ಸೇವಾ ಮನೋಭಾವದ ಮೂಲಕ ಜನರ ಅಭಿಪ್ರಾಯ ಆಲೋಚನೆ ಆಶೋತ್ತರಗಳಿಗೆ ಬದ್ಧನಾಗಿ ಸೇವಕನ ರೂಪದಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆಯ ತಳಹದಿಯ ಮೇಲೆ ನಿಷ್ಪಕ್ಷಪಾತವಾಗಿ ಕೆಲಸ ಮಾಡುತ್ತಿದ್ದಾರೆ. ಶಾಸಕರು  3 ಬಾರಿ ಶಾಸಕರಾಗಿ ಕೋಲಾರ ಜಿಲ್ಲೆಯ ಇತಿಹಾಸದಲ್ಲಿ ಹೊಸ ಮನ್ಮಂತರ ಸೃಷ್ಟಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಅನೇಕ ಹಿರಿಯ ನಾಯಕರು ಪಕ್ಷ ಬಿಟ್ಟು ಹೋದಂತಹ ಸಂದರ್ಭದಲ್ಲಿ ಎಲ್ಲಾ ಕಾರ್ಯಕರ್ತರಲ್ಲಿ ಧೈರ್ಯ ತುಂಬಿ ಪಕ್ಷ ಸಂಘಟಿಸುವುದರ ಮೂಲಕ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ, ಇವರ ಕಠಿಣ ಪರಿಶ್ರಮದಿಂದ ಕ್ಷೇತ್ರದಲ್ಲಿ ಅನೇಕ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಿದೆ.

ಸದಾ ಕ್ಷೇತ್ರದ ಅಭಿವೃದ್ಧಿಗೆ ದುಡಿಯುತ್ತಾ ಜನಾನುರಾಗಿಯಾಗಿರುವ ಜನಮೆಚ್ಚಿದ ಇವರ ಸೇವಾ ಕಾರ್ಯ ವೈಕರಿಯನ್ನು ವರಿಷ್ಠ ನಾಯಕರು ಪರಿಗಣಿಸಿ ಮೂರನೆ ಬಾರಿ ಗೆದ್ದು ಹ್ಯಾಟ್ರಿಕ್ ಸಾಧಿಸಿರುವ ಇವರನ್ನು ಎರಡನೇ ಅವಧಿಗೆ ಸಚಿವರನ್ನಾಗಿ ಮಾಡಬೇಕು ಎಂದು ಆಗ್ರಹಿಸಿದರು .

ಈ ಸಂದರ್ಭದಲ್ಲಿ ಎನ್.ಎಸ್. ಯು. ಐ. ಅಧ್ಯಕ್ಷ ಮುತ್ತು, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ಎಂ. ಹರೀಶ್ ಕುಮಾರ್, ಪುರಸಭಾ ಮಾಜಿ ಉಪಾಧ್ಯಕ್ಷೆ ಶಾರದಾ ವಿವೇಕಾನಂದ, ಮುಖಂಡರಾದ ಚಿನ್ನ, ದಯಾ, ಜಬಿವುಲ್ಲಾ, ಶಫಿವುಲ್ಲ, ಹರೀಶ್, ಇತರರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

You missed

error: Content is protected !!